ಕುಡಿಯುವ ನೀರಿಗೆ ಹಾಹಾಕಾರ..! ಗ್ರಾಮ ಪಂಚಾಯತ್ ಬೀಗ್ ಜಡಿದು ಪ್ರತಿಭಟನೆ..!
ಇಂಡಿ: ತಾಲೂಕಿನ ಮಿರಗಿ ಗ್ರಾ.ಪಂ ಗೆ ಕುಡಿಯುವ ನೀರಿಗಾಗಿ ಆಗ್ರಹಿಸಿ ಮಹಿಳೆಯರು ಸೋಮವಾರ ಬೀಗ ಹಾಕಿ ಪ್ರತಿಭಟನೆ ಮಾಡಿದರು.
ತಾಲೂಕಿನ ಗೋಳಸಾರ ಗ್ರಾಮ ಮಿರಗಿ ಗ್ರಾ.ಪಂ ವ್ಯಾಪ್ತಿಗೆ ಬರುತ್ತಿದ್ದು ಗೋಳಸಾರದ ಗ್ರಾಮದ ವಸ್ತಿ ಪ್ರದೇಶಗಳಿಗೆ ಕುಡಿಯುವ ನೀರಿನ ತೊಂದರೆ ಇದೆ ಎಂದು ಆಗ್ರಹಿಸಿ ಇಂದು ಗೋಳಸಾರ ಗ್ರಾಮದ ವಸ್ತಿ ಪ್ರದೇಶದ ನಾಗರಿಕರು ಮಿರಗಿ ಗ್ರಾ.ಪಂ ಮುಂದೆ ಪ್ರತಿಭಟನೆ ನಡೆಸಿದರು.
ಗೋಳಸಾರದ ವಸ್ತಿ ಪ್ರದೇಶದಲ್ಲಿ ೧೦೦ ಕ್ಕೂ ಹೆಚ್ಚು ಮನೆಗಳಿದ್ದು, ಕಳೆದ ಅನೇಕ ವರ್ಷಗಳಿಂದ ಕುಡಿಯುವ ನೀರಿನ ತೊಂದರೆ ಇದೆ. ಹೀಗಾಗಿ ಗ್ರಾ.ಪಂ ಗೆ ಕೀಲಿ ಹಾಕುವದು ಅನಿವಾರ್ಯ. ಬರುವ ದಿನಗಳಲ್ಲಿ ಕುಡಿಯುವ ನೀರಿನ ತೊಂದರೆ ನೀಗಿಸದಿದ್ದರೆ ಇಂಡಿ ತಾ.ಪಂ ಮತ್ತು ವಿಜಯಪುರ ಜಿ.ಪಂ ಗೆ ಬೀಗ ಹಾಕಿ ಪ್ರತಿಭಟನೆ ಮಾಡುವದಾಗಿ ತಿಳಿಸಿದರು.
ಈ ಕುರಿತು ಮಿರಗಿ ಪಿಡಿಒ ಸಾಹೇಬರಿಗೆ ಮತ್ತು ಇಂಡಿ ಇಒ ಮತ್ತು ಗ್ರಾಮೀಣ ಕುಡಿಯುವ ನೀರು ಸರಬರಾಜು ಅಧಿಕಾರಿಗಳಿಗೆ ಅಲೆದಾಡಿ ಸಾಕಾಗಿದೆ ಎಂದರು.
ಪ್ರತಿಭಟನೆಯಲ್ಲಿ ಕಾಂತಮ್ಮ ತೆಗ್ಗೆಳ್ಳಿ, ಮಲ್ಲಮ್ಮ ಭೂಸೆಟ್ಟಿ, ಶಾರದಾ ಹಿರೇಕುರಬರ, ಶಾಂತಪ್ಪ ತೆಗೆಳ್ಳಿ, ಸೋಮಲಿಂಗ ಹಿರೇಕುರಬರ, ಸಾಹೇಬಗೌಡ ಬಿರಾದಾರ, ಸುಭಾಸ ಬಿರಾದಾರ, ಶಂಕರಲಿಂಗ ಬಡದಾಳ, ಈರಣ್ಣ ಬೂದಿಹಾಳ, ಹಣಮಂತ ತಾಬಸೆ, ಶಿವಲಿಂಗಪ್ಪ ಬಾಗೇವಾಡಿ ಮತ್ತಿತರಿದ್ದರು.