ಭವಿಷ್ಯದ ಪ್ರಜೆಗಳ ಉಜ್ವಲ ಭವಿಷ್ಯಕ್ಕೆ ಬುನಾದಿ ಹಾಕುವ ಮಹತ್ವದ ಕರ್ತವ್ಯ ನಿರ್ವಹಿಸುವ ಶಿಕ್ಷಕನ ಪಾತ್ರ ಬಹುಮುಖ್ಯವಾಗಿದೆ.
ಮಕ್ಕಳ ಪ್ರತಿಭೆಗೆ ತಕ್ಕಂತೆ ಶಿಕ್ಷಣ ನೀಡುವಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ಶಿಕ್ಷಕರು ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳೆಂದು ಭಾವಿಸಿ ಶಿಕ್ಷಣ ಜತೆಗೆ ಮಾನವೀಯ ಮೌಲ್ಯಗಳನ್ನು ಬಿತ್ತುವ ಕೆಲಸ ಮಾಡಬೇಕಿದೆ. ಭವಿಷ್ಯದ ಪ್ರಜೆಗಳ ಉಜ್ವಲ ಭವಿಷ್ಯಕ್ಕೆ ಬುನಾದಿ ಹಾಕುವ ಮಹತ್ವದ ಕರ್ತವ್ಯ ನಿರ್ವಹಿಸುವ ಶಿಕ್ಷಕನ ಪಾತ್ರ ಬಹುಮುಖ್ಯವಾಗಿದೆ.
ಎಂದು ಕೆಎಸ್‌ಡಿಎಲ್ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್. ನಾಡಗೌಡ(ಅಪ್ಪಾಜಿ) ಹೇಳಿದರು.
ಇಲ್ಲಿನ ಟಾಪ್ ಇನ್ ಟೌನ್ ಮಂಗಲ ಭವನದಲ್ಲಿ ಜಿಪಂ, ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ, ತಾಲೂಕು ಕ್ಷೇತ್ರ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನ ಕಾರ್ಯಕ್ರಮ, ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದ, ಶಿಕ್ಷಣದಲ್ಲಿ ಅಗಾಧವಾದ ಶಕ್ತಿಯಿದ್ದು, ವಿದ್ಯೆ ಮತ್ತು ಜ್ಞಾನದಿಂದ ಸಮಾನತೆಗಾಗಿ ಮಾತ್ರ ಸಾಧ್ಯ ಎಂಬುದನ್ನು ಅರಿತು ಎಂಟನೂರು ವರ್ಷಗಳ ಹಿಂದೆ ಬಸವಣ್ಣನವರು ವಚನ ಸಾಹಿತ್ಯದ ಕ್ರಾಂತಿಯನ್ನೇ ಮಾಡಿದರು. ಮಕ್ಕಳ ಪ್ರತಿಭೆಗೆ ತಕ್ಕಂತೆ ಶಿಕ್ಷಣ ನೀಡುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಬಡವರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು, ಎಲ್ಲ ಮಕ್ಕಳಿಗೆ ಉತ್ತಮ ಗುಣಮಟ್ಟ ಶಿಕ್ಷಣ ಸಿಗಬೇಕು ಎಂಬ ಸದುದ್ದೇಶದಿಂದ ಸರ್ಕಾರ ಪಠ್ಯ ಪುಸ್ತಗಳು, ಸಮವಸ್ತ್ರ ನೀಡುವುದು, ಮಧ್ಯಾಹ್ನದ ಬಿಸಿಯೂಟ ಊಟ ವ್ಯವಸ್ಥೆ ಸೇರಿ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದೆ.
ಶಿಕ್ಷಕರು ರಾಜಕೀಯದವರಷ್ಟೆ ಪ್ರಬಲರಾಗಿದ್ದಾರೆ. ಯಾರನ್ನೂ ಬೇಕಾದರೂ ಮೇಲೇರಿಸಲು, ಯಾರನ್ನೂ ಬೇಕಾದರೂ ಕೆಳಗಿಳಿಸುವಷ್ಟು ಬಲಿಷ್ಠರಾಗಿದ್ದಾರೆ. ಈ ನಡೆ ಶಿಕ್ಷಣದ ಮೇಲೆ ಪರಿಣಾಮ ಬೀರಲಿದ್ದು, ಸರ್ಕಾರಿ ಶಾಲೆಗಳ ದುಸ್ಥಿಗೆ ಕಾರಣವಾಗಲಿದೆ.
