ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪಾಕ್ ಮೇಲೆ ಅಷ್ಣೊಂದು ನಮ್ಮತನವಿದ್ದರೆ ಅವರು ಅಲ್ಲಿಯೇ ಹೋಗಿ ನೆಲೆಸಲಿ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸಂಸದ ಜಿಗಜಿಣಿಗಿ ಕಿಡಿ
ವಿಜಯಪುರ : ಮಾನವೀಯತೆ ವಿರೋಧಿಯಾಗಿರುವ ಉಗ್ರಗಾಮಿಗಳನ್ನು ಪೋಷಿಸುತ್ತಿರುವ ಪಾಪಿ ಪಾಕಿಸ್ತಾನವನ್ನು ನಮ್ಮ ಪಾಕಿಸ್ತಾನ ಎಂದು ಕರೆದಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪಾಕ್ ಮೇಲೆ ಅಷ್ಣೊಂದು ನಮ್ಮತನವಿದ್ದರೆ ಅವರು ಅಲ್ಲಿಯೇ ಹೋಗಿ ನೆಲೆಸಲಿ ಎಂದು ಸಂಸದ ರಮೇಶ ಜಿಗಜಿಣಗಿ ಕಿಡಿಕಾರಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪಾಕಿಸ್ತಾನ ಹೆಸರು ಹೇಳಲು ಸಹ ನಮಗೆ ನಾಚಿಕೆಯಾಗುತ್ತದೆ, ಮನುಷ್ಯತ್ವವೇ ಇಲ್ಲದ ಉಗ್ರರನ್ನು ಪೋಷಿಸುತ್ತಿರುವ ಪಾಪಿ ಪಾಕಿಸ್ತಾನವನ್ನು ನಮ್ಮ ಪಾಕಿಸ್ತಾನ ಎಂದು ಕರೆದಿರುವುದು ಖಂಡನೀಯ. ಖರ್ಗೆ ಅವರಂತಹ ಮುತ್ಸದ್ದಿ ರಾಜಕಾರಣಿಗಳ ಬಾಯಲ್ಲಿ ಪಾಕಿಸ್ತಾನ ಪ್ರೇಮ ನೋಡಿ ರೋಸಿ ಹೋಗುವಂತಾಗಿದೆ, ಕೂಡಲೇ ದೇಶದ ಜನತೆಯ ಕ್ಷಮೆಯಾಚಿಸಬೇಕು, ಇಲ್ಲವಾದರೆ ಪಾಕ್ ಮೇಲೆ ಮಮಕಾರವಿದ್ದರೆ ಅಲ್ಲಿಯೇ ಹೋಗಿ ನೆಲೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಬೆಲೆ ಏರಿಕೆ ಸೇರಿದಂತೆ ನಾನಾ ಹಗರಣಗಳು ಒಂದೆಡೆ ಇವೆ, ಇನ್ನೊಂದೆಡೆ ಮಳೆಯಿಂದ ಬೆಂಗಳೂರು ನಲುಗಿ ಹೋಗಿದೆ, ಅಲ್ಲಿನ ನಿವಾಸಿಗಳು ಅನೇಕ ತೊಂದರೆ ಅನುಭವಿಸುತ್ತಿದ್ದಾರೆ, ಈ ವೇಳೆ ಅವರನ್ನು ಸಂತೈಸಿ, ಸ್ಪಂದಿಸುವುದನ್ನು ಬಿಟ್ಟು ಸಾಧನೆ, ಸಮಾವೇಶ ನಡೆಸುವುದರಲ್ಲಿ ಯಾವ ಅರ್ಥವಿದೆ, ಜನರಿಗೆ ಸ್ಪಂದಿಸುವುದು ನಿಮ್ಮ ಸಾಧನೆಯಾಗಬೇಕು, ಜನರನ್ನು ಕಡೆಗಣಿಸಿ ಸಮಾವೇಶ ನಡೆಸುವುದು ಸರಿಯೇ ಎಂದು ಅವರು ಪ್ರಶ್ನಿಸಿದ್ದಾರೆ.