ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ
ಬಸವನಬಾಗೇವಾಡಿ : ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಇವರ ಅಭಿವೃದ್ಧಿ ಪರ ಕಾರ್ಯ ಮೆಚ್ಚಿ ಮನಗೂಳಿ ಭಾಗದ ಜೆಡಿಎಸ್ ಅನೇಕ ಮುಖಂಡರು, ನೂರಾರು ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾದರು.
ವಿಜಯಪುರ ನಗರದಲ್ಲಿರುವ ಸಚಿವರಾದ ಶಿವಾನಂದ ಪಾಟೀಲ ಅವರ ಗೃಹ ಕಛೇರಿಯಲ್ಲಿ ಸಚಿವರನ್ನು ಭೇಟಿ ಮಾಡಿದ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಐಚ್ಛಾವರ ತಾಂಡಾದ ನೂರಾರು ಜನರು ಸಚಿವರ ಅಭಿವೃದ್ಧಿ ಪರ ಕಾರ್ಯಕ್ರಮಗಳನ್ನು ಮೆಚ್ಚಿ ಅಭಿನಂಸಿದರು.
ಅಲ್ಲದೇ ಜೆಡಿಎಸ್ ಪಕ್ಷ ತೊರೆದ ಉ ಕಾಂಗ್ರೆಸ್ ಸೇರ್ಪಡೆಯಾದ ಮುಖಂಡರು, ಕಾರ್ಯಕರ್ತರನ್ನು ಪಕ್ಷದ ಶಾಲು ಹೊದಿಸಿ ಸಚಿವ ಶಿವಾನಂದ ಪಾಟೀಲ ಅವರು ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಪ್ರವೀಣ ವಾಲು ರಾಠೋಡ, ರೇಖು ನಾರಾಯಣ ರಾಠೋಡ, ಬಾಸು ನಾರಾಯಣ ರಾಠೋಡ, ಚಂದು ಶಂಕರ ಚವ್ಹಾಣ, ರಮೇಶ ರೇಖು ರಾಠೋಡ, ಸಂತೋಷ ರೇಖು ರಾಠೋಡ, ರಾಜು ಬಾಸು ರಾಠೋಡ, ಸಂತೋಷ ಚಂದು ಚವ್ಹಾಣ, ರವಿ ಚಂದು ಚವ್ಹಾಣ, ವಾಲು ರೇಖು ರಾಠೋಡ, ಕಾಂತು ಕೇಸು ರಾಠೋಡ, ಸುರೇಶ ರೇಖು ರಾಠೋಡ, ಸುರೇಶ ಕೇಸು ರಾಠೋಡ, ಪ್ರವೀಣ ಸಂತೋಷ ಚವ್ಹಾಣ, ಅರ್ಜುನ ಪ್ರಕಾಶ ರಾಠೋಡ, ಅರ್ಜುನ ಶಂಕರ ಪವಾರ, ರಾಹುಲ್ ವಾಲು ರಾಠೋಡ, ಪ್ರಕಾಶ ರೇಖು ರಾಠೋಡ, ಗಣೇಶ ವಿಠ್ಠಲ ರಾಠೋಡ, ಶೇಖರ ವಿಠ್ಠಲ ರಾಠೋಡ ಸೇರಿದಂತೆ ಇತರರು ಉಪಸ್ಥಿತರಿದ್ದರು.