ಖಾಸಗಿ ಶಾಲೆಗಳಿಗೆ ಸಡ್ಡು ಹೊಡೆಯುವ ಮಾದರಿ ಸರಕಾರಿ ಪ್ರೌಢಶಾಲೆ
ಇಂಡಿ : ತಾಲೂಕಿನ ತಾಂಬಾ ಗ್ರಾಮದ ಸರಕಾರಿ ಪ್ರೌಢಶಾಲೆ ಗುಣಾತ್ಮಕ ಶಿಕ್ಷಣ ಸುಸಜ್ಜಿತ ಕಟ್ಟಡ ಉತ್ತಮ ಪರಿಸರ ಕಲಿಕೆಗೆ ಪೂರಕವಾದ ಸಕಲ ಸೌಲಭ್ಯಗಳು ಶುಚಿ ರುಚಿ ಊಟದ ವ್ಯವಸ್ಥೆ ಮೂಲಕ ಮಾದರಿ ಶಾಲೆಯಾಗಿ ಗುರುತಿಸಿಕೊಂಡಿದೆ.
೨೦೦೫ ರಲ್ಲಿ ಪ್ರಾರಂಭಗೊಂಡ ಈ ಶಾಲೆಯಲ್ಲಿ ೮,೯ ಮತ್ತು ೧೦ನೇ ತರಗತಿಯ ವರೆಗೆ ಒಟ್ಟು ೨೬೦ ಮಕ್ಕಳು ವಿದ್ಯಾಬ್ಯಾಸ ಮಾಡುತ್ತಿದ್ದಾರೆ.೨೦೨೪-೨೫ ರಲ್ಲಿ ಶಾಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಶೇ ೯೫ ರಷ್ಟಿದ್ದು ಪ್ರತಿಭಾ ವಗ್ಗಿ ತಾಲೂಕಿಗೆ ತೃತೀಯ ಸ್ಥಾನ ಪಡೆದಿದ್ದಾಳೆ. ಶೇ ೮೫ ಕ್ಕಿಂತ ಹೆಚ್ಚು ೩೪ ವಿದ್ಯಾರ್ಥಿಗಳು, ಶೇ ೭೦ ಕ್ಕೂ ಹೆಚ್ಚು ೩೩ ವಿದ್ಯಾರ್ಥಿಗಳು, ಪ್ರಥಮ ದರ್ಜೆ ೧೦ ಮತ್ತು ದ್ವೀಯ ದರ್ಜೆ ೯ ವಿದ್ಯಾರ್ಥಿಗಳು ಪಡೆದಿದ್ದಾರೆ.
ವಿದ್ಯಾರ್ಥಿಗಳಿಗೆ ಸಕಾಲಕ್ಕೆ ಬಿಸಿಯೂಟ, ಎರಡು ಜೊತೆ ಸಮವಸ್ತç , ಪುಸ್ತಕ ಶೂ ಸೇರಿದಂತೆ ಎಲ್ಲ ಸೌಲಭ್ಯಗಳು ದೊರೆಯುತ್ತವೆ. ಶಾಲೆಗೆ ಸುಸಜ್ಜಿತ ಕಂಪೌAಡ, ಶೌಚಾಲಯ, ಸಭಾಂಗಣ, ಕಂಪ್ಯೂಟರ್ ವ್ಯವಸ್ಥೆ, ವಿಜ್ಞಾನ ಕೋಣೆ, ಕ್ರೀಡಾಂಗಣ ಹೊಂದಿದೆ. ಶಾಲಾ ಆವರಣದಲ್ಲಿ ಅರಣ್ಯ ಇಲಾಖೆ ಸಹಯೋಗದಲ್ಲಿ ಗಿಡಗಳನ್ನು ಹಚ್ಚಿ ಪರಿಸರ ಬೆಳೆಸಲಾಗುತ್ತದೆ.
ಕೆ.ಆರ್.ಐ.ಡಿ ಎಲ್ ವಿಶೇಷ ಅಭಿವೃದ್ದಿ ಯೋಜನೆ ಅಡಿಯಲ್ಲಿ ಸುಮಾರು ೫೦ ಲಕ್ಷ ರೂ ವೆಚ್ಚದಲ್ಲಿ ಮೂರು ಕೋಣೆ ನಿರ್ಮಾಣ ವಾಗಿವೆ. ಈಗಾಗಲೇ ೭ ಕೋಣೆಗಳಿವೆ.
