ಪವಿತ್ರ ಧರ್ಮಸ್ಥಳ ಕ್ಷೇತ್ರದ ಘನತೆಗೆ ಕೆಟ್ಟ ಹೆಸಿರು ತರುವ ಪ್ರಯತ್ನ ವಿರುದ್ಧ ಜೈನ ಸಮಾಜದಿಂದ ಬೃಹತ್ ಪ್ರತಿಭಟನೆ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ :ಕೆಲವರು ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣದ ಹೆಸರಲ್ಲಿ ಪವಿತ್ರ ಧರ್ಮಸ್ಥಳ ಕ್ಷೇತ್ರದ ಘನತೆಗೆ ಕೆಟ್ಟ ಹೆಸಿರು ತರುವ ಪ್ರಯತ್ನ ನಡೆಸಿದ್ದಾರೆ. ಅಂತಹವರ ವಿರುದ್ದ ಕೂಡಲೇ ಕಾನೂನು ಕ್ರಮ ಕೈಗೊಳ್ಳುವ ಮೂಲಕ ರಾಜ್ಯದಿಂದ ಗಡೀಪಾರು ಮಾಡಬೇಕು ಎಂದು ಆಗ್ರಹಿಸಿ ಪಟ್ಟಣದ ಜೈನ ಬಾಂಧವರು ಮಂಗಳವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಕ್ಷೇರ್ತ ಚಾಲಕ ಅವರ ಮೂಲಕ ಸರಕಾರಕ್ಕೆ ಸಲ್ಲಿಸಿದರು.
ಹಿರಿಯ ಸಾಹಿತಿ ಅಶೋಕ ಮಣಿ ಮಾತನಾಡಿ, “ಧರ್ಮಸ್ಥಳ ಕ್ಷೇತ್ರ ವಿಶ್ವಪ್ರಸಿದ್ಧ ಶ್ರದ್ಧಾ ಕೇಂದ್ರ. ಜಾತಿ- ಧರ್ಮ ಮೀರಿದ ಸ್ಥಳವದು. ಕ್ಷೇತ್ರದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಜಾತ್ಯತೀತ ಮನೋಭಾವನೆಯಿಂದ ಸರ್ವ ಧರ್ಮದ ಜನರನ್ನು ಸಹೋದರರಂತೆ ಕಂಡವರು. ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕಾರ್ಯಗಳ ಮೂಲಕ ಸಮಾಜದ ಏಳಿಗೆಗೆ ಶ್ರಮಿಸುತ್ತಿದ್ದಾರೆ. ಅಂಥವರನ್ನು ತೇಜೋವಧೆ ಮಾಡುವುದೇ ಕೆಲವರ ಉದ್ದೇಶವಾಗಿದೆ. ಇಂಥ ಕ್ಷೇತ್ರದ ಧರ್ಮಸ್ಥಳ ಡಾ ವೀರೇಂದ್ರ ಹೆಗ್ಗಡೆ ಅವರ ಹೆಸರಿಗೆ ಕೆಡಿಸುವ ಕೆಲಸ ಯಾರೂ ಮಾಡಬಾರದು ಎಂದರು.
ಅರಿಹಂತ ಚಾರಿಟೆಬಲ್ ಟ್ರಸ್ಟ್‌ನ ಅಧ್ಯಕ್ಷ ಮಹಾವೀರ ಸಗರಿ ಮಾತನಾಡಿ, “ಸೌಜನ್ಯ ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಅವರಿಗೆ ಕಠಿಣ ಶಿಕ್ಷೆಯಾಗಬೇಕು.
ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ನಾವೂ ಕೂಡ ಬಯಸುತ್ತೇವೆ. ಆದರೆ, ಈ ಪ್ರಕರಣದಲ್ಲಿ ಅನಗತ್ಯವಾಗಿ ಡಾ.ವೀರೇಂದ್ರ ಹೆಗ್ಗಡೆ ಅವರ ಕುಟುಂಬವನ್ನು ಎಳೆದು ತರಲಾಗುತ್ತಿದೆ. ಧರ್ಮಾಧಿಕಾರಿ ಅವರನ್ನು ಅವಹೇಳನ ಮಾಡುವ ಉದ್ದೇಶದಿಂದ ಹೀಗೆ ಮಾಡಲಾಗುತ್ತಿದೆಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಪ್ರಭು ಕಡಿ,
ಸಿದ್ದರಾಜ ಹೊಳಿ, ಬಸಯ್ಯ ನಂದಿಕೇಶ್ವರಮಠ, ಜೈನ ಧರ್ಮದ ಮುಖಂಡರಾದ ಮಾಣಿಕಚಂದ ದಂಡಾವತಿ, ಬಾಹುಬಲಿ ಗೋಗಿ, ಭೀಮರಾಯ ದೊಡಮನಿ, ಭರತೇಶ ಶೆಟ್ಟಿ ರಮೇಶ ದೊಡಮನಿ, ಶಾಂತರಾಜ ಸಗರಿ, ಅಜಿತ ಗೊಂಗಡಿ, ಅಜಿತ ಪ್ರಥಮಶೆಟ್ಟಿ ಅಭಿನಂದನ ಕಡೆಹಳ್ಳಿ,ಅಶೋಕ ಮನಿ, ಭರತೇಶ ಮಂಕಣಿ, ಆದಿನಾಥ ನಾಗಾವಿ, ಆರ್.ಎಸ್.ದಶರಥ, ರಾಜೇಂದ್ರ ದಂಡಾವತಿ, ಮಹೇಂದ್ರ ಓಸ್ವಾಲ, ಜಿತೇಂದ್ರ ಓಸ್ವಾಲ, ಪಾರಸ್ ಪೋರ್ವಾಲ, ಸಂಜು ಓಸ್ವಾಲ, ಸೀಮಾ ದಂಡಾವತಿ, ಸುನಂದಾ ಯಾತಗಿರಿ, ರೇಖಾ ಸಗರಿ, ಶಾರದಾ ದೊಡಮನಿ, ಇಂದುಮತಿ ಕಡೆಹಳ್ಳಿ, ಶಶಿಕಲಾ ದಶರಥ, ಶಶಿಕಲಾ ಗೊಂಡಗಿ ಸೇರಿದಂತೆ ಉಪಸ್ಥಿತರಿದ್ದರು.