ಸಹಕಾರ ಭಾರತಿ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ
ಇಂಡಿ: ಸಹಕಾರ ಭಾರತಿ ಕರ್ನಾಟಕದ ಇಂಡಿ ತಾಲೂಕಿನ ಪದಾಧಿಕಾರಿಗಳನ್ನು ವಿಜಯಪುರದ ಆಶ್ರಮ ರಸ್ತೆಯಲ್ಲಿರುವ ಭಾವಸಾರ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಆಯ್ಕೆ ಮಾಡಿ ಸನ್ಮಾನಿಸಲಾಯಿತು.
ಸಹಕಾರ ಭಾರತಿ ತಾಲೂಕು ಅಧ್ಯಕ್ಷರಾಗಿ ಅಶೋಕಗೌಡ ಬಿರಾದಾರ, ಸಂಘಟನಾ ಕಾರ್ಯದರ್ಶಿಯಾಗಿ ಶಂಕರಲಿಂಗ ಜಮಾದಾರ, ಪ್ರಧಾನ ಕಾರ್ಯದರ್ಶಿಯನ್ನಾಗಿ ನಾಗರಾಜ ದಶವಂತ, ಜಿಲ್ಲಾ ಸಮಿತಿಗೆ ಅನೀಲಪ್ರಸಾದ ಏಳಗಿ, ಸಂತೋಷ ಕೆಂಬೋಗಿ ಅವರನ್ನು ಆಯ್ಕೆ ಮಾಡಿ ಜಿಲ್ಲಾ ಘಟಕದ ವತಿಯಿಂದ ಸತ್ಕರಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಂಸದ ರಮೇಶ ಜಿಗಜಿಣಗಿ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ, ಸಹಕಾರ ಭಾರತಿ ಕರ್ನಾಟಕ ರಾಜ್ಯಾಧ್ಯಕ್ಷ ಪ್ರಭುದೇವ ಮಾಗನೂರ, ಸಂರಕ್ಷಕ ರಮೇಶ ವೈದ್ಯಜಿ, ನಿವೃತ್ತ ಅಪರ ನಿರ್ದೇಶಕ ಎಂ.ಜೆ. ಪಾಟೀಲ, ಡಿ.ವೈ.ಎಸ್.ಪಿ ಬಸವರಾಜ ಎಲಿಗಾರ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ರಾಜಶೇಖರ ಗುಡದಿನ್ನಿ, ನರಸಿಂಹ ಕಾಮತ್, ಸಹಕಾರ ಭಾರತಿ ವಿಜಯಪೂರ ಜಿಲ್ಲಾಧ್ಯಕ್ಷ ಶ್ರೀಹರ್ಷಗೌಡ ಪಾಟೀಲ, ಆರ್.ಆರ್. ನಾಯಿಕ್, ಶ್ರೀಮಂತ ಇಂಡಿ, ಸುಭಾಷ ಇಂಡಿ ಸೇರಿದಂತೆ ಇನ್ನಿತರರು ಇದ್ದರು.
ಇಂಡಿ: ಸಹಕಾರ ಭಾರತಿ ಕರ್ನಾಟಕದ ಇಂಡಿ ತಾಲೂಕಿನ ಪದಾಧಿಕಾರಿಗಳನ್ನು ವಿಜಯಪುರದ ಆಶ್ರಮ ರಸ್ತೆಯಲ್ಲಿರುವ ಭಾವಸಾರ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಆಯ್ಕೆ ಮಾಡಿ ಸತ್ಕರಿಸಲಾಯಿತು.