ಇಂಡಿ | ಕವಿಲೊಂದು ಅಪೂರ್ವ ಕಲ್ಪನಾ ಶಕ್ತಿ ಅಡಗಿದೆ : ಅಧ್ಯಕ್ಷೆ ಕವಿಯತ್ರಿ ಗಂಗಾಬಾಯಿ
ಇಂಡಿ: ಬ್ರಹ್ಮನ ಸೃಷ್ಟಿಯನ್ನೇ ತಲೆಕೆಳಗೆ ಮಾಡುವಂತಹ ಕವಿಯನ್ನು ಎರಡನ್ನೇ ಬ್ರಹ್ಮ ಎನ್ನುತ್ತಾರೆ. ಏಕೆಂದರೆ ಕವಿಲೊಂದು ಅಪೂರ್ವ ಕಲ್ಪನಾ ಶಕ್ತಿ ಅಡಗಿದೆ ಆದ್ದರಿಂದಲೇ ‘ರವಿ ಕಾಣದನ್ನು ‘ ಎಂದು ಕದಳಿ ವೇದಿಕೆ ಅಧ್ಯಕ್ಷೆ ಕವಿಯತ್ರಿ ಗಂಗಾಬಾಯಿ ಗಲಗಲಿ ಹೇಳಿದರು.
ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಕಾರದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡ ಮಹಿಳಾ ಕವಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಅಧಕ್ಷ ರಾಘವೇಂದ್ರ ಕುಲಕರ್ಣಿ ಮಾತನಾಡಿದ ಅವರು, ಕವಿಯಾದವನ್ನು ತನ್ನ ಹೋರಗಣ್ಣಿನಿಂದ ಮತ್ತು ಅಂತರಂಗದ ಕಣ್ಣಿನಿಂದ ಈಡಿ ಲೋಕವನ್ನು ಗ್ರಹಿಸಿ ತಟ್ಟನೆ ಒಂದು ಲೋಕವನ್ನು ಸೃಷ್ಟಿಸುತ್ತಾನೆ. ಇಲ್ಲಿ ಕೇವಲ ಬರೆಯಬೇಕೆಂಬ ಮಾನಸಿಕ ಒತ್ತಡ, ಸಾಮಾಜಿಕ ಪ್ರೇರಣೆ ಮತ್ತು ತನಗಾದ ಅನುಭವವಗಳನ್ನು ತನ್ನ ಅನುಭವ ಬುತ್ತಿಯಲ್ಲಿ ದಾಖಲಿಸುವ ದಾಖಲಿಸುವ ಬಯಕೆ ಕಾವ್ಯ ಸೃಷ್ಟಿಯ ರಚನೆಗೆ ಕಾರಣವಾಗುತದೆಂದು ಹೇಳಿದರು.
ಇನ್ನೂ ಅತಿಥಿಯಾಗಿ ಮಾತನಾಡಿದ ಸತ್ಯಪ್ಪ ಹಡಪದ ಪ್ರತಿಯೊಬ್ಬರಲ್ಲಿಯೂ ಕವಿತಾ ಶಕ್ತಿ ಅಡಗಿದೆ ಅದಕ್ಕೊಂದು ಅವಕಾಶದ ಅವಶ್ಯಕತೆಯಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕ ಅಧಿಕಾರಿ ಎಸ್.ಆರ್. ಗದ್ಯಾಳ ಮಾತನಾಡಿ ವಿದ್ಯಾರ್ಥಿನಿಯರಲ್ಲಿ ಬಾಲ್ಯದಿಂದಲೇ ಕವಿತಾ ರಚನಾ ಶಕ್ತಿ ಹೆಚ್ಚಿಸಲು ಇಂತಹ ಅವಕಾಶಗಳು ಅವಶ್ಯಕವಾಗಿವೆಯೆಂದರು. ಇನ್ನೊರ್ವ ಅತಿಥಿ ಶಶಿಕಲಾ ಬೇಟಗೆರಿ ಮಾತನಾಡಿದರು. ಸುಮಾರು 13 ಜನ ಮಹಿಳಾ ಕವಿಯತ್ರಿಯರು ಕವನ ವಾಚನ ಮಾಡಿದರು.
ನಿಲಯ ಮೇಲ್ವಿಚಾರಕಿ ಎಂ.ಎಸ್. ಮುಜಾವರ್, ಸಾಹಿತಿ ಬಸವರಾಜ ಕಿರಣಗಿ, ಶಿಕ್ಷಕ ಹೊರಗಿನಮನಿ, ಕವಿ ಸತ್ಯಪ್ಪ ಹಡಪದ ಉಪಸ್ಥಿತರಿದ್ದರು.
ಗೀತಾ ಹಿರೆಮಾಳ ಸ್ವಾಗತಿಸಿದರು, ಪಾರ್ವತಿ ಸೊನ್ನದ ನಿರೂಪಿಸಿದರು, ನಿಲಯ ಪಾಲಕರಾದ ಎಸ್. ಆಯ್. ಸುಗೂರ ವಂದಿಸಿದರು. ವಿದ್ಯಾರ್ಥಿನಿಯರು ಹಾಗೂ ಸಾಹಿತ್ಯಾಸಕ್ತರು ಭಾಗವಹಿಸಿದ್ದರು.