ಸಾಹಿಲ್ ಧನಶೆಟ್ಟಿ ಉಪಾಧ್ಯಕ್ಷರಾಗಿ ಆಯ್ಕೆ..!
ವಿಜಯಪುರ: ಇಂಡಿ ತಾಲೂಕು ಪಂಚಾಯಿತಿಯಲ್ಲಿ ತಾಂತ್ರಿಕ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿರುವ ಸಾಹಿಲ್ ಧನಶೆಟ್ಟಿ ಕರ್ನಾಟಕ ರಾಜ್ಯ ಮಹಾತ್ಮ ಗಾಂಧಿ ನರೇಗಾ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ತಾಲೂಕು ಪಂಚಾಯಿತಿಯಲ್ಲಿ ತಾಂತ್ರಿಕ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಉಪಾಧ್ಯಕ್ಷರಾಗಿದ್ದು, ಪಿಡಿಒ ಅಶೋಕ ಹೊನವಾಡ ಸೇರಿದಂತೆ ಇಂಡಿ ತಾಲೂಕಿನ ಪಿಡಿಒಗಳು, ಹಿರೇಮಸಳಿ ಗ್ರಾಮಸ್ಥರಾದ ಗಂಗು ಮರಡಿ, ರವಿ ರಾಯಜಿ, ಸನಾವುಲ್ಲಾ ಗೂಗಿಹಾಳ ಮತ್ತಿತರರು ಸಂತಸ ವ್ಯಕ್ತಪಡಿಸಿದ್ದಾರಲ್ಲದೇ ಸನ್ಮಾನಿಸಿ ಗೌರವಿಸಿದರು.