ಸಚಿವ ಎಂ.ಬಿ.ಪಾಟೀಲ ಅವರು ಜು 11 – 14 ಗೆ ವಿಜಯಪುರ ಜಿಲ್ಲೆಯಲ್ಲಿ ಪ್ರವಾಸ
ವಿಜಯಪುರ 9. ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ದಿ.11 ಶುಕ್ರವಾರದಿಂದ ದಿ.14 ಸೋಮವಾರದವರೆಗೆ ವಿಜಯಪುರ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ದಿ.11 ಶುಕ್ರವಾರ ಬೆ.10.30ಗಂ. ಬಬಲೇಶ್ವರ ವಿಧಾನಸಭಾ ಕ್ಷೇತ್ರದ ತಿಕೋಟಾ ತಾಲೂಕಿನ ಕೊರಬು ಗಲ್ಲಿ ರೂ.495 ಲಕ್ಷ ವೆಚ್ಚದಲ್ಲಿ ತುಬಚಿ ಬಬಲೇಶ್ವರ ಏತನೀರಾವರಿ ಯೋಜನೆಯ ಡಿ.ಸಿ-2 ರಿಂದ ಜಂಕ್ಷನ್ ವರೆಗೆ ವ್ಹಾಯಾ ತಿಕೋಟಾ ಕೆರೆ ಮತ್ತು ಕೊರಬು ಗಲ್ಲಿ ಮಸೂತಿ ವರೆಗೆ 5 ಕಿ.ಮೀ ರಸ್ತೆ ಸುಧಾರಣೆ ಮತ್ತು ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಿದ್ದಾರೆ.
ನಂತರ ಬೆ.12ಗಂ.ಮಲಕನದೇವರಹಟ್ಟಿ ಇಟರಾಯನಗುಡಿ ಗುಡಿಯಿಂದ ರೂ.495 ಲಕ್ಷ ವೆಚ್ಚದಲ್ಲಿ ಸಿದ್ದಾಪುರ ಕೆ- ತಿಕೋಟಾ ಕೂಡು ರಸ್ತೆ ವರೆಗೆ 5.2ಕಿ.ಮೀ ವ್ಹಾಯಾ ಉತ್ತರ ಕಾಲುವೆ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಲಿದ್ದಾರೆ.
ದಿ.12 ಶನಿವಾರ ಬೆ.10ಗಂ. ನಗರದ ಜಾಮೀಯಾ ಮಸೀದಿ ರಸ್ತೆಯ ರೊಡಗಿಮಡ್ಡಿ ಖಬರಸ್ಥಾನ ಹತ್ತಿರ ರಾಜ್ಯ ವಿಪತ್ತು ಉಪಶಮನ ನಿಧಿ ರೂ.200ಲಕ್ಷ ವೆಚ್ಚದಲ್ಲಿ ಕೋಟೆಗೋಡೆ ಕಂದಕ, ಮನಗೂಳಿ ಅಗಸಿಯಿಂದ ಕಸ್ತೂರಿ ಕಾಲೋನಿವರೆಗೆ ಹಾಗೂ ರೂ.100 ಲಕ್ಷ ವೆಚ್ಚದಲ್ಲಿ ರೊಡಗಿಮಡ್ಡಿ ಖಬರಸ್ಥಾನದಿಂದ ಸಿಂದಗಿ ರಸ್ತೆಯ ರೈಲ್ವೆ ಸೇತುವೆವರೆಗಿನ ಕಂದಕದಲ್ಲಿನ ಹೂಳು ತೆಗೆಯುವುದು ಹಾಗೂ ಪ್ರವಾಸ ನಿಯಂತ್ರಣ ಕಾಮಗಾರಿಗಳಿಗೆ ಚಾಲನೆ ನೀಡುವರು.
ನಂತರ ಬೆ.10.30ಗಂ. ಇಂಡಿ ರಸ್ತೆ ಶಹಾಪೇಟ ಓಣಿ ಯಲ್ಲಮ್ಮ ದೇವಸ್ಥಾನದ ಹತ್ತಿರ ರಾಜ್ಯ ವಿಪತ್ತು ಉಪಶಮನ ನಿಧಿ ರೂ.200 ಲಕ್ಷ ವೆಚ್ಚದಲ್ಲಿ ಶಹಾಪೇಟೆ, ಸುಣಗಾರ ಗಲ್ಲಿಯಿಂದ ಸ್ಟೇಷನ್ ಹಿಂದಿನ ರಸ್ತೆ ಮೂಲಕ ಅಪ್ಸರಾ ಥೇಟರ್ ವರೆಗೆ ಮಳೆನೀರು ಚರಂಡಿ ಕಾಮಗಾರಿ ಮತ್ತು ಪ್ರವಾಹ ನಿಯಂತ್ರಣ ಕಾಮಗಾರಿಗೆ ಚಾಲನೆ ನೀಡುವರು.
ದಿ.13 ರವಿವಾರ ಬೆ.10ಗಂ. ಮ.12ಗಂ. ವರೆಗೆ ಬಿ.ಎಂ.ಪಾಟೀಲ ರಸ್ತೆ ಗೃಹ ಕಚೇರಿಯಲ್ಲಿ ಸಾರ್ವಜನಿಕರ ಕುಂದುಕೊರತೆ ಆಲಿಸಲಿದ್ದಾರೆ.
ದಿ.14 ಸೋಮವಾರ ಇಂಡಿ ವಿಧಾನಸಭಾ ಕ್ಷೇತ್ರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳೊಂದಿಗೆ ಉಪಸ್ಥಿತರಿರಲಿದ್ದಾರೆ. ನಂತರ ಸಂ.5ಗಂ. ದಿ ನ್ಯೂಯಾರ್ಕ್ ಟೈಮ್ಸ್ ವರದಿಗಾರ ಕರಣದೀಪಸಿಂಗ್ ಅವರೊಂದಿಗೆ ನಗರದಲ್ಲಿ ಸಂದರ್ಶನ ನೀಡಲಿದ್ದಾರೆ ಎಂದು ಸಚಿವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.