ಫಲಿತಾಂಶ ವೃದ್ಧಿಗೆ ಶೈಕ್ಷಣಿಕ ಚಿಂತನೆ ಅಗತ್ಯ
ಇಂಡಿ: ಪ್ರಾಥಮಿಕ ಶಿಕ್ಷಣ ಬಲವರ್ಧನೆಯಾಗದೆ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ ಅಸಾಧ್ಯ, ಈ ಹಿನ್ನಲೆಯಲ್ಲಿ ಫಲಿತಾಂಶ ವೃದ್ಧಿಗೆ ಶೈಕ್ಷಣಿಕ ಚಿಂತನೆ ಅವಶ್ಯಯೆಂದು ಮಂಗಲಾ ನಾಯಕ, ಸಹ ನಿರ್ದೇಶಕರು ಸಿಟಿಇ ಜಮಖಂಡಿ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಎಸ್.ಎಸ್. ಎಲ್.ಸಿ ಫಲಿತಾಂಶ ಸುಧಾರಣೆ ಮತ್ತು ಶೈಕ್ಷಣಿಕ ಗುಣಮಟ್ಟ ಬಲವರ್ಧನೆಯ ಇಂಡಿ ಹಾಗು ಚಡಚಣ ತಾಲೂಕ ಮುಖ್ಯೋಪಾಧ್ಯಯರ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಪ್ರೌಢಶಾಲಾ ಮುಖ್ಯೋಪಾಧ್ಯಾಯರು ಇಲಾಖೆ ನಿಗದಿಪಡಿಸಿದ 20 ಅಂಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ನಿಧಾನಗತಿ ಕಲಿಕಾ ಮಕ್ಕಳ ಪ್ರಗತಿಗೆ ವಿಶೇಷ ಕ್ರಿಯಾಯೋಜನೆ ತಯಾರಿಸಬೇಕು. ನಿರಂತರ ಗೈರು ಮಕ್ಕಳನ್ನು ಶಾಲೆಗೆ ತರುವಲ್ಲಿ ಶ್ರಮವಹಿಸಬೇಕೆಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಹಿದಾ ಅನಿಸ್.ಎಸ್. ಮುಜಾವರ ಪ್ರಾಸ್ತಾವಿಕ ನುಡಿಗಳನ್ನಾಡಿ ಈ ಭಾರಿಯ ಎಸ್.ಎಸ್.ಎಲ್.ಸಿ ತಾಲೂಕಿನ ಫಲಿತಾಂಶ ವೃದ್ಧಿಗೆ ತಯಾರಿಸಿದ ಯೋಜನೆಗಳನ್ನು ಹಂಚಿಕೊಂಡರು.
ಚಡಚಣ ಕ್ಷೇತ್ರ ಶಿಕ್ಷಣಾಧಿಕಾರಿ ಸುಜಾತಾ ಹುನ್ನೂರ,ಡಯಟ್ ಹಿರಿಯ ಉಪನ್ಯಾಸಕ ಎ.ಆರ್. ಮುಜಾವರ್,ತಾಲೂಕ ನೊಡೆಲ್ ಅಭಿಕಾರಿ ಎ.ಓ. ಹೂಗಾರ ಮಾತನಾಡಿದರು.
ಕ್ಷೇತ್ರ ಸಮನ್ವಯಧಿಕಾರಿ ಎಸ್.ಆರ್. ನಡಗಡ್ಡಿ ಸ್ವಾಗತಿಸಿದರು. ಅಕ್ಷರ ದಾಸೋಹ ಅಧಿಕಾರಿ ಸುಜಾತಾ ಪೂಜಾರಿ, ಸಿನಖೇಡ ಉಪಸ್ಥಿತರಿದ್ದರು.ಇಂಡಿ ಹಾಗು ಚಡಚಣ ತಾಲೂಕಿನ ಸರಕಾರಿ, ಅನುದಾನಿತ, ಅನುದಾನ ರಹಿತ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರಿದ್ದರು.