ಮುದ್ದೇಬಿಹಾಳ: ವೈಶ್ಯಾವಾಟಿಕೆಗೆ ಅವಕಾಶ ಮಾಡಿಕೊಡುತ್ತಿದ್ದ ಇಲ್ಲಿನ ಅಂಬೇಡ್ಕರ್ ವೃತ್ತದ ಹತ್ತಿರ ಇರುವ ಸಾಂಘವಿ ಲಾಜ್ ಮೇಲೆ ಸಿಪಿಐ ಮೆಹಮ್ಮೂದ್ ಫಸಿಯುದ್ದೀನ್ ನೇತೃತ್ವದ ಪೊಲೀಸರ ತಂಡ ಶುಕ್ರವಾರ ರಾತ್ರಿ ದಾಳಿ ನಡೆಸಿ ಲಾಜನ ಇಬ್ಬರು ಮ್ಯಾನೇಜರ್ ಸೇರಿ ಐವರನ್ನು ಬಂಧಿಸಿದ್ದಾರೆ. ಲಾಜನ ಮ್ಯಾನೇಜರುಗಳಾದ ರಘುನಾಥ ಸದಾಶಿವ ಶೆಟ್ಟಿ, ದಿನೇಶ ಕುಟ್ಟು ಶೆಟ್ಟಿ, ಇವರಿಗೆ ಸಹಕರಿಸುತ್ತಿದ್ದ ಪಿಂಪ್ ಏಜಂಟ್ ಕೋಳೂರು ತಾಂಡಾದ ಅನೀಲ ಹಣಮಂತ ಜಾಧವ ಮತ್ತು ಗಿರಾಕಿಗಳಾದ ಚಿಕ್ಕಮಗಳೂರಿನ ಗೌತಮ್ ಪಾಪಣ್ಣ ಮತ್ತು ಯಾದಗಿರಿ ಜಿಲ್ಕೆ ಹುಣಸಗಿಯ ಭೀಮರಾಯ ಈರಣ್ಣ ಬೂದಿಹಾಳ ಬಂಧಿತ ಆರೋಪಿಗಳು. ಇಬ್ಬರು ಮಹಿಳೆಯರ ಮೇಲೆ ಕಾನೂನಿನ ನಿಯಮದನ್ವಯ ಕ್ರಮ ಕೈಕೊಂಡಿದ್ದು ಅವರ ಹೆಸರು ಗೌಪ್ಯವಾಗಿಡಲಾಗಿದೆ.
ಈ ಕುರಿತು ಮಾದ್ಯಮದಯೊಂದಿಗೆ ಮಾತನಾಡಿದ ಸಿಪಿಐ ಫಸಿಯುದ್ದೀನ್ ಅವರು ಮುದ್ದೇಬಿಹಾಳ ಸಿಪಿಐ ಸರ್ಕಲ್ ವ್ಯಾಪ್ತಿಯ ಠಾಣೆಗಳ ಅಡಿಯಲ್ಲಿ ಬರುವ ಎಲ್ಲ ಲಾಜಗಳನ್ನು ಸ್ವಚ್ಛಗೊಳಿಸಿ ಗ್ರಾಹಕ ಸ್ನೇಹಿಯಾಗಿಸಲು, ಅಕ್ರಮ ಚಟುವಟಿಕೆ ತಡೆಗಟ್ಟಲು ಅಗತ್ಯ ಕ್ರಮ ಕೈಕೊಳ್ಳುವುದಾಗಿ ತಿಳಿಸಿದ್ದಾರೆ. ಸಿಪಿಐ ಫಸಿಯುದ್ದೀನ್ ಅವರ ಈ ದಿಟ್ಟ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದ್ದು ಹಲವು ವರ್ಷಗಳಿಂದ ಲಾಜಗಳಲ್ಲಿ ನಡೆಯುತ್ತಿರುವ ಕಾನೂನುಬಾಹಿರ ದಂಧೆ ನಿಯಂತ್ರಿಸಲು ಕಠಿಣ ಕ್ರಮ ಕೈಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.