ಸೆ- 14 ರಂದು ಶ್ರೀ ಹಾದಿ ಜಟ್ಟಿಂಗೇಶ್ವರ ಅದ್ದೂರಿ ಜಾತ್ರಾ ಮಹೋತ್ಸವ
ಇಂಡಿ : ಸೆ- 14 ರಂದು ಶ್ರೀ ಹಾದಿ ಜಟ್ಟಿಂಗೇಶ್ವರ ಅದ್ದೂರಿ ಜಾತ್ರಾ ಮಹೋತ್ಸವ ಜರುಗುತ್ತದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದರ್ಶನ ಪಡೆಯಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಜಾತ್ರಾ ಕಮೀಟಿಯವರು ತಿಳಿಸಿದ್ದಾರೆ.
ತಾಲೂಕಿನ ಹಿರೇರೂಗಿ ಗ್ರಾಮದ ಬೆಳ್ಳ ಹಳ್ಳದ ವಸ್ತಿ ಹತ್ತೀರುವ ಇರುವ ಶ್ರೀ ಹಾದಿ ಜಟ್ಟಿಂಗೇಶ್ವರ ಜಾತ್ರಾ ಮಹೋತ್ಸವ ಸೆ-14 ರಂದು ವಿವಿಧ ಸಾಂಸ್ಕೃತಿಕ ಕಾರ್ಯಮಗಳೊಂದಿಗೆ ನಡೆಯುತ್ತದೆ. ಸೆ- 13 ರಂದು ಗ್ರಾಮದ ಜಟ್ಟಿಂಗೇಶ್ವರ ಪಲ್ಲಕ್ಕಿ ದೇವಸ್ಥಾನಕ್ಕೆ ಆಗಮಿಸಿ ಹೂವಿನ ಅಲಂಕಾರದಲ್ಲಿ ಕೂರುತ್ತಾನೆ. ತದನಂತರ ಸೆ- 14 ರಂದು ಪ್ರಸಿದ್ಧ ಡೊಳ್ಳು ಕುಣಿತ ಹಾಗೂ ಇತರೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತದೆ. ಅದಲ್ಲದೇ ಆಗಮಿಸಿದ ಭಕ್ತಾದಿಗಳಿಗೆ ಅನ್ನಪ್ರಸಾದ ಇರುತ್ತದೆ. ಅದನ್ನು ಸ್ವೀಕಾರ ಮಾಡಬೇಕು. ಮತ್ತು ಅದೇ ದಿನ ರಾತ್ರಿ 8 ಘಂಟೆಯಿಂದ ನಾಡಿನ ಸುಪ್ರಸಿದ್ಧ ಗಾಯಕರಿಂದ ಡಪ್ಪಿನ (ಡೊಳ್ಳಿನ) ಪದ ಜರುಗುತ್ತವೆ.
ರೇಣುಕಾದೇವಿ ಗಾಯನ ಸಂಘ ಮಣ್ಣೂರು,ಮುಖ್ಯ ಗಾಯಕಿ ರೇಣುಕಾ ಮಣ್ಣೂರ ಅವರ ನೇತೃತ್ವದಲ್ಲಿ ಹಾಗೂ ಈ ಭಾಗದ ಸುಪ್ರಸಿದ್ಧ ಶ್ರೀ ಜಟ್ಟಿಂಗೇಶ್ವರ ಗಾಯನ ಸಂಘ ಹಿರೇರೂಗಿ,ಮುಖ್ಯ ಗಾಯಕ ಜಟ್ಟಪ್ಪ ಸಾಲೋಟಗಿ ಅವರ ನೇತೃತ್ವದಲ್ಲಿ ಡೊಳ್ಳಿನ ಪದ ಜರುಗುತ್ತವೆ ಎಂದು ತಿಳಿಸಿದರು.
ಇನ್ನೂ ಈ ಕಾರ್ಯಕ್ರಮಕ್ಕೆ ಷ.ಬ್ರ. ಮುರುಗೇಂದ್ರ ಶಿವಾಚಾರ್ಯರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ. ಆಶೀರ್ವಚನ ನೀಡಲಿದ್ದಾರೆ. ಪಾವನ ಸಾನಿಧ್ಯ ಶ್ರೀ ಶ್ರೀ ಶ್ರೀ. ಪುಂಡಲಿಂಗ ಶಿವಯೋಗಿಗಳು, ಗೊಳಸಾರ ಮಠ ವಹಿಸಲಿದ್ದಾರೆ . ಉದ್ಘಾಟಕರಾಗಿ ಶಾಸಕ ಯಶವಂತರಾಯಗೌಡ ಪಾಟೀಲ ಆಗಮಿಸಲಿದ್ದಾರೆ. ಹಿರೇರೂಗಿ ಗ್ರಾಮ ಪಂಚಾಯತಿ ಅಧ್ಯಕ್ಷ ಹಾಗೂ ಸರ್ವ ಸದಸ್ಯರು, ಪಿಕೆಪಿಎಸ್ಸಿ ಅಧ್ಯಕ್ಷ ಸದಸ್ಯರು ವೇದಿಕೆ ಹಂಚಿಕೊಳ್ಳಲಿದ್ದಾರೆ. ಗ್ರಾಮದ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಹಾದಿ ಜಟ್ಟಿಂಗೇಶ್ವರನ ಕೃಪೆಗೆ ಪಾತ್ರರಾಗಬೇಕು ಎಂದು ತಿಳಿಸಿದ್ದಾರೆ.