ಸಹಕಾರ ಭಾರತಿ ಜಿಲ್ಲಾಧ್ಯಕ್ಷರಾಗಿ ಶ್ರೀಹರ್ಷಗೌಡ ಪಾಟೀಲ
ಸಂಘಟನಾ ಕಾರ್ಯದರ್ಶಿ ದೀಪಕ್ ಶಿಂತ್ರೆ, ಪ್ರಧಾನ ಕಾರ್ಯದರ್ಶಿ ಪರಶುರಾಮ ಚಿಂಚಲಿ ಆಯ್ಕೆ
ವಿಜಯಪುರ : ಸಹಕಾರ ಭಾರತಿ ಕರ್ನಾಟಕ ನೂತನ ವಿಜಯಪುರ ಜಿಲ್ಲಾಧ್ಯಕ್ಷ ಶ್ರೀಹರ್ಷಗೌಡ ಪಾಟೀಲ್, ಸಂಘಟನಾ ಕಾರ್ಯದರ್ಶಿ ದೀಪಕ್ ಶಿಂತ್ರೆ, ಪ್ರಧಾನ ಕಾರ್ಯದರ್ಶಿ ಪರಶುರಾಮ ಚಿಂಚಲಿ ಆಯ್ಕೆಯಾಗಿದ್ದು, ಜುಲೈ ೨೫ ರಂದು ನಗರದ ಭಾವಸರ್ ಸಾಂಸ್ಕೃತಿಕ ಭವನದಲ್ಲಿ ರಾಜ್ಯಾಧ್ಯಕ್ಷರಿಂದ ಪದಗ್ರಹಣ ಕಾರ್ಯಕ್ರಮ ನೆರವೇರುವುದು.
ಅಯ್ಕೆಗೊಂಡ ನೂತನ ಜಿಲ್ಲಾದ್ಯಕ್ಷರಿಂದ ಜಿಲ್ಲಾ ಕಾರ್ಯಕಾರಿ ಸದಸ್ಯರು, ತಾಲೂಕು ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಮಹಿಳಾ ಮುಖ್ಯಸ್ಥರು ಮತ್ತು ವಿವಿಧ ಪ್ರಕೋಷ್ಟ ಅಧಿಕಾರಿಗಳ ಪದಗ್ರಹಣ ನೆರವೇರುವುದು.
ಈ ಸಮಾರಂಭವನ್ನು ಸಂಸದರಾದ ರಮೇಶ್ ಜಿಗಜಿಣಗಿ ಅವರು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಹಕಾರ ಭಾರತಿಯ ರಾಷ್ಟ್ರೀಯ ಸಂರಕ್ಷಕ ರಮೇಶ್ ವೈದ್ಯಜಿ, ರಾಜ್ಯ ಅಧ್ಯಕ್ಷ ಪ್ರಭುದೇವ್ ಮಾಗನೂರ್, ರಾಜ್ಯ ಮುಖ್ಯ ಕಾರ್ಯದರ್ಶಿ ನರಸಿಂಗ್ ಕಾಮತ್, ಮಾಜಿ ಶಾಸಕ ಅರುಣ್ ಶಹಪುರ್, ನಿವೃತ್ತ ಅಪರ ನಿಬಂಧಕರು ಸಹಕಾರಿ ಇಲಾಖೆ, ಎಂ.ಜಿ. ಪಾಟೀಲ್, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷ ರಾಜಶೇಖರ ಗುಡದಿನ್ನಿ, ಶ್ರೀ ಸಿದ್ಧೇಶ್ವರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ವಿಜಯಕುಮಾರ್ ಇಜೇರಿ, ಶಾಂತೇಶ್ವರ ಸಹಕಾರಿ ಸಂಘದ ಸಂಸ್ಥಾಪಕ ಅಧ್ಯಕ್ಷ ಶ್ರೀಮಂತ್ ಇಂಡಿ, ಬಿಜೆಪಿಯ ಬೆಳಗಾವಿ ವಿಭಾಗದ ಪ್ರಭಾರಿ ಚಂದ್ರಶೇಖರ ಕವಟಗಿ, ಮಾಜಿ ಉಪಮೇಯರ್ ರಾಜೇಶ್ ದೇವಗಿರಿ ಉಪಸ್ಥಿತರಿರುತ್ತಾರೆ. ಸಹಕಾರ ಭಾರತಿ ಮಾಜಿ ಅಧ್ಯಕ್ಷ ಡಾ. ಆರ್.ಆರ್. ನಾಯಕ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಬಸವಣ್ಣನವರ ವಚನ ಸಾಹಿತ್ಯವನ್ನು ಇಂಗ್ಲಿಷ್‌ಗೆ ಅನುವಾದಿಸಿದ ಗ್ರಂಥ ಲೇಖಕ, ಉಪಪೋಲಿಸ ಅಧೀಕ್ಷಕರು ಬಸವರಾಜ ಯಲಿಗಾರ ಅವರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು ಎಂದು ಬೆಳಗಾವಿ ವಿಭಾಗೀಯ ಕಾರ್ಯದರ್ಶಿ ಸುಭಾಸ ಇಂಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶ್ರೀಹರ್ಷಗೌಡ ಪಾಟೀಲ
ಮೊ. ೯೯೪೫೬೬೬೬೬೬