ಮುದ್ದೇಬಿಹಾಳ ;ವಿಜಯಪುರ ಜಿಲ್ಲೆಯ ರೈತರ ಜಮೀನಿಗೆ ಸಮರ್ಪಕ ನೀರು ಹರಿಸದೆ ನೀರಾವರಿಂದ ರೈತರನ್ನು ವಂಚಿತರನ್ನಾಗಿಸಿದ್ದು ನಮ್ಮ ಉ.ಕ ಭಾಗದ ಎಲ್ಲಾ ಜನಪ್ರತಿನಿಧಿಗಳೇ ಕಾರಣ ಅವರ ಅಧಿಕಾರದ ದಾಹ ಇರುವಷ್ಟು ಕಾಳಜಿ ರೈತರ ಹಿತಾಸಕ್ತಿ ಬಗ್ಗೆ ಇಲ್ಲಾ ಆಲಮಟ್ಟಿ ಆಣೆಕಟ್ಟೆ ಎತ್ತರ ಮಾಡುವಲ್ಲಿ ವಿಳಂಬ ನೀತಿಗೆ ಜನಪ್ರತಿನಿಧಿಗಳ ಆಲಸ್ಯತನವೇ ಕಾರಣವೆಂದು ರೈತ ಮುಖಂಡ ಬಸನಗೌಡ ಬಿ ಪಾಟೀಲ್ ಹಿರೇಮುರಾಳ ಹೇಳಿದರು.
ರೈತ ಮುಖಂಡ ಬಿ.ಬಿ ಪಾಟೀಲ್ ಅವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ರೈತಸಂಘ ಹಸಿರು ಸೇನೆ ರೈತ ಹೋರಾಟಗಾರು ಶನಿವಾರ ತಾಲ್ಲೂಕಿನ
ಬಂಗಾರಗುಂಡ ಗ್ರಾಮದ ಮಾರುತೇಶ್ವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಅದೇ ಗ್ರಾಮದಲ್ಲಿಯ ನಾಗರಬೆಟ್ಟ ಏತನೀರಾವರಿ ಯೋಜನೆ ಚಾಕವೆಲ್ ಗೆ ಪಂಪಸೆಟ್ ಬಳಿ ಕೃಷ್ಣಗೆ ಬಾಗಿನ ಅರ್ಪಿಸಿ ಚಾಕವೆಲ್ ಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ನಾಗರಬೆಟ್ಟದ ಏತನೀರಾವರಿ ಯೋಜನೆಯ ಚಾಕವೆಲ್ ನಿಂದ ನೀರು ಹರಿಸಿದರೆ ಈ ಭಾಗದ 17 ಗ್ರಾಮಗಳ 7 ಸಾವಿರ ಎಕರೆ ಜಮೀನು ನೀರಾವರಿ ಆಗುತ್ತದೆ ಆದರೆ ಹಿರೇಮುರಾಳ, ನಾಗರಬೆಟ್ಟ ಅರಸನಾಳ ಬಳಿ ಅಪೂರ್ಣ ಕಾಮಗಾರಿ ಕೆಲವಡೆ ಎಫ್ ಐಸಿ ಆಗಿಲ್ಲ ಕೆಲವಡೆ ಕೆನಾಲ್ ಅಪೂರ್ಣಗೂಂಡ ಕಾರಣ ನಮ್ಮ ತಾಲ್ಲೂಕಿನ ರೈತರು ನೀರಾವರಿಯಿಂದ ವಂಚಿತರಾಗಿದ್ದು ನಮ್ಮ ತಾಲೂಕಿನ ಶಾಸಕರು ಈ ಬಗ್ಗೆ ಧ್ವನಿ ಎತ್ತಬೇಕು ನಾಗರಬೆಟ್ಟ ಏತನೀರಾವರಿಗೆ 2015 ರಲ್ಲಿ ಶಂಕುಸ್ಥಾಪನೆಯಾಗಿ 2020 ಸಂಪೂರ್ಣವಾಗಬೇಕಿತ್ತು ಆಗಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು .
