ರಾಜ್ಯ ರಾಜಕೀಯದಲ್ಲಿ ಬದಲಾವಣೆಯ ಗಾಳಿ ಬೀಸಲಿದೆ, ಕಾಳುಗಳ ಬೆಲೆ ಗಗನಕ್ಕೆ ಏರಲಿದೆ : ಓಂಕಾರಯ್ಯ ಶ್ರೀಗಳು
ಇಂಡಿ: ಈ ವರ್ಷ ಹತ್ತಾಣೆ ಮಳೆ ಇದ್ದು ನಾಕಾಣೆ ಬೆಳೆ ಬೆಳೆಯಲಿದೆ. ಬೆಳೆಗಳಿಗೆ ರೋಗ ಭೀತಿ ಎದುರಾಗಲಿದೆ ಎಂದು ಸಾರವಾಡದ ಓಂಕಾರಯ್ಯ ಶ್ರೀಗಳು ತಿಳಿಸಿದರು.
ಸೋಮವಾರ ರಾತ್ರಿ ಇಂಡಿ ತಾಲೂಕಿನ ಇಂಗಳಗಿ ಗ್ರಾಮದ ಧರ್ಮರ ದೇವರ (ಮರುಳಸಿದ್ದೇಶ್ವರ) ಜಾತ್ರಾ ಮಹೋತ್ಸವದ ಪೂಜಾ ಸಮಾರಂಭದ ನಂತರ ಅವರು ಕಾರಣ ಕ ನುಡಿದರು.
ರಾಜ್ಯ ರಾಜಕೀಯದಲ್ಲಿ ಬದಲಾವಣೆಯ ಗಾಳಿ ಬೀಸಲಿದೆ, ರಾಷ್ಟ್ರ ರಾಜಕಾರಣದಲ್ಲಿ ರಾಷ್ಟ್ರ ನಾಯಕರಿಗೆ ಸಾಕಷ್ಟು ತೊಂದರೆಗಳು ಎದುರಾಗಲಿವೆ ಎಂದು ಭವಿಷ್ಯ ನುಡಿದರು.
ರೈತರು ತಾವು ಬೆಳೆದ ಕಾಳುಗಳನ್ನು ಜೋಪಾನವಾಗಿ ಕಾಪಾಡಿಕೊಳ್ಳಬೇಕು. ಕಾಳುಗಳ ಬೆಲೆ ಗಗನಕ್ಕೆ ಇರಲಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಧರ್ಮರ ದೇವರ ಹೇಳಿಕೆ ಕಾರ್ಯಕ್ರಮ ನಡೆಯಿತು. ಮುಂಗಾರು ಮಳೆ ಸಮೃದ್ಧಿಯಾಗಲಿದ್ದು, ಹಿಂಗಾರು ಮಳೆ ಕಡಿಮೆಯಾಗಲಿದೆ ಎಂದು ತೆಂಗಿನ ಕಾಯಿ ಮುಖಾಂತರ ಹೇಳಿಕೆ ಹೇಳಲಾಯಿತು.
ಜಾತ್ರಾ ಸಮಾರಂಭದಲ್ಲಿ ಧರ್ಮರ ಮಠದ ಅಶೋಕ ಬಳಬಟ್ಟಿ, ಶ್ರೀಶೈಲ ಸೀತಿಮನಿ, ಮಲ್ಲೇಶಪ್ಪ ಬಳಬಟ್ಟಿ, ಬಸವರಾಜ ಜಾದವ್, ಭೀಮ ವಾಲಿಕಾರ, ಪ್ರಭು ಹೊಸಮನಿ, ಆನಂದ ಪವಾರ, ಮಾಧವರಾವ್ ಪವಾರ, ಅಣ್ಣಪ್ಪ ಅಹಿರಸಂಗ, ಉಮೇಶ ಚೌಹಾಣ, ಯಲ್ಲಪ್ಪ ಪೂಜಾರಿ, ಲಕ್ಕಪ್ಪ ಪೂಜಾರಿ, ತಾನಾಜಿ ಸೋಲಂಕಾರ, ಅಶೋಕ ಥೋರಾತ, ಬಸವರಾಜ ಬೆನಕನಹಳ್ಳಿ ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿದ್ದರು.
ಇಂಡಿ: ತಾಲೂಕಿನ ಇಂಗಳಗಿ ಗ್ರಾಮದ ಧರ್ಮರ ದೇವರ ಜಾತ್ರಾ ಮಹೋತ್ಸವದಲ್ಲಿ ಸಾರವಾಡದ ಓಂಕಾರ ಶ್ರೀಗಳು ಕಾಲಜ್ಞಾನದ ಮಾಹಿತಿ ನೀಡಿದರು.