ಮಾ-18 ರಂದು ಅನ್ನ ಪ್ರಸಾದ ಧಾನ್ಯಗಳ ಮೂಲಕ ಮುರಘೇಂದ್ರ ಶ್ರೀಗಳ ಮೆರವಣೆಗೆ
ಇಂಡಿ : ಮಾ. ೧೮ ರಂದು ಸಂಜೆ ೪ ಗಂಟೆಗೆ ತಾಲ್ಲೂಕಿನ ಶಿರಶ್ಯಾಡ ಹಿರೇಮಠ ಷ. ಬ್ರ. ಅಭಿನವ ಮುರಘೇಂದ್ರ ಶ್ರೀಗಳ ಹುಟ್ಟು ಹಬ್ಬ ಮತ್ತು ಬಡ ಮಕ್ಕಳ ಉಚಿತ ಪ್ರಸಾದ ನಿಲಯಕ್ಕೆ ಭೂಮಿ ಪೂಜೆ ಕುರಿತು ಬಸವೇಶ್ವರ ವೃತ್ತದಿಂದ ಅನ್ನ ಪ್ರಸಾದ ಮೂಲಕ ಮೆರವಣೆಗೆ ಅಭಿನವ ಮುರಘೇಂದ್ರ ಶ್ರೀಗಳ ಕುಟೀರದ ವರೆಗೆ ನಡೆಯುವದು ಎಂದು ಅಭಿನವ ಮುರಘೇಂದ್ರ ಶ್ರೀಗಳು ಹೇಳಿದರು.
ಪಟ್ಟಣದ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈಗಾಗಲೇ ಉಚಿತ ಪ್ರಸಾದ ನಿಲಯಕ್ಕೆ ಸರಕಾರದಿಂದ ೫೦ ಲಕ್ಷ ರೂ ಬಂದಿದೆ ಎಂದರು.
ಸಂಜ ೬ ಗಂಟೆಗೆ ಧರ್ಮಸಭೆ ಜರುಗಲಿದ್ದು ಗೋಳಸಾರದ ಶ್ರೀಗಳು,ಅರ್ಜುಣಗಿ, ರೋಡಗಿ ಶ್ರೀಗಳು ಸೇರಿದಂತೆ ತಾಲೂಕಿನ ವಿವಿಧ ಮಠಾಧೀಶರು ಭಾಗವಹಿಸುವರು.
ಇಂಡಿಯ ಶಾಸಕ ಯಶವಂತರಾಯಗೌಡ ಪಾಟೀಲರು, ಸಂಸದ ರಮೇಶ ಜಿಗಜಿಣಗಿ, ಅಪ್ಪು ಪಟ್ಟಣಶೆಟ್ಟಿ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿರುವರು ಎಂದರು.
ಕಾಸುಗೌಡ ಬಿರಾದಾರ ಮಾತನಾಡಿ ಮುರಗೇಂದ್ರ ಶ್ರೀಗಳನ್ನು ರುದ್ರಾಕ್ಷಿಯಿಂದ ತುಲಾಭಾರ ಮಾಡಿ ರುದ್ರಾಕ್ಷಿ ಬಂದ ಭಕ್ತರಿಗೆ ಹಂಚುವ ಕಾರ್ಯಕ್ರಮವಿದೆ ಎಂದರು.ಕಳೆದ ಬಾರಿ ಶ್ರೀ ಗಳ ಹುಟ್ಟು ಹಬ್ಬಕ್ಕೆ ಸಾಮೂಹಿಕ ವಿವಾಹ ಮತ್ತು ಪ್ರತಿವರ್ಷ ವಿಭಿನ್ನ ಕಾರ್ಯಕ್ರಮ ನಡೆಯುತ್ತಿದೆ ಎಂದರು.
ಚೋರಗಿ, ಸಾಲೋಟಗಿ, ತೆಗ್ಗೆಳ್ಳಿ,ಸಂಗೋಗಿ, ಶಿರಶ್ಯಾಡ ಭಕ್ತರಿಂದ ದಾಸೋಹ ಸೇವೆ ನಡೆಲಿದೆ ಎಂದರು.
ಉದ್ದಿಮೆದಾರ ಅನೀಲ ಪ್ರಸಾದ ಏಳಗಿ, ಶಿವಾನಂದ ತಾಂಬೆ,ಸತೀಶ ಕಕ್ಕಳಮೇಲಿ,ರಾಮಸಿಂಗ ಕನ್ನೊಳ್ಳಿ ಮತ್ತಿತರಿದ್ದರು.
ಷ.ಬ್ರ. ಅಭಿನವ ಮುರಗೇಂದ್ರ ಶ್ರೀಗಳು