ಅಫಜಲಪುರ: ನವೋದಯ ಹಾಗೂ ನವ್ಯ ಸಾಹಿತ್ಯಕ್ಕೆ ಹೊಸ ರೂಪ ನೀಡಿರುವ ನಾಡಿನ ಹೆಸರಾಂತ ಕವಿ ಡಾ. ಚೆನ್ನವೀರ ಕಣವಿ ನಿಧನದಿಂದ ಕನ್ನಡ ಸಾಹಿತ್ಯಕ್ಕೆ ನಷ್ಟವನ್ನುಂಟು ಮಾಡಿದೆ ಎಂದು ನಿವೃತ್ತ ಶಿಕ್ಷಕ ಶೆಂಕ್ರೇಪ್ಪ ಮಣೂರ ಹೇಳಿದರು.
ಅವರು ಪಟ್ಟಣದ ಕನ್ನಡ ಭವನದಲ್ಲಿ ತಾಲೂಕು ಕಸಾಪ ವತಿಯಿಂದ ಆಯೋಜಿಸಿದ ಶೃದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿ ಹಿರಿಯ ತಲೆಮಾರಿನ ಕವಿ ಡಾ. ಚೆನ್ನವೀರ ಕಣವಿ ಅವರು ಸುಧಿರ್ಘ ಕಾಲ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿ ಪ್ರಸಿದ್ದರಾಗಿದ್ದರು. ಅವರ ಅನೇಕ ಕೃತಿಗಳು ಯುವ ಲೇಖಕರನ್ನು ಆಕರ್ಷಿಸುವಂತಿವೆ ಅವರ ಅಗಲಿಕೆಯಿಂದ ಸಾಹಿತ್ಯ ಲೋಕವು ದುಃಖದಲ್ಲಿದೆ ಎಂದರು. ಸಾಹಿತಿ ಹಾಗೂ ಪ್ರಾಚಾರ್ಯ ಡಾ.ಸಂಗಣ್ಣ ಎಂ.ಸಿಂಗೆ ಹಾಗೂ ಮುಖಂಡ ರವಿ ಗುಂಡಗುರ್ತಿ ಮಾತನಾಡಿ ಕನ್ನಡ ನಾಡಿನ ಅನೇಕ ಕವಿಗಳು ಸಾಹಿತ್ಯ ಚಟುವಟಿಕೆಗಳ ಮೂಲಕ ನಮ್ಮ ನಾಡನ್ನು ಶ್ರೀಮಂತಗೊಳಿಸಿದ್ದಾರೆ. ಅವರಲ್ಲಿ ಒಬ್ಬರಾದ ಖ್ಯಾತ ವಿದ್ವಾಂಸ ಚೆನ್ನವೀರ ಕಣವಿ ಒಬ್ಬರಾಗಿದ್ದಾರೆ. ನಮ್ಮಿಂದ ಅಗಲಿದ ಕವಿ ಚೆನ್ನವೀರ ಕಣವಿ ಅವರು ತಮ್ಮ ಸಾಹಿತ್ಯದ ಮೂಲಕ ಸದಾ ನಮ್ಮೊಂದಿಗೆ ಜೀವಂತ ಇರಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ಮಹೇಶ ಆಲೇಗಾಂವ, ಶ್ರೀಶೈಲ್ ಮ್ಯಾಳೇಶಿ, ಬಸಪ್ಪ ಜಾಬಾ, ದಲಿತ ಸೇನೆ ತಾಲೂಕು ಅಧ್ಯಕ್ಷ ರೂಪಾ ಸಾಲೋಟಗಿ, ರಾಜು ಅಡಕಿ, ಗೌತಮ ಸಕ್ಕರಗಿ, ಸದ್ದಾಂ ನಾಕೇದಾರ, ಮಗಿ ಸರ್ ಸೇರಿದಂತೆ ಇತರರಿದ್ದರು.