ಮುದ್ದೇಬಿಹಾಳ: ತಾಲೂಕಿನ ಕುಂಚಗನೂರು ಗ್ರಾಮದ ಹತ್ತಿರ ಬರುವ ಕೃಷ್ಣಾ ನದಿಯಲ್ಲಿ ಗ್ರಾಮಸ್ಥ ಕಾಶಪ್ಪ ಹಣಮಂತ ಕಂಬಳಿ (38) ಎಂಬಾತನನ್ನು ಮೊಸಳೆಯೊಂದು ನೀರಲ್ಲಿ ಎಳೆದೊಯ್ದಿರುವ ಘಟನೆ ಶನಿವಾರ (ಆ.23) ಬೆಳಿಗ್ಗೆ ಘಟನೆ ನಡೆದಿದೆ.
ಅಮವಾಸ್ಯೆ ಹಿನ್ನೆಲೆ ತನ್ನೆರಡು ಎತ್ತುಗಳಿಗೆ ಮೈತೊಳೆಸಲು ನದಿಯ ಹತ್ತಿರ ಹೋಗಿದ್ದಾಗ ಈ ಘಟನೆ ನಡೆದಿದೆ.
ಇದೇ ವೇಳೆ ಅರಣ್ಯ ಇಲಾಖೆ, ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ನದಿಯಲ್ಲಿ ದೋಣಿ, ತೆಪ್ಪದ ಮೂಲಕ ಶವಕ್ಕಾಗಿ ಶೋಧ ನಡೆಸಿದ್ದಾರೆ. ಕಾಶಪ್ಪನಿಗೆ ಪತ್ನಿ, ಇಬ್ಬರು ಗಂಡು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ನದಿ ದಂಡೆಯಲ್ಲಿ ಸೇರಿದ್ದು ಶವಕ್ಕಾಗಿ ಶೋಧ ಕಾರ್ಯಾಚರಣೆ ಬಿರುಸುಗೊಂಡಿದೆ ಮೂಲ ಗಳಿಂದ ತಿಳಿದಿದೆ.
ಮುದ್ದೇಬಿಹಾಳ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.