ಮುದ್ದೇಬಿಹಾಳ| ಮೊಸಳೆ ಬಲಿಯಾದ ಕಾಶಪ್ಪ ಕುಟುಂಬಸ್ಥರ ನೋವಿಗೆ ಶಾಸಕ ನಾಡಗೌಡ ಸ್ಪಂದಿನೆ ಹಾಗೂ ₹25000 ನೆರವನ್ನು ನೀಡಿ ಕುಟುಂಬಕ್ಕೆ ಸಾಂತ್ವನ
ಕಾಶಪ್ಪ ಕುಟುಂಬಕ್ಕೆ ಸರಕಾರ ದಿಂದ ಬರುವ ಪರಿಹಾರದ ಭರವಸೆ..!
ವರದಿ :ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ತಾಲೂಕಿನ ಕೃಷ್ಣಾ ನದಿ ತೀರದ ಕುಂಚಗನೂರ ಗ್ರಾಮಕ್ಕೆ ಶಾಸಕ, ಕೆಎಸ್‌ಡಿ ನಿಗಮದ ಸಿ.ಎಸ್.ನಾಡಗೌಡ ಅವರು ಸೋಮವಾರ ಭೇಟಿ ನೀಡಿ ಕೃಷ್ಣಾ ನದಿಯಲ್ಲಿ ಮೊಸಳೆ ದಾಳಿಯಿಂದ ಸಾವನ್ನಪ್ಪಿದ ರೈತ ಕಾಶಪ್ಪ ಕಂಬಳಿ ಕುಟುಂಬಕ್ಕೆ ಸಾಂತನ ಹೇಳಿದರು.
ಕುಟುಂಬಸ್ಥರ ನೋವಿಗೆ ಮತಕ್ಷೇತ್ರದ ಶಾಸಕರು ಸ್ಪಂದಿಸಿ 25000 ರೂ. ವೈಯಕ್ತಿಕ ನಗದು ನೆರವನ್ನು ಮೃತನ ಪತ್ನಿ ಯಲ್ಲವ್ವಗೆ ವಿವರಿಸಿದರು. ಕುಟುಂಬಸ್ಥ ರೊಂದಿಗೆ ಕುಳಿತು ಘಟನೆಯ ಮಾಹಿತಿ ಪಡೆದು ಕೊಂಡು 35-36 ವರ್ಷದ ಯುವಕ, ನಾಲ್ವರು ಮಕ್ಕಳ ತಂದೆ ಹೀಗೆ ದುರಂತ ಸಾವನ್ನಪ್ಪಿರುವುದು ನೋವು ತಂದಿದೆ. ಕುಟುಂಬದವರು ಕಾಶಪ್ಪನ ಮಕ್ಕಳನ್ನು ಚೆನ್ನಾಗಿ ಓದಿಸಿ ವಿದ್ಯಾವಂತರನ್ನಾಗಿ ಮಾಡಬೇಕು ಎಂದು ತಿಳಿಸಿದರು.
ದು:ಖದಲ್ಲಿದ್ದ ಮೃತ ಕಾಶಪ್ಪನ ಪತ್ನಿ ಯಲ್ಲವ್ವ, ಮಕ್ಕಳಾದ ಸುದರ್ಶನ, ಸ್ವಪ್ನ, ರಚಿತಾ, ಮಾಳಿಂಗರಾಯ, ಸಹೋದರ ಭೀಮಣ್ಣ, ಕುಟುಂಬದ ಸದಸ್ಯರು ಇದ್ದರು. ಕಾಶಪ್ಪ ಬಡಕುಟುಂಬಕ್ಕೆ ಸೇರಿದ್ದು ಹೆಚ್ಚಿನ ಪರಿಹಾರ ದೊರಕಿಸಿಕೊಡಲು ಗ್ರಾಮಸ್ಥರು, ಮುಖಂಡರು ಶಾಸಕರಿಗೆ ಮನವಿ ಮಾಡಿದರು.
ಶಾಸಕರು, ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಮಾವಾಸ್ಯೆಯಾಗಿದ್ದರಿಂದ ದನಗಳನ್ನು ಹೊಳೆಸ್ನಾನಕ್ಕಾಗಿ ಕರೆದೊಯ್ದಾಗ ಎಂದರು.
ಮರಣೋತ್ತರ ಪರೀಕ್ಷಾ ವರದಿ ಬಂದ ಮೇಲೆ ನಿಖರ ಕಾರಣ ತಿಳಿದು ಬರಲಿದ್ದು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ ನಂತರ ಸೂಕ್ತ ಪರಿಹಾರದ ವ್ಯವಸ್ಥೆಗೆ ಅನುಕೂಲ ಮಾಡಿಕೊಡಲಾಗುವುದು. ನದಿಯಲ್ಲಿ ಪ್ರವಾಹ ಇದ್ದ ಕಾರಣ ಅವಘಡ ಸಂಭವಿಸಿದ್ದರೆ ಪ್ರಕೃತಿ ವಿಕೋಪದಡಿ 5 ಲಕ್ಷ ರೂ
ಪರಿಹಾರ ಸಿಗುತ್ತದೆ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ನಿವೃತ್ತ ಡಿವೈಎಸ್ಪಿ ಎಸ್.ಎಸ್.ಹುಲ್ಲೂರ,ತಾಪಂ ಮಾಜಿ ಸದಸ್ಯ ಶ್ರೀಶೈಲ ಮರೋಳ,ಗುತ್ತಿಗೆದಾರ ರಾಜುಗೌಡ ಕೊಂಗಿ, ಮಲಿಕಸಾಬ ನದಾಫ್ ಅಮರಗೋಳ, ಸಂಗಣ್ಣ ಕವಡಿಮಟ್ಟಿ, ಸಂಗಣ್ಣ ದೇವರಮನಿ,ಜಿ.ಜಿ.ಮೋಟಗಿ, ಬಸವರಾಜ ತಾಳಿಕೋಟಿ, ಮಹಾಂತೇಶ ಹೊಳಿ, ರಾಮಣ್ಣ ಕುಂಟೋಜಿ ,ಪಿಎಸೈ ಸಂಜಯ್ ತಿಪ್ಪರಡ್ಡಿ, ಕಂದಾಯ ನಿರೀಕ್ಷಕ ಪವನ್ ತಳವಾರ, ತಂಗಡಗಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಮುತ್ತು ಗಣಾಚಾರಿ, ಅವರು ಶಾಸಕರಿಗೆ ಘಟನೆಯ ಮಾಹಿತಿಯನ್ನು ನೀಡಿದ್ದರು. ಕಾರ್ಯಕರ್ತರು ಸೇರಿದಂತೆ ಉಪಸ್ಥಿತರಿದ್ದರು.