ಹಳೆಯ ವಿದ್ಯಾರ್ಥಿಗಳ ವಿಶೇಷ ಚರ್ಚಾ ಕೂಟ..! ಹೇಗೆ ಗೊತ್ತಾ..?
ಕಮಲಾಪುರ : ವಿದ್ಯಾರ್ಥಿಗಳ ಸಂಘದ ಅಡಿಯಲ್ಲಿ ಈಗಾಗಲೇ ಬೇಬಿ ಕೇರ್ ಸೆಂಟರ್ ಕೊಠಡಿಯನ್ನು ನಿರ್ಮಿಸಲಾಗಿದೆ ಮುಂಬರುವ ದಿನಗಳಲ್ಲಿ ಈ ಕಾಲೇಜಿನ ಏಳಿಗೆಗಾಗಿ ಶ್ರಮಿಸಿದ ಎಲ್ಲಾ ಪ್ರಾಂಶುಪಾಲರನ್ನು ಹಾಗೂ ಉಪನ್ಯಾಸಕರನ್ನು ಗೌರವಿಸುವ ಗುರುವಂದನೆ ಕಾರ್ಯಕ್ರಮ ತಿಂಗಳಾಂತ್ಯಕ್ಕೆ ಹಮ್ಮಿಕೊಳ್ಳಲಿದ್ದೇವೆ, ಅಷ್ಟೇ ಅಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳ ಸಿದ್ಧತೆಗಾಗಿ ನುರಿತ ಉಪನ್ಯಾಸಕರನ್ನು ಕರೆಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವಂತಹ ಕಾರ್ಯ ನಮ್ಮ ಸಂಘ ಮಾಡಲಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಸುರೇಶ್ ಲೇಂಗಟಿ ಹೇಳಿದರು.
ಕಮಲಾಪುರ ತಾಲೂಕಿನ ಮಹಾಗಾಂವ ಕ್ರಾಸ್ ನಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಹಮ್ಮಿಕೊಂಡ ವಿಶೇಷ ಚರ್ಚಾ ಕೂಟ ಹಾಗೂ ಪಾಲಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಮುಂದಿನ ವರ್ಷ ನ್ಯಾಕ್ ಕಮಿಟಿಯು ಕಾಲೇಜಿಗೆ ಆಗಮಿಸಲಿದ್ದು ಈ ನಿಟ್ಟಿನಲ್ಲಿ ಯಾವುದೇ ರೀತಿಯ ಸಹಕಾರ ನೀಡಲು ಹಳೆಯ ವಿದ್ಯಾರ್ಥಿಗಳ ಸಂಘ ಸಿದ್ಧವಿದೆ ಎಂದು ಹೇಳಿದರು
ಪ್ರಾಂಶುಪಾಲ ಡಾಕ್ಟರ್ ಶರಣಪ್ಪ ಮಾಳ್ಗೆ ಮಾತನಾಡಿ ಮುಂದಿನ ವರ್ಷ ಸಮಿತಿ ಆಗಮಿಸಲಿದ್ದು ಈಗಾಗಲೇ ನಾವು ಬೀ ಗ್ರೇಡ್ ಹೊಂದಿದ್ದೇವೆ ಮುಂಬರುವ ದಿನಗಳಲ್ಲಿ ಏ ಪ್ಲಸ್ ಪಡೆಯಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ ಅದಕ್ಕಾಗಿ ಹಳೆಯ ವಿದ್ಯಾರ್ಥಿಗಳ ಸಂಘ ಹಾಗೂ ಪಾಲಕರು ನಮಗೆ ಸಹಕಾರ ನೀಡಬೇಕು ಎಂದರು.
ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಹಳೆ ವಿದ್ಯಾರ್ಥಿಗಳ ಸಂಘದ ಕೋ ಆರ್ಡಿನೇಟರ್ ಡಾ.ಲಕ್ಷ್ಮಿಕಾಂತ್ ಶಿರೊಳ್ಳಿ, ಅಂಬರಾಯ ಮಡ್ಡೆ, ಬಂಗಾರಪ್ಪ ಚೌದ್ರಿ , ಕಿರಣ ಮಾತನಾಡಿದರು.
ಕಳೆದ ವರ್ಷ ಸ್ನಾತ ಕ ಪದವಿಯಲ್ಲಿ ಕಲಬುರ್ಗಿ ವಿವಿಗೆ ರಾಜ್ಯಶಾಸ್ತ್ರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಪಲ್ಲವಿ ಕಲಖೋರ ಅವರನ್ನು ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಶ್ರೀಕಾಂತ್ ಪಾಟೀಲ್, ಉಪನ್ಯಾಸಕಿ ವಿಜಯಲಕ್ಷ್ಮಿ, ಗ್ರಂಥಪಾಲಕ ಹಸನಮಿಯಾ , ಪಲ್ಲವಿ ಕಲಖೋರಾ, ಸಾಗರ್ ಬಾಳಿ, ಗುರು , ಸಿದ್ದು ಬಾಳಿ, ಪ್ರಕಾಶ, ಶಂಕರ, ಆರತಿ ದಿಪಿಕಾ, ಅಶ್ವಿನಿ, ಪೂಜಾ ಇತರರು ಇದ್ದರು