ದಿಶಾ ಸದಸ್ಯರಾಗಿ ಬಿಜೆಪಿ ಯುವ ಮುಖಂಡ ರವಿ ವಗ್ಗೆ ನೇಮಕ
ಇಂಡಿ: ಸಂಸದ ರಮೇಶ ಜಿಗಜಿಣಗಿಯವರ ಒಡನಾಡಿಯಾಗಿರುವ ಜಿಲ್ಲೆಯ ಬಿಜೆಪಿ ಯುವ ಮುಖಂಡ ಹಾಗೂ ತಾಲೂಕಿನ ಬುಯ್ಯಾರ ಗ್ರಾಮದ ರವಿ ವಗ್ಗೆ ಅವರು ಕೇಂದ್ರದ ವಿವಿಧ ಯೋಜನೆಗಳ ದಿಶಾ ಸಮಿತಿ ಸದಸ್ಯರನ್ನಾಗಿ ನೇಮಕವಾಗಿದ್ದಾರೆ. ಬಿಜೆಪಿ ಪಕ್ಷದಲ್ಲಿ ತಾಲೂಕು ಹಾಗೂ ಜಿಲ್ಲಾಮಟ್ಟದ ವಿವಿಧ ಹುದ್ದೆಗಳನ್ನು ಅಲಂಕರಿಸಿ, ಪಕ್ಷ ಸಂಘಟನೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ನನ್ನ ಮೇಲಿನ ಅಭಿಮಾನದಿಂದ ನನಗೆ ದಿಶಾ ಸಮಿತಿ ಸದಸ್ಯನನ್ನಾಗಿ ನೇಮಕ ಮಾಡಲು ಕಾರಣಕರ್ತರವಾದ ಕೇಂದ್ರದ ಮಾಜಿ ಸಚಿವರು ಹಾಗೂ ಸಂಸದರಾದ ರಮೇಶ ಜಿಗಜಿಣಗಿ ಅವರಿಗೆ ಅಭಿನಂದಿಸುವುದಾಗಿ ರವಿ ವಗ್ಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.