ಮುದ್ದೇಬಿಹಾಳ: ಸೀರತ್ ಅಭಿಯಾನದ ಅಂಗವಾಗಿ “ನ್ಯಾಯದ ಹರಿಕಾರ ಪ್ರವಾದಿ ಮುಹಮ್ಮದ್ (ಸ)” ವಿಷಯದಡಿ, ಜಮಾಅತೆ ಇಸ್ಲಾಮಿ ಹಿಂದ್ ಮುದ್ದೇಬಿಹಾಳ ಘಟಕ ಹಾಗೂ ಶಾಂತಿ ಪ್ರಕಾಶನದ ಸಹಯೋಗದಲ್ಲಿ ಎರಡು ಹೊಸ ಕನ್ನಡ ಪುಸ್ತಕಗಳ ಬಿಡುಗಡೆ ಸಮಾರಂಭವು ಶುಕ್ರವಾರ ಜುಮಾ ನಮಾಝ್ ನಂತರ ಸಂದಲ್ ಮಸೀದಿಯಲ್ಲಿ ನಡೆಯಿತು.
ಈ ವೇಳೆ “ಪ್ರವಾದಿ ಮುಹಮ್ಮದ್ (ಸ) ರನ್ನು ಅರಿಯಿರಿ” ಹಾಗೂ “ಭಾರತೀಯ ಸಮಾಜದಲ್ಲಿ ಪ್ರವಾದಿ ಮುಹಮ್ಮದ್ (ಸ) ರವರ ಆದರ್ಶದ ಔಚಿತ್ಯ” ಎಂಬ ಪುಸ್ತಕಗಳನ್ನು ಮೌಲಾನಾ ಮುಹಮ್ಮದ್ ರಫಿಕ್ ಅವರು ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಮಸೀದಿಯ ಅಧ್ಯಕ್ಷ ಭಾಶಾಸಾಬನಾಯ್ಕೋಡಿ, ಅಬ್ದುಲ್ ಗಫೂರ್ ಮುಕಾಂದಾರ, ಜಿಲ್ಲಾ ಅಧ್ಯಕ್ಷ ಔಷಧ ವ್ಯಾಪಾರಸ್ಥರ ಸಂಘದ ದಾದಾ ಯತ್ತಿನ್ ಮನೆ (ಮಸೂಧಾ ಮೆಡಿಕಲ್), ಹಾಗೂ ಮೆಹಬೂಬ್ ಮುಲ್ಲಾ (ಟಾಪ್ ಇನ್ ಟೌನ್) ಭಾಗವಹಿಸಿದ್ದರು.
ಬಿಡುಗಡೆ ನಂತರದ ಜುಮಾ ಖುತ್ಬಾದಲ್ಲಿ ಮೌಲಾನಾ ಮುಹಮ್ಮದ್ ರಫಿಕ್ ಅವರು ಪ್ರವಾದಿ ಮುಹಮ್ಮದ್ (ಸ) ಅವರ ಜೀವನ, ನ್ಯಾಯಪ್ರೇಮ ಹಾಗೂ ಸಮಾಜಮುಖಿ ಸಂದೇಶಗಳನ್ನು ಜನತೆಗೆ ತಲುಪಿಸಿದರು.
ಸೀರತ್ ಅಭಿಯಾನ 2025ರ ಉದ್ದೇಶವನ್ನು ಘಟಕದ ಸಂಚಾಲಕರಾದ ನೂರೇನಬಿ ನದಾಫ್ ಅವರು ಪ್ರಾಸ್ತಾವಿಕ ನುಡಿಗಳಲ್ಲಿ ವಿವರಿಸಿದರು.