ಕಳೆದ ಎರಡೂರು ವರ್ಷಗಳಿಂದಎಸ್‌ಎಸ್ಎಲ್‌ಸಿವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷಾಫಲಿತಾಂಶದಲ್ಲಿ ಕುಂಠಿತಗೊಂಡಿರುವುದು ನೋವಿನ ಸಂಗತಿ. ಈಗಲೇ ಇದನ್ನು ಸರಿಪಡಿಸುವ ಮೂಲಕ ಮಕ್ಕಳು ನಕಲು ಮುಕ್ತ ಪರೀಕ್ಷೆ ಎದುರಿಸುವಂತಾಗಬೇಕಿದ್ದು, ತಾಲೂಕು ಶಿಕ್ಷಣ ದಲ್ಲಿ ಸಾಧನೆ ಮಾಡಲು ಸಾಧ್ಯವಾಗಲಿದೆ. ತಾಲೂಕಿನಲ್ಲಿ ಶಿಕ್ಷಕರ ಭವನ ನಿರ್ಮಿಸಬೇಕೆಂಬ ಬೇಡಿಕೆ ಇದೆ. ಜಾಗೆ ಯನ್ನು ಗುರ್ತಿಸಿ ಶೀಘ್ರ ಪಟ್ಟಣದಲ್ಲಿ ಸುಸಜ್ಜಿತ ಶಿಕ್ಷಕರ ಭವನ ನಿರ್ಮಿಸುವುದಾಗಿ ಭರವಸೆಯನ್ನು ನೀಡಲಾಯಿತು. ಇದೇ ವೇಳೆ ಸಹಶಿಕ್ಷಕ ಬಿ.ಎಸ್.ಹಂಚಲಿ ವಿಶೇಷ ಉಪನ್ಯಾಸ ನೀಡಿದರು.
ಈ ವೇಳೆ 2023-24ರ ಎಸ್ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಪ್ರಭುದೇವ ರಾಠೋಡ, ಸುನೀಲ ಕುಂಬಾರ, ಸಿದ್ದನಗೌಡ ಬಿರಾದಾರ ಅವರಿಗೆ ಉಚಿತ ಲ್ಯಾಪ್ ಟಾಪ್ ವಿತರಿಸಿದರು.
ಇದೇ ವೇಳೆ 87 ನಿವೃತ್ತಿ ಒಂದಿದೆ ಶಿಕ್ಷಕರನ್ನು ಗೌರವ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ತಾಳಿಕೋಟಿ ತಹಸೀಲ್ದಾರ್ ವಿನಯಾ ಹೂಗಾರ, ತಾಪಂ ಇಒ ವೆಂಕಟೇಶ ವಂದಾಲ, ಪ್ರಾಸ್ತಾವಿಕ ನುಡಿ ಬಿಇಒ ಬಿ.ಎಸ್. ಸಾವಳಗಿ, ಕ್ಷೇತ್ರ ಸಮನ್ವಾಧಿಕಾರಿ ಯು.ಬಿ.ಧರಿಕಾರ,ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ. ಎಂ.ಬೆಳಗಲ್, ದೈಹಿಕ ಪರೀಕ್ಷಕ ಬಿ.ವೈ.ಕವಡಿ, ಬಿ ಎಚ್ ಮುದ್ನೂರು, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಎಂ.ಎಸ್. ಕವಡಿಮಟ್ಟಿ, ಎನ್.ಬಿ.ಪಿಂಜಾರ, ಬಿ.ಟಿ.ವಜ್ಜಲ, ಶಿಕ್ಷಕಕರು ಸೇರಿದಂತೆ ಉಪಸ್ಥಿತರಿದ್ದರು.
ಸಿದ್ದನಗೌಡ ಬಿಜೂರ, ಗುಂಡು ಚವ್ಹಾಣ, ಎಂ.ಡಿ. ಅಮರವಾಡಗಿ ನಿರೂಪಿಸಿದರು. ಸಂಗಮೇಶ ಶಿವಣಗಿ ತಂಡದವರು ಪ್ರಾರ್ಥಿಸಿದರು.