ಚೆನ್ನಮ್ಮ ಸಂಸ್ಥೆ ಬಡ ಜನರಿಗೆ ಆಶ್ರಯ ತಾಣ : ಹುಣಸಿಗಿ
ಇಂಡಿ: ಸ್ವಾತಂತ್ರ್ಯ ಹೋರಾಟಗಾರ್ತಿ ವೀರರಾಣಿ ಕಿತ್ತೂರು ಚೆನ್ನಮ್ಮನವರ ಹೆಸರಿನಲ್ಲಿ ಶಿಕ್ಷಣ ಸಂಸ್ಥೆ ನಡೆಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಶಿಕ್ಷಣ ಸಂಯೋಜಕ ಎ.ಸಿ.ಹುಣಸಗಿ ಹೇಳಿದರು.
ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ವೀರರಾಣಿ ಕಿತ್ತೂರು ಚೆನ್ನಮ್ಮ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಟಿಸಿ ಅವರು ಮಾತನಾಡಿದರು.
ಇಂದು ಶೈಕ್ಷಣ ಕ ಸಂಸ್ಥೆಗಳೆಲ್ಲವೂ ಶಿಕ್ಷಣ ಸಂಸ್ಥೆಗಳನ್ನು ಉದ್ದಿಮೆಗಳನ್ನಾಗಿ ಮಾಡಿಕೊಂಡು ಹಣ ಗಳಿಸಲು ಮುಂದಾಗಿವೆ. ಆದರೆ ವೀರರಾಣ ಕಿತ್ತೂರು ಚೆನ್ನಮ್ಮ ಸಂಸ್ಥೆ ಬಡ ಜನರಿಗೆ ಆಶ್ರಯ ತಾಣವಾಗಿ ಮಾರ್ಪಟ್ಟಿದೆ, ಚೆನ್ನಮ್ಮ ಸಂಸ್ಥೆಯವರು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುತ್ತಿದ್ದು ವಿದ್ಯಾರ್ಥಿಗಳು ಎಷ್ಟು ಕೊಡುತ್ತಾರೋ ಅಷ್ಟೇ ಹಣವನ್ನು ಸ್ವೀಕರಿಸುತ್ತಾ ಸಂಸ್ಥೆ ಮುನ್ನಡೆಸುತ್ತಿರುವುದು ಶ್ಲಾಘನೀಯ ಕೆಲಸ ಎಂದರು.
ಜೆಡಿಎಸ್ ಮುಖಂಡ ಹಾಗೂ ವೈದ್ಯ ಡಾಕ್ಟರ್ ರಮೇಶ್ ಚವ್ಹಾಣ ಮಾತನಾಡಿ, ಈ ಶಿಕ್ಷಣ ಸಂಸ್ಥೆ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ಪ್ರಥಮ ಮಹಿಳಾ ಹೋರಾಟಗಾರ್ತಿಯ ಹೆಸರಿನಲ್ಲಿ ನಡೆಯುತ್ತಿರುವುದು ನಮಗೆಲ್ಲ ಸಂತಸ ತಂದಿದೆ. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಈ ಸಂಸ್ಥೆ ಇನ್ನಷ್ಟು ಉತ್ತುಂಗಕ್ಕೆ ಬೆಳೆಯಲಿ ಎಂದರು.
ನ್ಯಾಯವಾದಿ ಎಸ್.ಆರ್.ಬಿರಾದಾರ ಕಾರ್ಯಕ್ರಮ ಉದ್ಘಾಟಿಸಿದರು.
ಕಾಂಗ್ರೆಸ್ ಮುಖಂಡ ಸುಧೀರ ಕರಿಕಟ್ಟಿ, ಪತ್ರಕರ್ತ ಉಮೇಶ ಬಳಬಟ್ಟಿ, ಸಿದ್ದು ಡಂಗಾ, ಶರಣು ಇಂಡಿ, ಆಕಾಶ ಇಂಡಿ ಸೇರಿದಂತೆ ಅನೇಕರು ಹಾಗೂ ಸಿಬ್ಬಂದಿ ವರ್ದವರು ಉಪಸ್ಥಿತರಿದ್ದರು.
ಇಂಡಿ: ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ವೀರರಾಣ ಕಿತ್ತೂರು ಚೆನ್ನಮ್ಮ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಗಣ್ಯ-ಮಾನ್ಯರು ಉದ್ಘಾಟಿಸಿದರು.