ರಾಷ್ಟ್ರ ನಿರ್ಮಾಣದಲ್ಲಿ ಎಲ್ಲಾ ಕ್ಷೇತ್ರ ಅಭಿವೃದ್ಧಿ ಅವಶ್ಯಕ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ರಾಷ್ಟ್ರ ನಿರ್ಮಾಣದಲ್ಲಿ ಎಲ್ಲಾ ಕ್ಷೇತ್ರ ಅಭಿವೃದ್ಧಿ ತೀರಾ ಅವಶ್ಯಕ ಎಂದು ಬ.ಸಾಲವಾಡಗಿ ಸರಕಾರಿ ಪ್ರೌಢ ಶಾಲೆ ಶಿಕ್ಷಕ ಪ್ರವೀಣ ನಾಡಗೌಡ ಹೇಳಿದರು.
ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರ ಪ್ರೌಢ ಶಾಲೆಯಲ್ಲಿ ನಡೆದ 10ನೇ ತರಗತಿ ವಿದ್ಯಾರ್ಥಿಗಳಿಗೆ ಶುಭ ಹಾರೈಸುವ ಸಂದರ್ಭದಲ್ಲಿ ಮಾತನಾಡಿದರು. ಮನುಷ್ಯನ ಮೆದುಳಿನಲ್ಲಿ ಸಾಕಷ್ಟು ಸಂಗ್ರಹ ಸಾಮರ್ಥ್ಯಗಳಿವೆ. ಹಿಂದೆ ಗುರುಕುಲ ಶಿಕ್ಷಣ ಪದ್ಧತಿ ಇರುವಾಗ ಪಠ್ಯಕ್ರಮ ಸಿಮೀತವಾಗಿರಲಿಲ್ಲ. ಸಾವಿರಾರು ಶ್ಲೋಕಗಳನ್ನು ಸ್ಮರಣ ಸಾಮರ್ಥ್ಯ, ಹತ್ತಾರು ವಿಷಯಗಳ ಕಲಿಕೆ ಇವೆಲ್ಲವುಗಳನ್ನು ಆಸಕ್ತಯಿಂದ ಮಾಡುತ್ತಿದ್ದರು. ಇವತ್ತು ಸೀಮಿತ ವಿಷಯದ ಪರಿಧಿಗೆ ಒಳಪಟ್ಟಿದ್ದೇವೆ. ಪ್ರತಿಯೊಂದು ಕ್ಷೆತ್ರಕ್ಕೂ ತನ್ನದೆ ಆದ ಮಹತ್ವವಿದೆ. ಸಮಾಜದಲ್ಲಿ ಎಲ್ಲಾ ಕ್ಷೇತ್ರಗಳು ಬೆಳವಣಿಗೆ ಆಗ ಬೇಕಾಗಿದೆ. ಉನ್ನತ ಸ್ಥಾನಕ್ಕೆ ಹೋದಾಗ ಸಂಸ್ಕಾರ ಇಲ್ಲದವನ ಬದುಕು ವ್ಯರ್ಥ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಬಿ.ಪಿ.ಕುಲಕರ್ಣಿ, ಕಾರ್ಯದರ್ಶಿ ಪ್ರಭು ಎಸ್.ಕಡಿ, ನಿರ್ದೇಶಕರುಗಳಾದ ಬಸವರಾಜ ನಾಲತವಾಡ, ಶಂಕರ ಬೇವಿನಗಿಡದ, ಜಿ.ಜೆ.ಪಾದಗಟ್ಟಿ, ಮುಖ್ಯಗುರು ರಾಮಚಂದ್ರ ಹೆಗಡೆ, ಆಂಗ್ಯ ಮಾಧ್ಯಮ ಮುಖ್ಯ ಗುರುಮಾತೆ ರಂಜಿತಾ ಭಟ್ಟ, ಪ್ರಾಥಮಿಕ ವಿಭಾಗದ ಮುಖ್ಯಗುರುಮಾತೆ ಸರಸ್ವತಿ ಮಡಿವಾಳರ್, ಶಿಕ್ಷಕರಾದ ಅನ್ನಪೂರ್ಣ ನಾಗರಾಳ, ಮಂಜುನಾಥ ಪಡದಾಳಿ, ಬಿ.ಆರ್.ಬೆಳ್ಳಿಕಟ್ಟಿ, ಎಸ್.ಎಸ್.ಹಂಜಗಿ, ಕೀರ್ತಿ ತಳಗೇರಿ, ಲೋಹಿತ ಜೈನಾಪೂರ, ದಾನಮ್ಮ ಮಡಿವಾಳರ ಸೇರಿದಂತೆ ಇತರರು ಹಾಜರಿದ್ದರು.
ಮುದ್ದೇಬಿಹಾಳ ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರ ಪ್ರೌಢ ಶಾಲೆಯಲ್ಲಿ ನಡೆದ 10ನೇ ತರಗತಿ ವಿದ್ಯಾರ್ಥಿಗಳಿಗೆ ಶುಭ ಹಾರೈಸುವ ಸಂದರ್ಭದಲ್ಲಿ ಬ.ಸಾಲವಾಡಗಿ ಸರಕಾರಿ ಪ್ರೌಢ ಶಾಲೆ ಶಿಕ್ಷಕ ಪ್ರವೀಣ ನಾಡಗೌಡ ಮಾತನಾಡಿದರು.