ಭವಿಷ್ಯದ ಪ್ರಜೆಗಳಿಗೆ ಸಂಸ್ಕಾರಯುತ ಶಿಕ್ಷಣ ನೀಡಿ
ಇಂಡಿ: ಇಂದಿನ ವಿದ್ಯಾರ್ಥಿಗಳು ಭವಿಷ್ಯದ ದಿನಗಳಲ್ಲಿ ಸಮಾಜದ ನಾಗರಿಕರಾಗುತ್ತಾರೆ. ಮಕ್ಕಳಿಗೆ ಪ್ರೀತಿಯಿಂದ ಸಂಸ್ಕಾರಯುತವಾದ ಶಿಕ್ಷಣ ನೀಡುವಲ್ಲಿ ತಂದೆ-ತಾಯಿಗಳು-ಗುರುಗಳು ಹಾಗೂ ಸಮುದಾಯದ ಜನ ಮಕ್ಕಳಿಗೆ ದಾರಿದೀಪವಾಗಬೇಕು ಎಂದು ಬಸವಂತರಾಯಗೌಡ ಪಾಟೀಲ್ ಅವರು ಹೇಳಿದರು .
ಅವರು ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿನ ಶ್ರೀ ಬೀರಲಿಂಗೇಶ್ವರ ದೇವರ ಜಾತ್ರೆಯ ನಿಮಿತ್ಯವಾಗಿ ಹಮ್ಮಿಕೊಂಡಿರುವ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಮತ್ತು ನಿವೃತ ಶಿಕ್ಷಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿ ಪ್ರತಿ ಮನುಷ್ಯನಾದವನು ತನ್ನ ಜೀವನದಲ್ಲಿ ಪ್ರೀತಿ -ಪ್ರೇಮ ಸಹನೆ ಎಂಬ ತತ್ವಗಳಿಂದ ಜಗತ್ತನ್ನು ಗೆಲ್ಲಲು ಸಾಧ್ಯವಿದೆ, ಪ್ರೀತಿಯಿಂದ ಮಕ್ಕಳಲ್ಲಿ ಸಂಸ್ಕಾರಯುತವಾದ ಶಿಕ್ಷಣವನ್ನು ತಂದೆ-ತಾಯಿಗಳು-ಗುರುಗಳು ಹಾಗೂ ಸಮಾಜ ನೀಡಿದರೆ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯವಿದೆ ಎಂದು,ಅತ್ಯುತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ಹಾಗೂ ಸಾಧಕರಿಗೆ ಸಮಿತಿಯವರು ಸನ್ಮಾನಿಸಿ ಪ್ರೋತ್ಸಾಹಿಸುವುದರ ಮೂಲಕ ಇನ್ನೊಬ್ಬ ಸಾಧಕನಿಗೆ ಪ್ರೇರಣಾ ಶಕ್ತಿಯಾಗಿರುವಿರೆಂದು ಶ್ಲಾಘಸಿದರು.
ಉಪನ್ಯಾಸಕರಾಗಿ ಆಗಮಿಸಿದ ಸಾಹಿತಿ ದಶರಥ ಕೋರಿ ಮಾತನಾಡಿ ಹಾಲು ಮತದ ಸಾಂಸ್ಕೃತಿಕ ಪುರುಷನಾಗಿ,ದೈವಿಕ ಪುರುಷನಾಗಿ ಸಾಕ್ಷಾತ ಪರಶಿವನ ಅಂಶವಾಗಿರುವ ಶ್ರೀ ಬೀರಲಿಂಗೇಶ್ವರರು ಭೂಲೋಕದಲ್ಲಿ ಅವತರಿಸಿದರು.ಶ್ರೀ ಲಿಂಗ ಭೀರದೇವರು ತಮ್ಮ ಚೈತನ್ಯ ಶಕ್ತಿಯಿಂದ ದುಷ್ಟ ಅಸುರರನ್ನು ಸಂಹರಿಸಿದ ಇತಿಹಾಸವನ್ನು ಅವರ ಪವಾಡಗಳು ಅವರ ಶಿಷ್ಯ ಮಹಿಮಾಂತಕ ಮಾಳಿಂಗರಾಯರ ಸಂಬಂಧಗಳ ಬಗ್ಗೆ ಕಂಬಳಿ ಬೀಸಿ ಮಳೆ ಕರೆಯುವ ಭಕ್ತಿ ಹಾಲುಮತಸ್ಥರಲ್ಲಿದೆ, ಹಾಲುಮತ ಎಂಬುದು ಪವಿತ್ರವಾದ ಮತ ಹಾಲುಮತದವರನ್ನು ಎಲ್ಲರೂ ಪೂಜ್ಯ ಭಾವನೆಯಿಂದ ಕಾಣುತ್ತಾರೆಂದು ಹೇಳಿದರು.
