ವಿಜಯಪುರ| ಮಾಜಿ ಉಪಪ್ರಧಾನಿ ಡಾ. ಬಾಬು
ಜಗಜೀವನರಾಂ ರವರ ೩೯ ನೇ ಪುಣ್ಯಸ್ಮರಣೆ
ವಿಜಯಪುರ : ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಹಸಿರು ಕ್ರಾಂತಿಯ ರಾಷ್ಟ್ರ ನಾಯಕ , “ಸತ್ಯ ಒಂದೇ, ದಾರಿಗಳು ಅನೇಕ” ಎಂಬ ಸಾರುವ ಹಾಗೂ ಭಾರತದ ಮಾಜಿ ಉಪಪ್ರಧಾನಿಗಳಾದ ಡಾ. ಬಾಬು
ಜಗಜೀವನರಾಂ ರವರ ೩೯ ನೇ ಪುಣ್ಯಸ್ಮರಣೆಯನ್ನು ಡಾ. ಬಾಬು ಜಗಜೀವನರಾಂ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ ಸದಸ್ಯರಾದ ಶ್ರೀ ಅಬ್ದುಲ್‌ಹಮೀದ ಮುಶ್ರೀಫ, ಡಾ. ಮಾಲಿಪಾಟೀಲ, ಗಂಗಾಧರ ಸಂಬಣ್ಣಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಚಾಂದಸಾಬ ಗಡಗಲಾವ, ಪ್ರಧಾನ ಕಾರ್ಯದರ್ಶಿಗಳಾದ ಎಂ. ಎಂ. ಮುಲ್ಲಾ (ದ್ಯಾಬೇರಿ), ವಸಂತ ಹೊನಮೋಡೆ, ದೇಸು ಚವ್ಹಾಣ, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಶಕೀಲಅಹ್ಮದ ಬಾಗಮಾರೆ, ಅಶ್ಪಾಕ ಮನಗೂಳಿ, ರಮೇಶ ಗುಬ್ಬೇವಾಡ, ತಾಜುದ್ದೀನ ಖಲೀಫಾ, ಸರ್ಫರಾಜ ಅಗಸಬಾಳ, ಕೃಷ್ಣಾ ಲಮಾಣಿ, ಹಮೀದ ಮನಗೂಳಿ, ಎಂ. ಎಂ. ಮುಲ್ಲಾ, ಅಬುಬಕರ ಕಂಬಾಗಿ, ಪರಶುರಾಮ ಹೊಸಮನಿ, ವೀರೇಶ ಕಲಾಲ, ಅಮಿತ ಚವ್ಹಾಣ, ಡಿ. ಎಚ್. ಕಲಾಲ, ಮುನ್ನಾ ಬಕ್ಷಿ, ಆಬಿದ ಇಲಕಲ್, ಇಮತಿಯಾಜ ಮುಲ್ಲಾ, ಪೀರಾಂ ಹಡಗಲಿ, ಇಲಿಯಾಸ ಮುಲ್ಲಾ, ಹಾಶಿಂಪೀರ ಕಾದರಿ, ಪರವೇಜ ಪೀರಜಾದೆ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಇತರ ಕಾರ್ಯಕರ್ತರು ಉಪಸ್ಥಿತರಿದ್ದರು.