ಮಹಿಳೆಯರಿಗೆ ಕಾನೂನಿನ ಅರಿವು ಗೂತ್ತಿರಬೇಕು : ಮೇಡೆಗಾರ
ಇಂಡಿ: ಪ್ರಸ್ತುತ ಸಮಾಜದಲ್ಲಿ ಮಹಿಳೆಯರಿಗೆ ಇರಬೇಕಾದ ಕಾನೂನಿನ ಅರಿವು ಮೂಡಿಸುವ ಕಾರ್ಯಗಾರಗಳು ಹೆಚ್ಚು ಹೆಚ್ಚು ನೆಡೆಯಬೇಕು ಎಂದು ವಕೀಲೆ ಡಿ.ವಾಯ್.ಮೇಡೆಗಾರ ಹೇಳಿದ್ದರು.
ಅವರು ಪಟ್ಟಣ್ಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೂಂಡಿದ್ದ ಅಂತರ ರಾಷ್ಟ್ರೀಯ ಮಹಿಳಾ ದಿನಾಚಾರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಹಿಳಾ ಸಬಲೀಕರಣ ಕುರಿತು ಉಪನ್ಯಾಸ ನೀಡಿದ್ದರು.
ಲೈಂಗಿಕ ದೌರ್ಜನ್ಯ ಮತ್ತು ಮಹಿಳಾ ಶೋಷಣೆ ಇವುಗಳ ಕುರಿತು ಪ್ರಸ್ತುತ ಭಾರತೀಯ ದಂಡ ಸಂಹಿತೆಯಲ್ಲಿ ಹೂಸ ಕಾನೂನುಗಳ ಬಗ್ಗೆ ಪ್ರಸ್ತಾಪಿಸಿದರು. ಅಧ್ಯಕ್ಷತೆಯನ್ನುವಹಿಸಿ ಕಾಲೇಜಿನ ಪ್ರಾಚಾರ್ಯ, ಪ್ರೂ.ಆರ್ ಎಚ್ ರಮೇಶ ಮಾತನಾಡಿ “ಮಹಿಳಾ ದಿನಾಚಾರಣೆ ದೇಶದ ಶ್ರೇಷ್ಠ ಮಹಿಳೆಯರನ್ನು ಸ್ಮರಿಸಿಕೂಂಡು ಅವರ ವಿಚಾರಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೂಳ್ಳಬೇಕು ಎಂದರು.
ಪ್ರೂ.ರವಿಕುಮಾರ ಅರಳಿ ಪ್ರಾಸ್ತಾವಿಕವಾಗಿ ಮಾತನಾಡಿದರು, ವೇದಿಕೆಯಲ್ಲಿ ಪ್ರೂ.ತಿಪ್ಪಣ್ಣ ವಗ್ಧಾಳ,ಪ್ರೂ.ರಾಜಲಕ್ಷ್ಮಿ, ಉಪಸ್ಥಿತರಿದರು.
ಕುಮಾರಿ.ತೇಜಸ್ವನಿ ಯಳಮೇಲಿ ಪ್ರಾರ್ಥಿಸಿದರು, ಪ್ರೂ.ಸಂಗಮೇಶ ಹಿರೇಮಠ ವಂದಿಸಿದರು,ಪ್ರೂ.ಸುರೇಖಾ ರಾಠೋಡ್ ನಿರೂಪಿಸಿದರು.
ಇಂಡಿ ಪಟ್ಟಣ್ಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೂಂಡಿದ್ದ ಅಂತರ ರಾಷ್ಟ್ರೀಯ ಮಹಿಳಾ ದಿನಾಚಾರಣೆ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಪ್ರಾಚಾರ್ಯ ಪ್ರೂ.ಆರ್ ಎಚ್ ರಮೇಶ
ಉದ್ಘಾಟಿಸಿದರು