ಸಾಹಿತ್ಯ ಪ್ರಕಟಿಸುವ ಮೂಲಕ ಗತಕಾಲದ ಇತಿಹಾಸವನ್ನು ಇಂದಿನ ಯುವ ಜನತೆ ಅಧ್ಯಯನ ಮಾಡಲು ನೆರವಾಗಿದ್ದಾರೆ..!
ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನ ಕೇಂದ್ರ ಪ್ರಕಟಿಸಿರುವ ಆದಿಲ್ ಶಾಹಿ ಕಾಲದ ಅನುವಾದ ಸಾಹಿತ್ಯದ ಸಂಪುಟಗಳನ್ನು ಸಚಿವ ಎಂ.ಬಿ.ಪಾಟೀಲರ ಸೂಚನೆ ಹಿನ್ನೆಲೆಯಲ್ಲಿ ಇಂದು ನಗರದ ಹಾಸಿಂ ಪೀರ ದರ್ಗಾದ ಶ್ರೀ ಸೈಯ್ಯದ ಮೊಹಮ್ಮದ ತನ್ವಿರ್ ಹಾಸ್ಮಿ ಅವರಿಗೆ ನೀಡಲಾಯಿತು.
ಸಚಿವ ಎಂ ಬಿ ಪಾಟೀಲ ಅವರು ಆದಿಲ್ ಶಾಹಿ ಕಾಲದ ಉರ್ದು, ದಖನಿ, ಪರ್ಶಿಯನ್ ಹಾಗೂ ಅರೆಬಿಕ್ ಸಾಹಿತ್ಯವನ್ನು ಹಳಕಟ್ಟಿ ಸಂಶೋಧನ ಕೇಂದ್ರದ ಮೂಲಕ ಕನ್ನಡ ಭಾಷೆಗೆ ಅನುವಾದಿಸಿದ್ದು, ಈ ಸಂಪುಟಗಳನ್ನು ಸಂಶೋಧನ ಕೇಂದ್ರದ ಸಂಯೋಜಕ ಡಾ. ವಿ. ಡಿ. ಐಹೊಳ್ಳಿ ಅವರು ಸೈಯ್ಯದ ಮೊಹಮ್ಮದ ತನ್ವೀರ್ ಹಾಸ್ಮಿ ಅವರಿಗೆ ಇಂದು ಶುಕ್ರವಾರ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಸೈಯ್ಯದ ಮೊಹಮ್ಮದ ತನ್ವಿರ್ ಹಾಸ್ಮಿ, ಸಚಿವ ಎಂ. ಬಿ. ಪಾಟೀಲ ಅವರು ಅನುವಾದ ಸಾಹಿತ್ಯ ಪ್ರಕಟಿಸುವ ಮೂಲಕ ಗತಕಾಲದ ಇತಿಹಾಸವನ್ನು ಇಂದಿನ ಯುವ ಜನತೆ ಅಧ್ಯಯನ ಮಾಡಲು ನೆರವಾಗಿದ್ದಾರೆ. ಸಚಿವರ ಈ ಕಾರ್ಯ ಶ್ಲಾಘನೀಯವಾಗಿದ್ದು, ಭಾತೃತ್ವದ ಪ್ರತೀಕವಾಗಿದೆ. ಸರ್ವಜನರ ಏಳಿಗಾಗಿ ಶ್ರಮಿಸುತ್ತಿರುವ ಅವರಿಗೆ ಶುಭ ಹಾರೈಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಬಂದೆನವಾಜ್ ಸುತಾರ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.