ಸಾಧನೆ ಮಾಡಲು ಬಡತನ ಅಡ್ಡಿಯಾಗುವುದಿಲ್ಲ : ನಾಗೇಶ ಹೆಗಡ್ಯಾಳ
ಇಂಡಿ : 19 ವರ್ಷದೊಳಗಿನ ಕರ್ನಾಟಕ ರಾಜ್ಯದ ಮಹಿಳಾ ಟೆನ್ನಿಸ್ ಬಾಲ್ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ಇಂಡಿ ತಾಲೂಕಿನ ಆಳೂರ ಗ್ರಾಮದ ಯುವತಿ ಕೋಮಲ್ ಮಲ್ಲೇಶ್ ಚವ್ಹಾಣ ಅವರನ್ನು ನಗರದ ಸರ್ವಜ್ಞ ಕರಿಯರ್ ಅಕಾಡೆಮಯಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸರ್ವಜ್ಞ ಕರಿಯರ್ ಅಕಾಡೆಮಿಯ ಅಧ್ಯಕ್ಷರಾದ ನಾಗೇಶ ಹೆಗಡ್ಯಾಳ ಮಾತನಾಡಿ, “ಸಾಧನೆ ಮಾಡಲು ಬಡತನ ಅಡ್ಡಿಯಾಗುವುದಿಲ್ಲ.” ಸ್ಪಷ್ಟವಾದ ಗುರಿ, ನಿರಂತರ ಪ್ರಯತ್ನ, ನಮ್ಮನ್ನು ಸಾಧಕರನ್ನಾಗಿಸುತ್ತದೆ. ಪ್ರಾಥಮಿಕ ಶಾಲಾ ಹಂತದಿಂದ ಮಕ್ಕಳಿಗೆ ಮಾರ್ಗದರ್ಶನ ಮಾಡಿದರೆ ಕ್ರೀಡೆಯಲ್ಲಿ ದೇಶಕ್ಕೆ ಕೀರ್ತಿ ತಾರುತ್ತಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಮ್. ಎನ್. ಕೋಳೆಕರ್, ಶಿವಾನಂದ ಕವಲಗಿ, ಸಾಗರ ಚವ್ಹಾಣ, ಗಂಗಾಧರ್ ಮರಗೂರ್, ಯೋಗೇಶ್ ಬಿರಾದಾರ, ನಾಗರಾಜ್ ಪರೀಟ್, ಸಾಗರ ಗಂಗನಳ್ಳಿ, ಆಕಾಶ ಬಿರಾದಾರ ಹಾಗೂ ಸ್ಪರ್ಧಾರ್ಥಿಗಳು ಹಾಜರಿದ್ದರು.