ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ ; ತಾಲೂಕಿನ ಐತಿಹಾಸಿಕ ಸುಕ್ಷೇತ್ರ ಕುಂಟೋಜಿಯ ಶ್ರೀ ಬಸವೇಶ್ವರ ಜಾತ್ರಾಮಹೋತ್ಸವ ಶ್ರಾವಣ ಮಾಸದ ಕೂನೆಯ ಸೋಮುವಾರ ಅಗಸ್ಟ್ 17 ರಿಂದ ಅಗಸ್ಟ್ 21 ಐದು ದಿನಗಳ ಕಾಲ ಶ್ರದ್ದಾಭಕ್ತಿಯಿಂದ ಜರುಗಲಿದೆ ಈ ಬಾರಿ ಜಾತ್ರೆಯಲ್ಲಿ ನೂತನ ಮಹಾರಥೋತ್ಸವದ ಲೋಕಾರ್ಪಣೆಯನ್ನು ಕೊಪ್ಪಳ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಮಾಡಲಿದ್ದಾರೆ ಎಂದು ಬಸವೇಶ್ವರ ಜಾತ್ರಾ ಸಮಿತಿಯ ಅಧ್ಯಕ್ಷ ಗುರು ಲಿಂಗಪ್ಪ ಸುಲ್ಲೂಳ್ಳಿ ಹೇಳಿದರು ಸೋಮುವಾರ ಕುಂಟೋಜಿ ಬಸವೇಶ್ವರ ಯಾತ್ರಾ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಐದು ದಿನಗಳು ನಡೆಯುವ ಜಾತ್ರೆಯಲ್ಲಿ ಶ್ರೀಮಠದ ಭಕ್ತರು ಅಂದಾಜು 40 ರಿಂದ 50 ಸಾವಿರ ಸೇರುವ ನೀರಿಕ್ಷೆ ಇದೆ ಎಂದರು.
ನಾಗಲಿಂಗಯ್ಯ ಮಠ ಹಾಗೂ ಬಿ.ಎಸ್ ಹೂಗಾರ ಮಾತನಾಡಿ ಶ್ರೀಮಠಕ್ಕೆ 29 ಅಡಿಯ ಸಾಗವಾಣಿ ಕಟ್ಟಿಗಿಯಲ್ಲಿ ನಿರ್ಮಾಣ ಮಾಡಿದ್ದು ಮಹಾ ರಥದವನ್ನು ಹೆಸರು ಹೇಳಿಲಿಚ್ಛದ ಭಕ್ತರೂಬ್ಬರು ಮಾಡಿಸಿಕೊಟ್ಟಿದ್ದಾರೆ. ಐದು ದಿನವೂ ವಿವಿಧ ಸಿಹಿಭಕ್ಯಭೋಜನ ಇರುತ್ತದೆ ನೀರಿಕ್ಷೆ ಮೀರಿ ಭಕ್ತರಿಗೆ ಮೂಲಭೂತ ಸೌಕರ್ಯ ವ್ಯವಸ್ಥೆ ಮುಂಜಾಗ್ರತಾ ಕ್ರಮವಾಗಿ ಸಿಸಿ ಕ್ಯಾಮರಾಗಳ ಅಳವಡಿಕೆ ಮಾಡಲಾಗುತ್ತಿದೆ ಎಂದರು.
ಮಹಾರಥಕ್ಕೆ ಆಲೂರ ಗೂಳಿ ಮನೆತನದಿಂದ ಕಳಸ, ಗರಸಂಗಿ ಹಿರೇಮಠ ಮನೆತನದಿಂದ ಹಗ್ಗ, ರಥಕ್ಕೆ ರುದ್ರಾಕ್ಷಿ ಬ್ರಹತ್ ಹಾರವನ್ನು ಮುದ್ದೇಬಿಹಾಳ ಶರಣು ಹಿರೇಮಠ ಹಾಗೂ ಅಬ್ಬಿಹಾಳ ಗ್ರಾಮದಿಂದ ಬರುತ್ತದೆ.
ಈ ಪತ್ರಿಕಾಗೋಷ್ಠಿಯಲ್ಲಿ ಆನಂದ ಗಸ್ತಿಗಾರ,ಮಲ್ಲಿಕಾರ್ಜುನ ನಾಟಿಕಾರ,ರಾಮಣ್ಣ ಹುಲಗಣ್ಣಿ,ಬಸಲಿಂಗಪ್ಪಗೌಡ ಬಿರಾದಾರ,ಸಿದ್ದು ಕೋಲಕಾರ,ಗುರುಪಾದ ಹೆಬ್ಬಾಳ, ಮಲ್ಲಿಕಾರ್ಜುನ ಹುಲಿಬೆಂಚಿ,ಶಿವಣ್ಣ ಕೋಲಕಾರ,ಸಂಗಣ್ಣ ಕುಂಬಾರ, ಬಸವರಾಜ ಹುಲಗಣ್ಣಿ,ಸಂಗಮೇಶ ಯರಝರಿ,ಗುಂಡಪ್ಪ ಕೋಳೂರು ಸೇರಿದಂತೆ ಉಪಸ್ಥಿತರಿದ್ದರು.