ಕೇವಲ ಪದವಿ ಗಳಿಸಿ ಪಾಸಾಗುವ ಕಡೆ ಗಮನ ಕೊಡದೇ ಜೀವನಕ್ಕೆ ಅವಶ್ಯಕವಾದ ಜ್ಞಾನಗಳಿಸುವದು ಕಲಿಕೆಯ
ವಿಜಯಪುರ: ಕೇವಲ ಪದವಿ ಗಳಿಸಿ ಪಾಸಾಗುವ ಕಡೆ ಗಮನ ಕೊಡದೇ ಜೀವನಕ್ಕೆ ಅವಶ್ಯಕವಾದ ಜ್ಞಾನಗಳಿಸುವದು ಕಲಿಕೆಯ ಗುರಿಯಾಗಬೇಕೆಂದು ಸಿಕ್ಯಾಬ್ ಎ.ಆರ್.ಎಸ್.ಇನಾಮದಾರ ಮಹಿಳಾ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಚೇರಮನ್ ರಿಯಾಜ್ ಫಾರೂಖಿ ಅವರು ವಿದ್ಯಾರ್ಥಿನಿಯರ ಸಮೂಹಕ್ಕೆ ಕರೆ ನೀಡಿದರು.
ಅವರು ಸಿಕ್ಯಾಬ್ ಎ.ಆರ್.ಎಸ್.ಇನಾಮದಾರ ಮಹಿಳಾ ಮಹಾವಿದ್ಯಾಲಯದಲ್ಲಿ ಬಿಎ, ಬಿಎಸ್ಸಿ ಪ್ರಥಮ ವರ್ಷದ ವಿದ್ಯಾರ್ಥಿನಿಯರ ‘ಸೇತು ತರಬೇತಿ’ ಕರ‍್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತ ವಿದ್ಯಾರ್ಥಿನಿಯರು ಕ್ಲಾಸರೂಮಿನಲ್ಲಿ ಮಾತ್ರ ಕಲಿಯದೇ ಹೊರಗಿನ ಪರಿಸರದಲ್ಲಿ ಕಲಿಯುವದು ಬಹಳಷ್ಟಿದೆ ಎಂದರು. ವಿದ್ಯಾರ್ಥಿನಿಯರು ವಿಚಾರ ಸಂಕಿರಣ, ಶೈಕ್ಷಣಿಕ ಸಮಾವೇಶ, ತಜ್ಞರ ಜೊತೆ ಜೊತೆ ಚರ್ಚೆ ಮುಂತಾದವುಗಳ ಮೂಲಕ ಕಲಿಯುವದು ಅತ್ಯವಶ್ಯ ಎಂದು ಒತ್ತಿ ಹೇಳಿದರುಇನ್ನೋರ್ವ ಅತಿಥಿ ಅಂಜುಮನ್ ಮಹಾವಿದ್ಯಾಲಯದ ಉರ್ದುವಿಬಾಗದ ಮುಖ್ಯಸ್ಥರಾದ ಡಾ. ಸೈಯದ ಅಲಿಮುಲ್ಲಾ ಹುಸೇನಿ ಮಾತನಾಡಿ ಶಿಕ್ಷಣದಲ್ಲಿ ಮಾನವೀಯತೆ ಮುಖ್ಯ ಎಂದು ನುಡಿದರು.
ಪ್ರಾಚರ‍್ಯರಾದ ಡಾ. ಎಚ್.ಕೆ.ಯಡಹಳ್ಳಿ ಉಪಪ್ರಾಚರ‍್ಯರಾದ ಡಾ. ಹಾಜಿರಾ ಪರವೀನ, ಪ್ರೊ. ಎಂ.ಎA.ಬಾಗಲಕೋಟ, ಡಾ. ಎಲ್.ಐ.ನದಾಫ, ಪ್ರೊ. ಅಂಬ್ರೀನ್ ಸಬಾ ಮುಲ್ಲಾ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಕು. ಆಸ್ಮಾ ನಾಗರದಿನ್ನಿ ಪವಿತ್ರ ಖುರಾನ್ ಹಾಗೂ ಕು. ಪೃಥ್ವಿ, ಕು. ವಿದ್ಯಾ ಭಗವದ್ಗೀತೆ ಪಠಿಸಿದರು. ಕು. ಸುಗ್ರಾ ಪಟೇಲ್ ಅತಿಥಿಗಳನ್ನು ಪರಿಚಯಿಸಿದರು. ಕು. ಮುಜೀಬಾ ಸರ್ವರನ್ನು ಸ್ವಾಗತಿಸಿದರು. ಕು. ಆಫ್ಸಾ ಸಾಂಗ್ಲಿಕರ ಕೊನೆಯಲ್ಲಿ ವಂದಿಸಿದರು. ಕಾಲೇಜಿನಲ್ಲಿ ಪ್ರಾಧ್ಯಾಪಕ ಹಾಗೂ ಕಚೇರಿ ಸಿಬ್ಬಂದಿ ಕರ‍್ಯಕ್ರಮದಲ್ಲಿ ಉಪಸ್ಥಿತರಿದ್ದರು.