ಇಂಡಿ : ದಾರಿ ತಪ್ಪಿದ ಬಸ್ಸು, ತಪ್ಪಿದ ಬಾರಿ ಅನಾಹುತ..!
ಇಂಡಿ : ದಾರಿ ತಪ್ಪಿದ ಬಸ್ಸು, ತಪ್ಪಿದ ಬಾರಿ ದುರ್ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿ ನಡೆದಿದೆ.
ವಿಜಯಪುರ ಮಾರ್ಗದಿಂದ ಇಂಡಿ ಪಟ್ಟಣಕ್ಕೆ ಬರುತ್ತೀರುವ KA28 F2200 ಸಂಖ್ಯೆ ಬಸ್ಸು ಇಂಡಿ ವಿಜಯಪುರ ಇಂಡಿ ಬೊರ್ಡ ಹೊಂದಿರುವ ಬಸ್ಸು ಹಿರೇರೂಗಿ ಗ್ರಾಮದ ಸೋಮಯ್ಯ ನಗರ ಹತ್ತೀರ ದಾರಿ ತಪ್ಪಿ, ಬಾರಿ ಅನಾಹುತ ಸಂಭವಿಸುವ ಸಾಧ್ಯತೆಯಿಂದ ಪಾರು ಹೊಂದಿದ ಘಟನೆ ನಡೆದಿದೆ.
ಕರ್ನಾಟಕ ಮತ್ತು ಮಹಾರಾಷ್ಟ್ರ ಸೇರಿಸುವ ರಾಷ್ಟ್ರೀಯ ಹೆದ್ದಾರಿ 548(B) ಕಾಮಗಾರಿ ನಿಧಾನಗತಿ ಮತ್ತು ರಸ್ತೆ ಯೋಜಿತ ರೂಪದಲ್ಲಿ ನಡದೆ ಇರುವ ಕಾರಣಕ್ಕೆ ಈ ದುರ್ಘಟನೆ ನಡೆದಿದೆ. ಅಲ್ಲಿ ಅಲ್ಲಿ ಸೂಚನ ಫಲಕ ಅಳವಡಿಸಬೇಕಾಗಿತ್ತು. ಆದರೆ ಇಲ್ಲಿ ಯಾವುದೇ ಸೂಚನ ಫಲಕ ಇಲ್ಲದ್ದೆ, ಧೂಳು ಮಣ್ಣಿಮ ರಸ್ತೆಯಿಂದ ಸರಿಯಾದ ರಸ್ತೆ ಕಾಣದೆ ಈ ದುರ್ಘಟನೆ ನಡೆದಿದೆ. ಆದರೆ ಇನ್ನೂ ಬಸ್ ಗರಸು ರಸ್ತೆಯಲ್ಲಿ ಸಿಲುಕಿಕೊಂಡು ಒದ್ದಾಡುವ ಪರಿಸ್ಥಿತಿ ನಡೆದಿದೆ. ಆದರೆ ಸ್ಥಳೀಯರು ಸಹಾಯಕ್ಕೆ ಬಂದರೂ ಇನ್ನೂ ಯಾವುದೇ ಬದಲಾವಣೆ ಪರಿಣಾಮ ಕಂಡಿಲ್ಲ. ಇನ್ನೂ ಯಾವುದೇ ಪ್ರಯಾಣಿಕರಿಗೆ ಯಾವುದೇ ಹಾನಿ ಯಾಗಿರುವುದಿಲ್ಲ ಎಂದು ಪ್ರಾಥಮಿಕ ಮೂಲದಿಂದ ತಿಳಿದು ಬಂದಿದೆ.