ಮುದ್ದೇಬಿಹಾಳ: ಪಟ್ಟಣದ ತಂಗಡಗಿ ರಸ್ತೆಪಕ್ಕದಲ್ಲಿರುವ ಕೊಳಚೆ ಪ್ರದೇಶದ ಅಡಿಯಲ್ಲಿ ಬರುವ ಪಿಲೇಕೆಮ್ಮನಗರ ಬಡಾವಣೆಯ ನಿವಾಸಿಗಳಿಗೆ ಉತಾರೆ ಮತ್ತು ಇನ್ನುಳಿದ ಹಕ್ಕುಪತ್ರ ವಿತರಿಸಬೇಕು ಎಂದು ಆಗ್ರಹಿಸಿ ಅಲ್ಲಿನ ನಿವಾಸಿಗಳು ತಮ್ಮ ವಾರ್ಡ ಪ್ರತಿನಿಧಿಸುವ ಪುರಸಭೆ ಸದಸ್ಯೆ ಶರೀಫಾ ಮೂಲಿಮನಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಬರೆದ ಮನವಿ ಪತ್ರವನ್ನು ಗುರುವಾರ ಪುರಸಭೆ ಮುಖ್ಯಾಧಿಕಾರಿ, ಕಂದಾಯ ಅಧಿಕಾರಿಗೆ ಸಲ್ಲಿಸಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.
ಈ ಬಡಾವಣೆಯು ಕೊಳಚೆ ಪ್ರದೇಶ ಅಭಿವೃದ್ದಿ ಮಂಡಳಿ ವ್ಯಾಪ್ತಿಗೆ ಬರುತ್ತದೆ. ೩೦-೪೦ ವರ್ಷದಿಂದ ಇಲ್ಲಿ ವಾಸವಾಗಿದ್ದ ಜನರಿಗೆ ೨೦೨೦ರ ಮಾರ್ಚನಲ್ಲಿ ಸರ್ಕಾರ ಹೊರಡಿಸಿದ ಆದೇಶದಂತೆ ನಿಗದಿತ ಅವಧಿಯೊಳಗೆ ಹಕ್ಕುಪತ್ರ, ಉತಾರೆ, ಇನ್ನಿತರ ಮೂಲಸೌಕರ್ಯ ಒದಗಿಸಬೇಕಾಗಿತ್ತು. ಆದರೆ ಸರ್ವೆ ಕಾರ್ಯ ನಡೆದು ೩-೪ ವರ್ಷ ಕಳೆದೂ ಆದೇಶ ಪಾಲನೆ ಆಗಿಲ್ಲ. ಇನ್ನೂ ಅನೇಕರಿಗೆ ಹಕ್ಕುಪತ್ರ, ಉತಾರೆ ನೀಡಿಲ್ಲ. ಈ ಬಗ್ಗೆ ಕೊಳಚೆ ಪ್ರದೇಶ ಅಭಿವೃದ್ದಿ ಮಂಡಳಿ ಅಧಿಕಾರಿಗಳಿಗೆ ಪತ್ರ ಬರೆದರೂ, ಭೇಟಿ ಮಾಡಿ ಮನವಿ ಮಾಡಿದರೂ ಸರ್ಕಾರದ ಆದೇಶ ಪಾಲಿಸುತ್ತಿಲ್ಲ ಎಂದು ಮನವಿಯಲ್ಲಿ ದೂರಲಾಗಿದೆ.
