ಇಂಡಿ | ಯುವಕ ಕಾಣೆ.
ಇಂಡಿ: ತಾಲೂಕಿನ ಸಾಲೋಟಗಿ ಗ್ರಾಮದ ಜೈಕಾರ ತಂದೆ ಜಗದೇವ ತಳವಾರ (೧೪) ಜೂನ್ ೨೪ ರಂದು ಕಾಣೆಯಾಗಿದ್ದು ಆತನನ್ನು ಯಾರಾದರೂ ಅಪಹರಿಸಿಕೊಂಡು ಹೋಗಿರಬಹುದೆ ಎಂದು ತಾಯಿ ನರಸವ್ವ ತಳವಾರ ಇಂಡಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಚಹರೆ: ಕಾಣೆಯಾದ ಯುವಕ ಅಂದಾಜು ೪ ಫೂಟ್ ೫ ಇಂಚು ಇದ್ದು, ಮೈಯಿಂದ ಸದೃಢನಾಗಿದ್ದು, ದುಂಡು ಮುಖ ಉಳ್ಳವನಾಗಿದ್ದು ಸಾದಗಪ್ಪು ಬಣ್ಣ, ತಲೆಯಲ್ಲಿ ಕರಿ ಕೂದಲು ಇದ್ದು ಕನ್ನಡ ಭಾಷೆ ಮಾತ್ರ ಮಾತನಾಡುತ್ತಾನೆ ಎಂದು ತಿಳಿದು ಬಂದಿದ್ದು ಈ ಯುವಕ ಎಲ್ಲಿಯಾದರೂ ಕಂಡು ಬಂದಲ್ಲಿ ಇಂಡಿ ಗ್ರಾಮೀಣ ಠಾಣೆ ೮೨೭೭೯೭೦೪೨೩,
೯೪೮೦೮೦೪೨೭೩ ಸಂಖ್ಯೆಗೆ ಸಂಪರ್ಕಿಸಲು ಪೊಲೀಸ್ ಪ್ರಕಟಣೆ ತಿಳಿಸಿದೆ.