ನಮ್ಮ ತಾಲೂಕಿನ ರೈತರು ಆಲಮಟ್ಟಿ ಮತ್ತು ನಾರಾಯಣಪುರ ಆಣೆಕಟ್ಟೆಗಾಗಿ ಅಂದಾಜು 55 ಸಾವಿರ ಹೆಕ್ಟೇರ ಫಲವತ್ತಾದ ಭೂಮಿಯನ್ನು ಕಳೆದುಕೊಂಡಿದ್ದಾರೆ ಆದರೂ ಇಲ್ಲಿಯವರೆಗೆ ಸರಿಯಾದ ಪರಿಹಾರ ಸಿಕ್ಕಿಲ್ಲಾ ನಮ್ಮ ಜಿಲ್ಲೆ ದೇಶದ ಎರಡನೇ ಪಂಜಾಬ್ ಆಗುತ್ತಿತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯತನದಿಂದ ಬರಗಾಲ ಜಿಲ್ಲೆಯಾಗಿ ಉಳಿದಿದೆ ಆಲಮಟ್ಟಿ ಆಣೆಕಟ್ಟು ಎತ್ತರವಾಗದ ಕಾರಣ ನಮ್ಮ ರೈತರ ಜಮೀನು ಗೆ ನೀರಿಲ್ಲ ಆದರೆ ನಮ್ಮ ಆಣೆಕಟ್ಟುಯಿಂದ ರಾಯಚೂರು ಗುಲ್ಬರ್ಗ ಜೇವರ್ಗಿ ರೈತರ ಜಮೀನು ನೀರಾವರಿ ಆಗಿವೆ ಈ ಬಗ್ಗೆ ದಿವ್ಯ ನಿರ್ಲಕ್ಷ್ಯತವನ್ನು ಹೂಂದಿರುವ ಜನಪ್ರತಿನಿಧಿಗಳು ಸದನದಲ್ಲಿ ಪಕ್ಷಾತೀತವಾಗಿ ಉ.ಕ ಸಮಗ್ರ ನೀರಾವರಿ ಬಗ್ಗೆ ಆಲಮಟ್ಟಿ ಆಣೆಕಟ್ಟೆ ಎತ್ತರ ಮಾಡುವ ಬಗ್ಗೆ ಧ್ವನಿ ಎತ್ತಬೇಕು ಮುಖ್ಯಮಂತ್ರಿಗಳಿಗೆ ಪ್ರಶ್ನಿಸಿಬೇಕು ಎಂದರು.
ಈ ವೇಳೆ ಕರ್ನಾಟಕ ರೈತ ಸಂಘ ಹಸಿರು ಸೇನೆಯ ರಾಜ್ಯ ಪ್ರಕಾ ಸಂಗಣ್ಣ ಬಾಗೇವಾಡಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರಸಂಗಪ್ಪ ಹಂಡರಗಲ್ಲ ಮಾತನಾಡಿದರು.
ಈ ಸಂದರ್ಭದಲ್ಲಿ ರೈತರ ಹೋರಾಟದಲ್ಲಿ ವೈ ಎಲ್ ಬಿರಾದಾರ, ವೀರಪ್ಪ ಮಡಿವಾಳರ, ಶಿವು ಕತ್ತಿ, ಸಂಗಪ್ಪ ಕತ್ತಿ ,ರೇವಣಪ್ಪ ಹರನಾಳ, ಮನೋಹರ ನಿಡಗುಂದಿ, ಅಯ್ಯಪ್ಪ ಬಿದರಕುಂದಿ, ಮಲ್ಲನಗೌಡ ಬಿರಾದಾರ ಮಹೇಶ ಪಾಟೀಲ್,ಸಿದ್ದು ವಾಲಿಕಾರ, ಬಸನಗೌಡ ಬ್ಯಾಲಾಳ, ಮಲ್ಲಿಕಾರ್ಜುನ ಬಿಸಲದಿನ್ನಿ, ಶ್ರೀಕಾಂತಗೌಡ ಬಿರಾದಾರ, ಸೇರಿದಂತೆ ಹಿರೇಮುರಾಳ, ಬಂಗಾರಗುಂಡ, ಕಪನೂರ, ಅರಸನಾಳ, ಬೂದಿಹಾಳ, ವಣಕ್ಯಾಳ, ಅಡವಿ ಸೋಮನಾಳ,ಮಲಗಲದಿನ್ನಿ ಚವನಭಾವಿ ಗ್ರಾಮದ ರೈತರು ಭಾಗವಹಿಸಿದ್ದರು.
ನಿಯೋಗ: ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಬೇಕಾ ಬಿಟ್ಟಿ ನಡೆದಿರುವ ಕಾಲುವೆಗಳ ಕಾಮಗಾರಿಯ ಹಿನ್ನಲೆ ಮತ್ತು ಚರ್ಮ ದಪ್ಪದ ಕೆಬಿಜೆಎನ್‌ಎಲ್ ಅಧಿಕಾರಿಗಳ ಧೋರಣೆ ಕುರಿತು ಶೀಘ್ರವೇ ಸಿಎಂ ಸಿದ್ದರಾಮಯ್ಯನವರು ಮತ್ತು ಜಲ ಸಂಪನ್ಮೂಲ ಸಚಿವರಿಗೆ ಭೇಟಿ ನೀಡಲು ನಿಯೋಗವು ಸಿದ್ದತೆ ಮಾಡಿಕೊಂಡಿದೆ.
ಬಸನಗೌಡ ಪಾಟೀಲ (ಹಿರೇಮುರಾಳ) ರೈತ ತಾಲ್ಲೂಕು ಕಾರ್ಯಾಧ್ಯಕ್ಷರು.