ಪುರಸಭೆಯ ಸಾಮಾನ್ಯ ಸಭೆಯಲ್ಲಿ ಈ ವಿಷಯದ ಮೇಲೆ ಗಂಭೀರ ಚರ್ಚೆ ನಡೆದ ನಂತರ ಮಂಡಳಿಯ ಕೆಲವು ಅಧಿಕಾರಿಗಳು ಒಬ್ಬ ಏಜಂಟನೊAದಿಗೆ ಶಾಮೀಲಾಗಿ ಮೂಲ ಸ್ಲಂ ನಿವಾಸಿಗಳ ಬದಲಾಗಿ ಬೇರೆಡೆಯಿಂದ ವಲಸೆ ಬಂದವರಿAದ ಲಕ್ಷಗಟ್ಟಲೆ ಹಣ ಪಡೆದು ಅವರು ಹೆಸರನ್ನು ಸೇರ್ಪಡೆ ಮಾಡಿ ಅಂಥವರಿಗೆ ಹಕ್ಕುಪತ್ರ ಕೊಡಿಸಿದ್ದಾನೆ. ಒಂದೇ ಮನೆಯನ್ನು ನಕಲಿ ದಾಖಲೆ ಸೃಷ್ಟಿಸಿ ೪-೫ ಜನರಿಗೆ ಹಂಚಿಕೆ ಮಾಡಿ ಅಕ್ರಮ ನಡೆಸಿದ್ದಾನೆ. ಇದಲ್ಲದೆ ಪುರಸಭೆಗೆ ಸಂಬAಧಿಸಿದ ಆಸ್ತಿಯಲ್ಲಿ ತಗಡಿನ ಸೆಡ್‌ಗಳನ್ನು ಹಾಕಿಸಲಾಗಿತ್ತು. ಇದನ್ನು ಪುರಸಭೆಯ ಅಧ್ಯಕ್ಷರ ನೇತೃತ್ವದ ಆರು ಜನರ ಸಮಿತಿ ಪರಿಶೀಲನೆ ನಡೆಸಿ ಮಂಡಳಿಯ ಅಧಿಕಾರಿಗಳ ಎದುರಲ್ಲೇ ಅವೆಲ್ಲವನ್ನೂ ನೆಲಸಮಗೊಳಿಸಿ ಪುರಸಭೆಯ ಜಾಗ ಉಳಿಸಿಕೊಳ್ಳಲಾಗಿತ್ತು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಇದೇ ವಿಷಯವಾಗಿ ಅರ್ಹತೆಯುಳ್ಳ ಹಲವರು ಸೌಲಭ್ಯದಿಂದ ವಂಚಿತರಾಗಬೇಕಾಗಿದ್ದು ಯಾರೋ ಮಾಡಿದ ತಪ್ಪಿಗೆ ಹಲವು ಅರ್ಹರು ಬಲಿಯಾಗಬೇಕಾಗಿದೆ. ಇದನ್ನು ಶಾಸಕರ ಗಮನಕ್ಕೆ ತಂದು ತಪ್ಪಿತಸ್ತರ ವಿರುದ್ಧ ಕ್ರಮಕ್ಕೆ ಕೋರುತ್ತೇವೆ. ಈ ವಾರ್ಡಿನ ಸಮಸ್ಯೆಯನ್ನು ಆದಷ್ಟು ಬೇಗನೆ ಸರಿಪಡಿಸಬೇಕು. ತಪ್ಪಿಸ್ಥರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ವಾರ್ಡಿನ ಎಲ್ಲ ನಿವಾಸಿಗಳ ಸಮೇತ ಜಿಲ್ಲಾಧಿಕಾರಿ ಮತ್ತು ಪುರಸಭೆ ಕಚೇರಿ ಎದುರು ಆ ವಾರ್ಡ ಪ್ರತಿನಿಧಿಸುವ ಪುರಸಭೆ ಸದಸ್ಯರ ನೇತೃತ್ವದಲ್ಲಿ ಧರಣಿ, ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮನವಿಯ ಪ್ರತಿಗಳನ್ನು ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಅಭಯಪ್ರಸಾದ, ಆಯುಕ್ತರು, ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ತಹಶೀಲ್ದಾರರು ಸೇರಿ ಹಲವರಿಗೆ ಸಲ್ಲಿಸಲಾಗಿದೆ. ಪುರಸಭೆ ಸದಸ್ಯೆ ಶರೀಫಾ ಮೂಲಿಮನಿ, ಮುಖಂಡ ಅಜರುದ್ದೀನ್ ಮೂಲಿಮನಿ, ನಿವಾಸಿಗಳಾದ ದಾವಲಸಾಬ ಶೇಖ, ಹಾಜಿಸಾಬ ಜಾತಗಾರ, ಮಮತಾಜ ಕಲೇಗಾರ, ತಾರಾಬಿ ಹಡಗಲಿ, ಮಹ್ಮದರಫೀಕ ಅತ್ತಾರ, ಮಹಾಂತೇಶ, ಕಾಶೀನಾಥ, ಪ್ರವೀಣ, ಜಿಲಾನಿ, ಶಾಬುದ್ದಿನ ನದಾಫ, ಲಕ್ಮೀಬಾಯಿ ಝಿಂಗಾಡೆ, ಅಂಜುಮ ತಂಬಗಿ, ಫತ್ರುಬಿ ಜಾತಗಾರ, ಮಕ್ತುಂಬಿ ಜಾತಗಾರ, ಮಲಿಕಬಿ, ಭಿಯಾಮಾ, ಮಕ್ತುಮಸಾಬ ಬೇಪಾರಿ, ಹುಸೇನಸಾಬ ಶೇಖ, ರಫಿಕ ಶೇಖ, ರಾಜೇಭಕ್ಷ, ಆಯಿಶಾ, ಸಕೀನಾ ವಾಲಿಕಾರ, ಚಂದ್ರಶೇಖರ, ಈರಣ್ಣ ಸೇರಿದಂತೆ ಉಪಸ್ಥಿತರಿದ್ದರು.