ಕಲಾ ಪ್ರತಿಭೆ ಕಾರ್ಯಕ್ರಮ ಮಕ್ಕಳಲ್ಲಿ ಹುಗುಗಿರುವ ಪ್ರತಿಭೆ ಹೊರಬರಲಿ : ರೇಷ್ಮಾ ಚವ್ಹಾಣ
ಇಂಡಿ: ಪ್ರತಿಯೊಬ್ಬ ಮಕ್ಕಳಲ್ಲಿ ಒಂದಿಲ್ಲ ಒಂದು ಪ್ರತಿಭೆ ಇರುತ್ತದೆ. ಅದನ್ನು ಹೊರತರುವ ವೇದಿಕೆ ಸೃಷ್ಠಿಸಬೇಕಿದೆ. ಆಗ ಮಕ್ಕಳ ಪ್ರತಿಭೆ ಹೊರಬರಲು ಸಾಧ್ಯ ಎಂದು ಇಂಡಿ ತಾಲ್ಲೂಕು ಶಿಶು ಅಭಿವೃದ್ಧಿ ಅಧಿಕಾರಿ ರೇಷ್ಮಾ ಚವ್ಹಾಣ ಹೇಳಿದರು.
ಗುರುವಾರ ಇಂಡಿ ಪಟ್ಟಣದ ಸರ್ಕಾರಿ ಕನ್ನಡ ಹೆಣ್ಣುಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಾಲ ಭವನ ಸೋಸೈಟಿ ಬೆಂಗಳೂರು, ಜಿಲ್ಲಾ ಬಾಲ ಭವನ ಸಮಿತಿ ವಿಜಯಪುರ, ತಾಲ್ಲೂಕು ಬಾಲ ಭವನ ಸಮಿತಿ ಇಂಡಿ ಹಾಗೂ ಕೆಜಿಎಸ್ ಶಾಲೆ ಇಂಡಿ ಇವರ ಸಹಯೋಗದಲ್ಲಿ ಕೆಜಿಎಸ್ ಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳ ಕಲಾ ಪ್ರತಿಭೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂತಹ ಕಾರ್ಯಕ್ರಮಗಳು ಆಗಾಗ ಆಯೋಜನೆ ಮಾಡಿದರೆ ಮಕ್ಕಳಲ್ಲಿಯ ಕಲೆ ಹೊರತರಲು ಸಾಧ್ಯವಾಗುತ್ತದೆ ಎಂದರು.
ದೈಹಿಕ ಶಿಕ್ಷಣ ಶಿಕ್ಷಕ ದಶರಥ ಕೋರಿ ಮಾತನಾಡಿ, ರವೀಂದ್ರನಾಥ ಟ್ಯಾಗೋರ ಅವರು ನೋಬೆಲ್ ಪ್ರಶಸ್ತಿ ಪಡೆಯಲು ಅವರಲ್ಲಿರುವ ಸಾಹಿತ್ಯ ಪ್ರತಿಭೆಯೇ ಕಾರಣವಾಯಿತು. ಹೀಗೆ ಮಹಾನ್ ಸಾಧಕರು ತಮ್ಮಲ್ಲಿರುವ ಪ್ರತಿಭೆಯಿಂದಲೇ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಅಂತವರ ಹೆಸರು ಅಜರಾಮರವಾಗಿ ಉಳಿದಿದೆ. ಅವರಂತೆ ನೀವೂ ಕೂಡಾ ನಿಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಿ ಸಾಧಕರಾಗಬೇಕೆಂದರು.
ಪ್ರತಿಭಾ ಕಾರ್ಯಕ್ರಮದಲ್ಲಿ ಚಿತ್ರಕಲೆ, ನಾಟಕ, ನೃತ್ಯ, ರಂಗೋಲಿ, ಕೋಲಾಟ, ಸೃಜನಾತ್ಮಕ ಬರವಣ ಗೆ ಹೀಗೆ ಹಲವಾರು ಸ್ಪರ್ಧೆಗಳಲ್ಲಿ ನೂರಾರು ಜನ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿಯರಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಣೆ ಮಾಡಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ಆನಂದ ಕಂಬಾರ ಅಧ್ಯಕ್ಷತೆ ವಹಿಸಿದ್ದರು. ವಿಜಯಪೂರ ಜಿಲ್ಲಾ ಬಾಲ ಭವನ ಸಮಿತಿ ಮೇಲ್ವಿಚಾರಕಿ ಗೀತಾ ಬಳ್ಳಾ, ಸದಸ್ಯ ಪ್ರಶಾಂತ ಗುಂದಗಿ, ಮುಖ್ಯಗುರು ಎ.ಎಚ್.ಹೊಸಮನಿ, ಶಿಕ್ಷರಾದ ಎಸ್.ಎಸ್.ಕಾಂಬಳೆ, ಎಂ.ಎ.ಲಕಡಹಾರ, ಮಹೇಶ ಶಿಂಧೆ, ಎಚ್.ಎಂ.ಕುಲಕಣ ð, ಎಸ್.ಆರ್.ಕನಮಡಿ, ಎಸ್.ಎಸ್.ರಾಯಗೊಂಡ, ಎಸ್.ಟಿ.ಬಗಲಿ, ಎಂ.ಬಿ.ಭಾಸಗಿ, ಬಿ.ಸಿ.ಬಗವಂತಗೌಡರ, ವೈ.ಎನ್.ಚಿಗರಿ, ಎಂ.ಡಿ.ದೊಡಮನಿ ಉಪಸ್ಥಿತರಿದ್ದರು.
ಶಿಕ್ಷಕ ಪಿ.ಜಿ.ಕಲ್ಮನಿ ಸ್ವಾಗತಿಸಿ, ನಿರುಪಿಸಿದರು.
ಇಂಡಿ: ಪಟ್ಟಣದ ಸರ್ಕಾರಿ ಹೆಣ್ಣುಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಕಲಾ ಪ್ರತಿಭೆಯಲ್ಲಿ ಮಕ್ಕಳು ಕೋಲಾಟ ಪ್ರದರ್ಶಿಸಿದರು