ಪ್ರತಿ ಮಕ್ಕಳ ಬಗ್ಗೆ ಕಾಳಜಿ ವಹಿಸಲಾಗುತ್ತಿದೆ. ಶೈಕ್ಷಣ ಕ ಪ್ರಗತಿ ಸಾಧಿಸಲು ಬಂಥನಾಳದ ವೃಷಭಲಿಂಗೇಶ್ವರ ಶ್ರೀಗಳು, ಗ್ರಾಮಸ್ಥರ ಶಿಕ್ಷಣ ಇಲಾಖೆ ಮತ್ತು ಸಿಂದಗಿಯ ಶಾಸಕರ ಸಹಕಾರದಿಂದ ಶಾಲೆ ಪ್ರಗತಿಯತ್ತ ಸಾಗಿದೆ.
ಸಿದ್ದು ಹತ್ತಳ್ಳಿ ಎಸ್.ಡಿ.ಎಂ.ಸಿ ಅಧ್ಯಕ್ಷರು ಸರಕಾರಿ ಪ್ರೌಢಶಾಲೆ ತಾಂಬಾ.
ನೂತನ ಕಟ್ಟಡ ಉದ್ಘಾಟಣೆ ಮಂಗಳವಾರ ಜೂ. ೧೦ ರಂದು ಸಾಯಂಕಾಲ ೪ ಗಂಟೆಗೆ ನಡೆಯಲಿದೆ. ದಿವ್ಯ ಸಾನಿದ್ಯ ವೇದಮೂರ್ತಿ ಮಲ್ಲಯ್ಯ ಸಾರಂಗಮಠ, ನೂತನ ಕಟ್ಟಡ ಉದ್ಘಾಟನೆ ಸಿಂದಗಿ ಶಾಸಕ ಅಶೋಕ ಮನಗೂಳಿ ಇವರಿಂದ,ಅಧ್ಯಕ್ಷತೆ ಎಸ್.ಡಿ.ಎಂ.ಸಿ ಅಧ್ಯಕ್ಷ ಸಿದ್ದು ಹತ್ತಳ್ಳಿ,ವಹಿಸಲಿದ್ದಾರೆ. ಗ್ರಾ.ಪಂ ಅಧ್ಯಕ್ಷ ಆಸ್ಮಾ ರಜಾಕ ಚಿಕ್ಕಗಸಿ, ಜ್ಯೋತಿ ಬೆಳಗಿಸಲಿದ್ದಾರೆ. ಗ್ರಾ.ಪಂ ಉಪಾಧ್ಯಕ್ಷ ರಾಮಚಂದ್ರ ದೊಡಮನಿ ಸಸಿಗೆ ನೀರು ಹಾಕಿ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಸ್.ಡಿ.ಎಂ.ಸಿ ಉಪಾಧ್ಯಕ್ಷ ವಿಠ್ಠಲ ಹೋರ್ತಿ, ಡಿ.ಡಿ.ಪಿಐ ಕೋಲಾರ, ಇಂಡಿ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಹುನ್ನೂರ ಮೆಡಂ, ಶ್ರೀಧರ ನಡಗಡ್ಡಿ, ಪ್ರೌಢಶಾಲೆಯ ಮುಖ್ಯೋಪಾದ್ಯಾಯ ಪಿ.ಕೆ.ಬಿರಾದಾರ ಕೆಆರ್‌ಐಡಿಎಲ್ ಅಧಿಕಾರಿ ರಾಜಶೇಖರ ಮತ್ತು ಎಸ್‌ಡಿಎಂಸಿ ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಸಿದ್ದು ಹತ್ತಳ್ಳಿ ತಿಳಿಸಿದ್ದಾರೆ.
ತಾಂಬಾ ಗ್ರಾಮದ ಸರಕಾರಿ ಪ್ರೌಢಶಾಲೆ ನೂತನವಾಗಿ ಕಟ್ಟಿದ ಶಾಲಾ ಕೊಠಡಿಗಳು ಸಿದ್ದು ಹತ್ತಳ್ಳಿ ಎಸ್.ಡಿ.ಎಂ.ಸಿ ಅಧ್ಯಕ್ಷರು