ಇಂಡಿ | ಇಂದು ವಿವಿಧ ಮಹನೀಯರ ಜಯಂತಿ ಪೂರ್ವಭಾವಿ ಸಭೆ :ತಹಶಿಲ್ದಾರ ಬಿ ಎಸ್ ಕಡಕಭಾವಿ
ಇಂಡಿ : ವಿವಿಧ ಮಹನೀಯರ ಜಯಂತಿ ಅಂಗವಾಗಿ ತಾಲ್ಲೂಕ ಆಡಳಿತ ಸೌಧ ಸಭಾ ಭವನ ಇಂಡಿಯಲ್ಲಿ ಎಪ್ರಿಲ್ 25, 2025 ರಂದು ಬೆಳಿಗ್ಗೆ10 ಘಂಟೆಗೆ ತಹಶಿಲ್ದಾರ ಬಿ ಎಸ್ ಕಡಕಭಾವಿ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಿನಾಂಕ: 30-04-2025 ರಂದು”ಬಸವ” ಜಯಂತಿ, ದಿನಾಂಕ: 04-05-2025 ರಂದು “ಶ್ರೀ ಭಗೀರಥ” ಜಯಂತಿ, ದಿನಾಂಕ: 10-05-2025 ರಂದು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ’ ಜಯಂತಿ, ದಿನಾಂಕ: 2-05-2024 ರಂದು “ಶ್ರೀ ಶಂಕರಾಚಾರ್ಯ” ಜಯಂತಿಗಳನ್ನು ಆಚರಣೆ ಕುರಿತು ಉಲ್ಲೇಖದನ್ವಯ ಸದರಿ ಸಭೆಗೆ ಸಂಘ ಸಂಸ್ಥೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ದೃಶ್ಯ/ಪತ್ರಿಕಾ ಮಾಧ್ಯಮ ಮಿತ್ರರು ಹಾಜರಾಗಿ ಸಲಹೆ ಸೂಚನೆಗಳನ್ನು ನೀಡಲು ಕೋರಿದ್ದಾರೆ.