ರೇವಣಸಿದ್ದೇಶ್ವರ ಜಾತ್ರೆಯಲ್ಲಿ
ಮುಳ್ಳಿನ ರಾಶಿಯಲ್ಲಿ ಮೇಲೆ ನಿಂತು ಕಾರ್ಣಿಕ ನುಡಿದ ಗುರುವೀನ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ : ಕೇಸಾಪೂರ ಗ್ರಾಮದ ಗುಡ್ಡದ ರೇವಣಸಿದ್ದೇಶ್ವರ ಜಾತ್ರೆಯ ಪ್ರಯುಕ್ತ ಶಿವವಾಣಿಯ ಕಾರ್ಣಿಕ ನುಡಿದಿದೆ.
‘ಹುಬ್ಬಿ,ಉತ್ರಿ, ಹಸ್ತ, ಚಿತ್ತಿ ಸರವಿನ ಮ್ಯಾಗ ಸರು ಭೂಮಿ ತೂಕದ ಮಳೆ ಭೂಮಿ ತೂಕದ ಬೆಳೆ ಮೂರು ಬಣ್ಣದ ಪಕ್ಷಿ ಮೂರು ಕಾಯಿಲೆ ಕುಣಿತೈತಿ, ಬಾಳ ಎಚ್ಚರದಿಂದ ನಂಬಿಗಿಟ್ಟು ದುಡಿಯುವಗಾ ತೊಟ್ಟಿಲುದಾಗ ತೂಗುತ್ತೀನಿ’ ಪರಾಕ್ ಅನ್ನೋ ದೈವವಾಣಿಯನ್ನು ಬಸಯ್ಯ ಗುರುವಿನ ಮುಳ್ಳಿನ ಮೇಲೆ ನಿಂತು ನುಡಿದಿದ್ದಾರೆ.
ಇದರ ಅರ್ಥ ‘ಸುಖ ದುಃಖಗಳನ್ನು ಸಮನಾಗಿ ಕೊಟ್ಟ ದೇವರು, ಪ್ರಸಕ್ತ ವರ್ಷ ರಾಜ್ಯದಲ್ಲಿ ಮುಂಗಾರು ಉತ್ತಮ ಮಳೆಯಾಗಲಿದೆ. ಸಮೃದ್ಧವಾಗಿ ಬೆಳೆಗಳು ಬರಲಿವೆ’ ಎಂದು ಗ್ರಾಮಸ್ಥರು ವಿಶ್ಲೇಷಣೆ ಮಾಡಿದ್ದಾರೆ.
ಜಾತ್ರೆಯ ಸಂಪ್ರದಾಯದಂತೆ ಕೇಸಾಪೂರ ಗ್ರಾಮದ ದೇಶಮುಖರ ಮನೆಯಿಂದ ಆಗಮಿಸಿದ ನಂದಿ ಕೋಲನ್ನು ಸ್ವಾಗತಿಸಲಾಯಿತು ಬಳಿಕ, ಹಿರೇಕುರಬರ ಮನೆಯಿಂದ ಪ್ರಸಾದದ ನುಚ್ಚಿನ ಗಡಿಗೆಗೆ ಸ್ವಾಗತ. ಕೋರಲಾಯಿತು.
ಸಿದ್ದಪ್ಪ ತಳವಾರ ಇವರ ಮನೆಯಿಂದ ಎಣ್ಣೆ ಮಗಿ ಆಗಮನದ ಮೂಲಕ ನೆರಬೆಂಚಿ ಗ್ರಾಮದಿಂದ ರೇವಣಸಿದ್ದೇಶ್ವರ ಪಲ್ಲಕ್ಕಿ ಬರುತ್ತಿದ್ದಂತೆ 12 ಅಡಿ ಎತ್ತರದ ಜಾಲಿ, ಜೀನಿಯ ಕಡಿದು ಹಾಕಿದ ಮುಳ್ಳಿನ ರಾಶಿಯನ್ನೇರಿ ವರ್ಷದ ದೈವವಾಣಿಯನ್ನು ಬಸಯ್ಯ ಗುರುವೀನ ಗೊರವಯ್ಯ ನುಡಿದಿದ್ದಾರೆ.
ಈ ಬಾರಿ ಶ್ರಾವಣ ಮಾಸದ ಮೂರನೇ ಸೋಮವಾರ ಜಾತ್ರೆಯಂದು ಕಾರ್ಣೀಕ ವಿಶೇಷ ಇದಾಗಿದೆ. ಜರುಗಿರುವ ಆಗ ಗುರುವಿನ ಗುರುಗಳು ಕಾರ್ಣಿಕ ನುಡಿತಾರೆ.ಈ ವೇಳೆ ಬಸಯ್ಯ ಗುರುವೀನ, ಅಮರಯ್ಯ ಗುರುವೀನ, ಮಾಂತಯ್ಯ ಗುರುವೀನ, ಆಲೂರ ಕೇಸಾಪೂರ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಸಿದ್ದಪ್ಪ ರಾಮಣ್ಣ ಉಪ್ಪಿನಕಾಯಿ, ಪೂಜಾರಿ, ನಾಗರಾಜ ಹಿರೇಕುರಬರ,ಯಮನಪ್ಪ ವಾಲಿಕಾರ, ಸೋಮಣ್ಣ ವಡಗೇರಿ, ರವಿ ಮೇಟಿ, ಪವಾಡೆಪ್ಪ ವಾಲಿಕಾರ, ಮಲ್ಲಿಕಾರ್ಜುನ ತಂಗಡಗಿ,ಸೇರಿದಂತೆ ಸುತ್ತ ಮುತ್ತಲಿನ ಹಳ್ಳಿಯ ಭಕ್ತರು ಉಪಸ್ಥಿತರಿದ್ದರು.