ಇಂಡಿ | ಜಮೀನು ದಾರಿಗಾಗಿ 6 ಜನರ ಮೇಲೆ ಹಲ್ಲೆ..!
ಇಂಡಿ : ಜಮೀನು ದಾರಿಯ ಸಲುವಾಗಿ ಆರು ಜನರು ಐದು ಜನರ ಮೇಲೆ ಹಲ್ಲೆಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ತೆನ್ನಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಸತೀಶ ನಾಯ್ಕೋಡಿ, ಶ್ರೀಮಂತ ನಾಯ್ಕೋಡಿ, ಶೈಲಾ ನಾಯ್ಕೋಡಿ, ಪ್ರೇಮಾ ನಾಯ್ಕೋಡಿ, ರೂಪಾ ನಾಯ್ಕೋಡಿ ಗಾಯಗೊಂಡವರು. ಇನ್ನು ನಾಗಪ್ಪ ಬೋಳೆಗಾಂವ, ಮಹಾದೇವ ಬೋಳೆಗಾಂವ, ಸೋಮನಿಂಗ ಬೋಳೆಗಾಂವ, ಬಸವರಾಜ ಬೋಳೆಗಾಂವ, ಶ್ರೀಶೈಲ ಬೋಳೆಗಾಂವ, ಸಂಗನಬಸು ಬೋಳೆಗಾಂವ ಹಲ್ಲೆಗೈದವರು. ಇನ್ನು ಜಮೀನಿನಲ್ಲಿ ಹಾಯ್ದು ಹೋಗಲು ಸಲುವಾಗಿ ಇಬ್ಬರ ಮಧ್ಯೆ ಗಲಾಟೆ ಆಗಿದೆ. ಈ ವೇಳೆ ಆರೋಪಿಗಳು ಸಳಾಕೆ, ಬಡಿಗೆಯಿಂದ ಹೊಡೆದು ಗಾಯಮಾಡಿದ್ದಾರೆ. ಗಾಯಾಳು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.