ರಾಷ್ಟ್ರೀಯ ಹಿಂದಿ ದಿವಸ ಆಚರಣೆ
ಇಂಡಿ: ಹಿಂದಿ ದಿವಸ ಎಂದು ಜನಪ್ರೀಯವಾಗಿ ಕರೆಯಲ್ಪಡುವ ರಾಷ್ಟ್ರೀಯ ಹಿಂದಿ ದಿನವು ಭಾರತದಾದ್ಯಂತ ಸೆಪ್ಟೆಂಬರ್ 14 ರಂದು ನಡೆಯುವ ವಾರ್ಷಿಕ ಆಚರಣೆಯಾಗಿದೆ. ಹಿಂದಿ ಭಾಷೆಯನ್ನು ಗೌರವಿಸುವ ಮತ್ತು ಉತ್ತೇಜಿಸುವ ನಿಣಾ೯ಯಕ ದಿನವೆಂದು ಗುರುತಿಸಲ್ಪಟ್ಟ ಈ ರಾಷ್ಟ್ರೀಯ ಕಾರ್ಯಕ್ರಮವು 1949 ರಲ್ಲಿ ಭಾರತದ ಅಧಿಕೃತ ಭಾಷೆಗಳಲ್ಲಿ ಒಂದಾಗಿ ಹಿಂದಿಯನ್ನು ಐತಿಹಾಸಿಕವಾಗಿ ಅಳವಡಿಸಿಕೊಂಡಿದ್ದನ್ನು ಸ್ಮರಿಸುತ್ತದೆ ಎಂದು ವಿಜಯಪುರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಹಿಂದಿ ಉಪನ್ಯಾಸಕಿ ಡಾ. ಮಹಾದೇವಿ ಸುಂಗಾರೆ ಹೇಳಿದರು.
ಪಟ್ಟಣದ ಶ್ರೀ ಶಾಂತೇಶ್ವರ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ “ರಾಷ್ಟ್ರೀಯ ಹಿಂದಿ ದಿವಸ” ಹಾಗೂ ರಾಷ್ಟ್ರೀಯ ಭಾವೈಕ್ಯತೆ, ರಾಷ್ಟ್ರಧ್ವಜ ಕುರಿತಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಉಪನ್ಯಾಸಕರಾಗಿ ಆಗಮಿಸಿದ ಭಾರತ ಸೇವಾದಳದ ವಲಯ ಸಂಘಟಕ ನಾಗೇಶ ಡೋಣೂರ ಅವರು ರಾಷ್ಟ್ರೀಯ ಭಾವೈಕ್ಯತೆ,ನೈತಿಕ ಮೌಲ್ಯಗಳು ಹಾಗೂ ರಾಷ್ಟ್ರಧ್ವಜದ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀ ಶಾಂತೇಶ್ವರ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ನೀಲಕಂಠಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಕಾಲೇಜಿನ ಪ್ರಾಂಶುಪಾಲರಾದ ಆರ್ ಎಸ್ ಬಿರಾದಾರ, ಉಪನ್ಯಾಸಕರಾದ ಆರ್,ಜಿ,ಪೂಜಾರಿ, ಫರಾಹರಬ್ಬಾನಿ ಮನಗೂಳಿ, ನಿವೃತ್ತ ಪ್ರಾಂಶುಪಾಲ ಎ,ಬಿ,ಪಾಟೀಲ್, ಎಸ್,ಆರ್,ಪ,ಪೂ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ಮಹೇಶ್ ಮೇಡೆಗಾರ, ಇನ್ನೂ ಹಲವರು ಉಪಸ್ಥಿತರಿದ್ದರು. ಹಿಂದಿ ಉಪನ್ಯಾಸಕ ಹಾಗೂ ಭಾರತ ಸೇವಾದಳ ಘಟಕದ ಮೇಲ್ವಿಚಾರಕರಾದ ವಿಜಯಕುಮಾರ್ ರಾಠೋಡ ಸ್ವಾಗತಿಸಿದರು. ವಿದ್ಯಾರ್ಥಿನಿ ಐಶ್ವರ್ಯ ಹಿರೇಕುರುಬರ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಉಪನ್ಯಾಸಕರಾದ ಎಸ್,ಬಿ,ಹಡಪದ ವಂದಿಸಿದರು.