ರಾಯಚೂರು: ಕಲ್ಯಾಣ ಕರ್ನಾಟಕ ಭಾಗದ ಪರಿವರ್ತನೆಯಾಗದೆ ಉಳಿದಿರುವ ೧೯೯೫ರ ನಂತರದ ಎಲ್ಲಾ ಕನ್ನಡ ಮಾಧ್ಯಮ ಶಾಲೆಗಳನ್ನು ವೇತನನುದಾನಕ್ಕೆ ಒಳಪಡಿಸುವ ಹಾಗೂ ೩೭೧ ಜೆ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ಕಲ್ಯಾಣ ಕರ್ನಾಟಕದ ಕನ್ನಡ ಮಾಧ್ಯಮ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಹೈದೆರಾಬಾದ್ ಕರ್ನಾಟಕವು ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದೆ ಸರ್ಕಾರ ಸದರಿ ಭಾಗಕ್ಕೆ ೩೭೧ಜೆ ನೀಡಿ ಸದೃಢವಾಗಿಸುತ್ತಿರುವುದು ಶ್ಲಾಘನೀಯ ಮತ್ತು ಅದನ್ನು ಅಭಿವೃದ್ಧಿ ಪಡಿಸಬೇಕೆನ್ನುವ ಮಹದಾಕಾಂಕ್ಷೆಯಿಂದ ಮಹತ್ವಕಾಂಕ್ಷಿ ಯಿಂದ ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ಮರು ನಾಮಕರಣ ಮಾಡಿ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡುತ್ತಿರುವುದು ಹರ್ಷಧಾಯಕವಾಗಿದೆ.
ಇತರ ಪ್ರದೇಶಗಳಲ್ಲಿ ಭಾಷೆಗಳ ಪ್ರಭಲಟತೆಯಿಂದ ಕನ್ನಡ ಭಾಷೆಯು ಕುಂಟಿತವಾಗುತ್ತಿರುವುದು ಶೋಚನಿಯ ವಿಷಯವಾಗಿದೆ.
ಕನ್ನಡ ಭಾಷೆ ಮತ್ತು ಕನ್ನಡ ಮಾಧ್ಯಮ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಪರಸ್ಥಿತಿ ಚಿಂತಾಜನಕವಾಗಿದೆ. ಭಾಷೆಯ ಉಳಿವಿಗಾಗಿ ಹಲವಾರು ಸಂಘ ಸಂಸ್ಥೆಗಳು ಪರಿಶ್ರಮ ಪಡುತ್ತಿವೆ. ಕಲ್ಯಾಣ ಕರ್ನಾಟಕ ಪ್ರದೇಶದ ಕನ್ನಡ ಮಾಧ್ಯಮ ಶಾಲೆಗಳನ್ನು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳು ರಾಜ್ಯ ಸರ್ಕಾರ ಆಂಗ್ಲ ಮಾಧ್ಯಮಕ್ಕೆ ಪರಿವರ್ತನೆ ಮಾಡಿಕೊಳ್ಳಲು ಅವಕಾಶ ನೀಡಿದರು ಕನ್ನಡ ಭಾಷೆಯ ಅಭಿಮಾನದಿಂದ ಮತ್ತು ಕನ್ನಡ ಭಾಷೆಯ ಉಳಿವಿಗಾಗಿ ಹಾಗೂ ಕನ್ನಡ ಮಾಧ್ಯಮ ಶಿಕ್ಷಕ ಮತ್ತು ಸಿಬ್ಬಂದಿಯ ವರ್ಗದವರ ಶ್ರೇಯಸ್ಸನ್ನು ಬಯಸಿ ಆಂಗ್ಲ ಮಾಧ್ಯಮಕ್ಕೆ ಪರಿವರ್ತನೆ ಯಾಗದೆ ಕನ್ನಡ ಮಧ್ಯಮದಲ್ಲೇ ಭೋದಿಸುತ್ತೇವೆ.
ಸರ್ಕಾರ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸಮಾಡುತ್ತಿರುವ ಶಿಕ್ಷಕ ಮತ್ತು ಸಿಬ್ಬಂದಿಗೆ ವರ್ಗಕ್ಕೆ ಯಾವುದೆ ತರಹದ ಆರ್ಥಿಕ ನೆರವು ನೀಡದಿರುವುದು ಕೇದಕರವಾಗಿದೆ ಕನ್ನಡ ಭಾಷೆಯ ಉಳಿವಿಗಾಗಿ ಎಲ್ಲರ ಆಧ್ಯ ಕರ್ತವ್ಯವಾಗಿದೆ ಎನ್ನುವ ಬೇಡಿಕೆಗಳಾದ ಕನ್ನಡ ಮಾಧ್ಯಮ ಶಾಲೆಗಳನ್ನು ವೇತನನುದಾನಕ್ಕೆ ಒಳಪಡಿಸುವುದು ಮೂಲಭೂತ ಸೌಕರ್ಯಕ್ಕಾಗಿ ೩೭೧ ಜೆ ಸವಲತ್ತಿಗೆ ಕ್ರಮ ತೆಗೆದುಕೊಳ್ಳಬೇಕು ಎನ್ನುವ ಬೇಡಿಕೆಯನ್ನು ಒಳಗೊಂಡ ಮನವಿ ಯನ್ನು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಎಸ್. ರವಿಕುಮಾರ್, ಶೇಕ್ ಮಹೇಬೂಬ್, ಹನುಮಂತರೆಡ್ಡಿ, ನರಸಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.