ಮುದ್ದೇಬಿಹಾಳ:ಕರ್ನಾಟಕ ರಾಜ್ಯ ಸರ್ಕಾರಿ ಗ್ರೇಡ್ 1 ದೈಹಿಕ ಶಿಕ್ಷಣ ಶಿಕ್ಷಕರು ಸಂಘ (ರಿ) ಬೆಂಗಳೂರು, ನೋಂದಣಿ ಸಂಖ್ಯೆ : SOR/GNR/317/2014-15, , ಮುದ್ದೇಬಿಹಾಳ ಘಟಕದ 2025-2029 ಅವಧಿಗೆ ಅಧ್ಯಕ್ಷರಾಗಿ ಸರ್ಕಾರಿ ಆದರ್ಶ ವಿದ್ಯಾಲಯ ಬಿದರಕುಂದಿ ದೈಹಿಕ ಶಿಕ್ಷಣ ಶಿಕ್ಷಕರಾದ ಎ.ಸಿ.ಕೆರೂರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಎಂ.ಎಸ್. ಕವಡಿಮಟ್ಟಿ ಅವರು ಪ್ರಮಾಣ ಪತ್ರವನ್ನು ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ತಾಲೂಕಿನ ವಿವಿಧ ಶಾಲೆಗಳಿಂದ ಆಗಮಿಸಿದ ಶಿಕ್ಷಕರಾದ ಎಂ.ಎಸ್. ನಾಟಿಕರ್, ಎನ್.ಎಸ್. ಬಿರಾದಾರ, ಬಲಭೀಮ ಮಾದರ, ಕೆ.ಬಿ.ಸಜ್ಜನ, ರವೀಂದ್ರ. ಮೇರೆಕೋರ, ಎಸ್.ಎಸ್.ಹಿರೇಮಠ್, ಎಸ್.ಎಸ್. ಅಂಗಡಿ, ಸುನಿಲ್.ಚಲವಾದಿ, ಎಂ.ಎಸ್.ನೀರಲಗಿ , ಪುಟ್ಟುಗೌಡ ಪಾಟೀಲ್, ರಮೇಶ್ ಹಿರೇಮಠ್, ಮಹೇಶ್ ಕೊಣ್ಣೂರ, ಎಸ್.ಬಿ.ಹವಾಲ್ದಾರ್, ಸೇರಿದಂತೆ ಉಪಸ್ಥಿತರಿದ್ದರು.