ನಿವೃತ್ತಿ ಶಿಕ್ಷಕರಾದ ಶ್ರೀ ಬಿ ಆಯ್ ಬಿರಾದರ್ ಅವರು ಮಾತನಾಡಿ ನಮ್ಮ ಗ್ರಾಮದಲ್ಲಿ ಪ್ರತಿಭಾ ಪುರಸ್ಕಾರ ಹಮ್ಮಿಕೊಂಡಿರುವುದು ಬಹಳ ಸಂತೋಷವಾಗಿದೆ ನಿವೃತ್ತ ಸೈನಿಕರನ್ನು ಸನ್ಮಾನಿಸಿ ಗೌರವಿಸಬೇಕೆಂದು ಹೇಳಿದರು.
ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರಿ ಸಂಘದ ಉಪಾಧ್ಯಕ್ಷ ಪಿ ಜಿ ಕಲ್ಮನಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ ಜಾತ್ರಾ ಮಹೋತ್ಸವದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಶ್ರೀ ಗೌರವಿಸಿರುವುದು ಇತರೆ ವಿದ್ಯಾರ್ಥಿಗಳಿಗೆ ಇದು ಪ್ರೇರಣಾ ಶಕ್ತಿಯಾಗಿ, ಸಾಧಕರ ಪಟ್ಟಿಯಲ್ಲಿ ಕೇವಲ ವಿದ್ಯಾರ್ಥಿನಿಯರೇ ಮೇಲುಗೖ ಸಾಧಿಸುತ್ತಿರುವುದು ನೋವಿನ ಸಂಗತಿ, ಯುವ ವಿದ್ಯಾರ್ಥಿ ಸಮುದಾಯ ಅನ್ಯ ಕಾರ್ಯಗಳಲ್ಲಿ ಸಮಯ ವ್ಯರ್ಥ ಮಾಡದೆ ಅಧ್ಯಯನದ ಕಡೆಗೆ ಗಮನಹರಿಸಿ ತಾವು ಸಾಧನೆ ಮಾಡಬೇಕು, ಸಮಾಜ ಬಾಂಧವರು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು ಹೇಳಿದ ಹಾಗೆ ಶಿಕ್ಷಣ- ಸಂಘಟನೆ-ಹೋರಾಟ ಇವು ಮೂರನ್ನು ಮೈಗೂಡಿಸಿಕೊಂಡರೆ ಒಂದು ಸಮುದಾಯ ಬೆಳವಣಿಗೆ ಹೊಂದಲು ಸಾಧ್ಯವಿದೆ, ಕನಿಷ್ಠ ಪಿಯುಸಿವರೆಗೆ ಶಿಕ್ಷಣ ಕೊಡಿಸಲು ಪ್ರಯತ್ನಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ನೆರೆವೇರಿತು.
ಮಾಜಿ ತಾಲೂಕ ಪಂಚಾಯತಿ ಸದಸ್ಯರಾದ ಕಲ್ಲನಗೌಡ ಬಿರಾದಾರ, ಅಶೋಕ್ ಗೌಡ ಪಾಟೀಲ್ ನಿವೃತ್ತಿ ಶಿಕ್ಷಕರಾದ ಬಿ ಐ ಬಿರಾದಾರ, ಡಿ ಪಿ ಕಾಗವಾಡಕರ್, ಎ ಆರ್ ಬನಸೋಡೆ, ಎಸ್ ಎಚ್ ಲಚ್ಯಾಣ, ಎಂ ಎನ್ ಐಹೊಳೆ, ಎಸ್ ಜಿ ಮಂಗಳೂರ ಬಸಪ್ಪಗೌಡ ಬಿರಾದಾರ ರಮೇಶ ದಾಯಿಗೋಡೆ ವಿಠ್ಠಲ ಬಾಬಳಗಾಂವ ಬಸವರಾಜ ಅಚ್ಚೆಗಾಂವ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಹನುಮಂತ್ ಕಾಗವಾಡಕರ ಶಿಕ್ಷಕರು ನಿರೂಪಿಸಿ ವಂದಿಸಿದರು