ಶ್ರೀ ಭೀರಲಿಂಗೇಶ್ವರ ಜಾತ್ರೋತ್ಸವ ಆಗಸ್ಟ ೩ ರಂದು
ಇಂಡಿ: ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಶ್ರೀ ಭೀರಲಿಂಗೇಶ್ವರ ಜಾತ್ರೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಗಸ್ಟ್ ೩ ರಂದು ಆಯೋಜಿಸಲಾಗಿದೆ.
ಬೆಳಿಗ್ಗೆ ೬ ಗಂಟೆಗೆ ದೇವಸ್ಥಾನದಲ್ಲಿ ಭಕ್ತರಿಂದ ವಿಶೇಷ ಅಭಿಷೇಕ, ಪೂಜೆ ನೆರವೇರಲಿದೆ. ನಂತರ ಗ್ರಾಮದಲ್ಲಿ ಕುಂಭಮೇಳ ಮೆರವಣ ಗೆಯೊಂದಿಗೆ ಭೀರಲಿಂಗಶ್ವರ ದೇವರ ಪಾಲಕಿ ಮೆರವಣ ಗೆ ನಡೆಯಲಿದೆ.
ಮಧ್ಯಾಹ್ನ ೧ ಗಂಟೆಗೆ ವಾಲಗ ಹಾಗೂ ಲಾಗಾ ಹೊಡೆಯುವ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸಂಗೋಗಿ ಹೀರೋಡೇಶ್ವರ ಡೊಳ್ಳಿನ ವಾಲಗ ಸಂಘದವರು ಹಾಗೂ ಶಿರನಾಳದ ಶ್ರೀ ಭೀರಲಿಂಗಶ್ವರ ಡೊಳ್ಳಿನ ವಾಲಗ ಸಂಘದವರು ಭಾಗವಹಿಸಿ ತಮ್ಮ ಕಲೆ ಪ್ರದರ್ಶಿಸಲಿದ್ದಾರೆ. ಬಳಿಕ ರಾತ್ರಿ ೮ ಗಂಟೆಗೆ ಪ್ರತಿಭಾ ಪುರಸ್ಕಾರ ಹಾಗೂ ಸೇವಾ ನಿವೃತ್ತರಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದೆ.
ನಂತರ ರಾತ್ರಿ ೧೦ ಗಂಟೆಗೆ ಡೊಳ್ಳಿನ ಕಲೆ ಪ್ರದರ್ಶನ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮುಗಳಿಹಾಳದ ಮಾಳಿಂಗರಾಯ ಡೊಳ್ಳಿನ ಕಲಾ ಸಂಘದವರಿAದ ಹಾಗೂ ಕುರಗೋಟದ ಅಮೋಘಸಿದ್ದೇಶ್ವರ ಡೊಳ್ಳಿನ ಸಂಘದವರಿAದ ಡೊಳ್ಳಿನ ಹಾಡಿಕೆ ಪ್ರದರ್ಶನ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.