ಸ್ವಂತ ಸೂರಿಲ್ಲದೇ ಅಂತಂತ್ರ ಸ್ಥಿತಿಯಲ್ಲಿ ಮಕ್ಕಳು ವಿದ್ಯಾಭ್ಯಾಸ..!
ವಿಜಯಪುರ : ಕೋಲಾರ ತಾಲೂಕಿನ ರೋಣಿಹಾಳ ಗ್ರಾಮದಲ್ಲಿರುವ ಸರಕಾರಿ ಕನ್ನಡ ಪ್ರಾಥಮಿಕ ಶಾಲೆಯೂ ನೂರು ವಸಂತಗಳನ್ನು ಪೂರೈಸಿ ಅನೇಕ ಸಾಧಕರಿಗೆ ಪ್ರೇರಣೆ ಆಗಿ ಸಾವಿರಾರು ಜನರ ಬದುಕು ಕಟ್ಟಿಕೊಟ್ಟ ಈ ಶಾಲೆ ಇಂದು ಸ್ವಂತ ಸೂರಿಲ್ಲದೇ ಅಂತಂತ್ರ ಸ್ಥಿತಿಯಲ್ಲಿ ಮಕ್ಕಳು ವಿದ್ಯಾಭ್ಯಾಸ ಮಾಡಬೇಕಾಗಿರುವ ಕೆಟ್ಟ ಪರಿಸ್ಥಿತಿ ಈ ಶಾಲೆಗೆ ಬಂದಿದೆ ಇದನ್ನು ಕೂಡಲೇ ಅಭಿವೃದ್ಧಿ ಪಡಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ವತಿಯಿಂದ ಜಿಲ್ಲಾಧಿಕಾರಿಗಳಾದ ಡಾ.ಆನಂದ ಕೆ ಅವರಿಗೆ ಮನವಿ ಸಲ್ಲಿಸಲಾಯಿತು.
ರೋಣಿಹಾಳದ ಪ್ರಾಥಮಿಕ ಶಾಲೆಯಲ್ಲಿ ಒಂದುಕಾಲದಲ್ಲಿ ೫೦೦ ಕ್ಕೂ ಅಧಿಕ ಮಕ್ಕಳು ಕಲಿಯುತ್ತಿದ್ದರು, ಸಧ್ಯ ಮೂಲಭೂತ ಸೌಕರ್ಯಗಳಿಲ್ಲದೇ ೧೪೦ ಮಕ್ಕಳು ತಮ್ಮ ಜೀವಭಯದಲ್ಲಿ ಇಲ್ಲಿ ವಿಧ್ಯಭ್ಯಾಸ ಮಾಡುತ್ತಿದ್ದಾರೆ. ಮೇಲ್ಚಾವಣಿ ಸಂಪೂರ್ಣ ಬಿದ್ದು ಮಳೆ ಬಂದರೆ ಸಾಕು ಶಾಲೆಗೆ ರಜೆ ಘೋಷಣೇ ಮಾಡಬೇಕಾದ ಅನಿವಾರ್ಯತೆ ಇದೆ, ಶುಧ್ಧಕುಡಿಯುವ ನೀರು, ಶೌಚಾಲಯ, ಪ್ರಯೋಗಾಲಯ, ಕಂಪ್ಯೂಟರ್ ಆಟದ ಸಾಮಗ್ರಿಗಳು ಇಲ್ಲದೇ ಮಕ್ಕಳು ಅತಂತ್ರ ಸ್ಥಿತಿಯಲ್ಲಿ ಬಡ ರೈತರ ಮಕ್ಕಳು ಅನಿವಾರ್ಯ ಪರಿಸ್ಥಿತಿಯಲ್ಲಿ ಕಲಿಯುತ್ತಿದ್ದಾರೆ.
ಅದೇರೀತಿ ಸರಕಾರಿ ಆಸ್ಪರ್ತೆಯಲ್ಲಿ ಸಿಬ್ಬಂದಿಗಳ ಗೈರು ಬಂದುಕಡೆಯಾದರೆ ಸರಿಯಾದ ಔಷಧಿ ಸಿಗದೇ ವಿಜಯಪುರಕ್ಕೆ ರೋಗಿಗಳು ಹೋಗಬೇಕಾದ ಅನಿವಾರ್ಯತೆ ಜೊತೆಗೆ ಗ್ರಾಮಲದಲಿ ಕುಡಿಯುವ ನೀರು ಸರಿಯಾಗಿ ಬರುತ್ತಿಲ್ಲ, ಸರಿಯಾದ ಚರಂಡಿ ಇಲ್ಲದೇ ಎಲ್ಲೆಂದರಲ್ಲಿ ಕೊಳಚೆ ನೀರು ನಿಂತು ಕ್ರೀಮಿ ಕೀಟಗಳು ಹೆಚ್ಚಾಗಿ ರೋಗದ ಭೀತಿಯಲ್ಲಿ ಸಾರ್ವಜನಿಕರು ಬದುಕುವಂತಾಗಿದೆ ಎಂದರು.
ಈ ವೇಳೆ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಕೂಡಲೇ ಸಂಬAಧಿಸಿದ ಅಧಿಕಾರಿಗಳಿಗೆ ತಿಳಿಸಿ ಈ ಎಲ್ಲಾ ಕೆಲಸಗಳನ್ನು ಮಾಡಿಸುವುದಾಗಿ ಭರವಸೆ ನೀಡಿದರು.
ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ, ಕೋಲಾರ ತಾಲೂಕಾ ಅಧ್ಯಕ್ಷರಾದ ಸೋಮು ಬಿರಾದಾರ, ಮುಖಂಡರಾದ ಮಹಾದೇವಪ್ಪ ತೇಲಿ,ಶಶಿಕಾಂತ ಬಿರಾದಾರ, ಬಸವರಾಜ ನ್ಯಾಮಗೊಂಡ, ಶ್ರೀಶೈಲ ಬಡಗಿ, ಶಾನೂರ ನಂದರಗಿ ಸೇರಿದಂತೆ ಇತರರು ಇದ್ದರು.