ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್‌ಟಾಪ್ ವಿತರಿಸಿದ ಶಾಸಕ ಎಂಆರ್ ಮಂಜುನಾಥ್
ವರದಿ:ಚೇತನ್ ಕುಮಾರ್ ಎಲ್, ಚಾಮರಾಜನಗರ
ಹನೂರು: ತಾಲೂಕಿನ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್‌ಟಾಪ್‌ಗಳನ್ನು ಶಾಸಕ ಎಂ.ಆರ್. ಮಂಜುನಾಥ್ ವಿತರಿಸಿದರು.
ಪಟ್ಟಣದ ಲೋಕೋಪಯೋಗಿ ವಸತಿ ಗೃಹದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಗ್ರಾಮ ಆಡಳಿತಾಧಿಕಾರಿಗಳು ತ್ವರಿತ ಹಾಗೂ ಪರಿಣಾಮಕಾರಿ ಆಡಳಿತ ಒದಗಿಸಲು ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು. ಲ್ಯಾಪ್‌ಟಾಪ್‌ಗಳ ವಿತರಣೆಯಿಂದ ನವೀನ ಆಡಳಿತಕ್ಕೆ ಹೆಚ್ಚಿನ ಅನುಕೂಲವಾಗುತ್ತದೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳ ಸಮಯಪ್ರಜ್ಞೆ ಹಾಗೂ ತಂತ್ರಜ್ಞಾನ ಪ್ರಜ್ಞೆ ಎರಡೂ ಅಗತ್ಯ ಎಂಬುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿಯ ಉಪಾಧ್ಯಕ್ಷ ಅನಂತ್ ಕುಮಾರ್ ,ತಾಲೂಕು ತಹಶೀಲ್ದಾರ್ ಚೈತ್ರ, ಸೇರಿದಂತೆ ಪ್ರಭಾರ ರಾಜಶ್ವ ನಿರೀಕ್ಷಕ ಶೇಷಣ್ಣ, ಗ್ರಾಮ ಅಡಳಿತಾಧಿಕಾರಿ ಸರವಣ ವಿನೋದ್, ಮಾರುತಿ ,ನವೀನ್ ಕಾರ್ತಿಕ್ ನಾಗರಾಜು ಹೇಮಾ ಹಾಗೂಬ ಹಲವರು ಉಪಸ್ಥಿತರಿದ್ದರು.