ಮಹಾಗಣಪತಿ ದೇವಸ್ಥಾನದ 14ನೇ ವಾರ್ಷಿಕೋತ್ಸವ ಉತ್ಸವ ಮೂರ್ತಿಯ ಪಲ್ಲಕ್ಕಿ ಉತ್ಸವ ಕಳಸದ ಮೆರವಣಿಗೆ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ :ಪಟ್ಟಣದ ಮಹಾಂತೇಶ ನಗರದ ಮಹಾಗಣಪತಿ ದೇವಸ್ಥಾನದ 14ನೇ ವಾರ್ಷಿಕೋತ್ಸವದ ಅಂಗವಾಗಿ 300 ಕ್ಕೂ ಹೆಚ್ಚು ಮುತ್ತೈದೆಯರಿಗೆ ಉಡಿತುಂಬುವಕಾರ್ಯಕ್ರಮ ಶನಿವಾರ ಕಾರ್ಯಕ್ರಮ ಜರುಗಿತು.
ಬೆಳಗ್ಗೆ ಮಹಾಗಣಪತಿ ದೇವಸ್ಥಾನದ ಶಿಖರದ ಕಳಸ ದೊಂದಿಗೆ ಗಂಗಾಸ್ಥಳಕ್ಕೆ ನಡೆಸಲಾಯಿತು. ನಂತರ ಆನಂದ ಜ್ಯೋಷಿ ಪುರೋಹಿತರಿಂದ ವಿಷ್ಣು ಸಹಸ್ರನಾಮ, ಗಣ ಹೋಮ ಹವನ ಶ್ರೀ ಗುರು ರಾಘವೇಂದ್ರ ದೇವಸ್ಥಾನದಿಂದ ಬಾಜಾ ಭಜಂತ್ರಿ ಮೂಲಕ ಉತ್ಸವ ಮೂರ್ತಿಯ ಪಲ್ಲಕ್ಕಿ ಉತ್ಸವ ಕಳಸದ ಮೆರವಣಿಗೆ ನಡೆಯಿತು.
ಇದೇ ವೇಳೆ ಕೆಎಸ್‌ಡಿಎಲ್ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರು ಭೇಟಿ ನೀಡಿ ದೇವರ ದರ್ಶನವನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ. ದೇವಸ್ಥಾನದ ಸಮಿತಿ ಅಧ್ಯಕ್ಷ ಮಾರುತಿ ನಲವಡೆ, ಪುರಸಭೆ ಸದಸ್ಯ ಬಸವರಾಜ ಮುರಾಳ, ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಗಾಯಗೊಂಡ, ಮುಖಂಡರಾದ ಅನೀಲ ಕುಲಕರ್ಣಿ, ನೇತಾಜಿ ನಲವಡೆ, ರಾಘವೇಂದ್ರ ನಲವಡೆ, ಆನಂದ ಕಾಮಟೆ, ಪಂಡ್ರಿ ಪದಕಿ, ರಾಘು ಕುಲಕರ್ಣಿ, ಗಜಾನನ ನಲವಡೆ, ಹಣಮಂತ ನಲವಡೆ, ಪ್ರಭುಗೌಡ ಬಿರಾದಾರ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಯಲ್ಲಪ್ಪ ನಾಯಕಮಕ್ಕಳ, ಬಸವರಾಜ ಹಾಲವಾರ, ಶಿವು ಬಿಜಾಪುರ, ಶ್ರೀನಿವಾಸ ಮುದ್ದೇಬಿಹಾಳ, ಪುರಸಭೆ ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ರಾಯನಗೌಡ ತಾತರಡ್ಡಿ,ರಾಜೇಂದ್ರ ರಾಯಗೊಂಡ,ಮುತ್ತು ರಾಯಗೊಂಡ,ಸುರೇಶ್ ಕಲಾಲ,ಗೋಪಿ ಮಡಿವಾಳ, ಲಕ್ಷ್ಮೀ ನಲವಡೆ, ಸವಿತಾ ಕುಲಕರ್ಣಿ, ಲಕ್ಷ್ಮೀ ಕುಲಕರ್ಣಿ,ಸೇರಿದಂತೆ ಉಪಸ್ಥಿತರಿದ್ದರು