ಪ್ರಜಾಪಿತ ಬ್ರಹ್ಮಕುಮಾರಿ ವಿವಿಯಲ್ಲಿ ಶಿವರಾತ್ರಿ
ಇಂಡಿ : ಪಟ್ಟಣದ ಬ್ರಹ್ಮಕುಮಾರಿ ವಿ ವಿ ಯಲ್ಲಿ ಶಿವರಾತ್ರಿ ಮಹೋತ್ಸವ ವಿಭ್ರಂಜಣೆಯಿAದ ಆಚರಿಸಲಾಯಿತು.ಬೆಳಗ್ಗೆ ಧ್ವಜಾರೋಹಣ ನಡೆಯಿತು. ನಂತರ ಲಯಕರ್ತ ಶಿವನ ನಾಮಸ್ಮರಣೆ,ವಿಶೇಷ ಅಲಂಕಾರ ಪೂಜೆ ನಡೆಯಿತು.
ಈಶ್ವರನಿಗೆ ತ್ರಿಕಾಲ ಪೂಜೆ,ಜತೆಗೆ ಜಲ ಹಾಗೂ ಹಾಲಿನ ಅಭಿಷೇಕ, ಬೆಳಗ್ಗೆ ಹಾಗೂ ಸಂಜೆ ಮಹಾದೇವನಿಗೆ ವಿಶೇಷ ಪೂಜೆ ನೇರವೇರಿಸಲಾಯಿತು.
ವಿವಿ ಮುಖ್ಯಸ್ಥೆ ಬಿ.ಕೆ.ಯಮಿನಾ ಅಕ್ಕನವರು ಮತ್ತು ಶ್ರೀದೇವಿ ಅಕ್ಕ ನವರು ಶಿವರಾತ್ರಿಯ ಉಪವಾಸ ಮತ್ತು ಪೂಜೆಯ ಮಹತ್ವ ಕುರಿತು ಮಾತನಾಡಿದರು.
ಯೋಗ ಶಿಕ್ಷಕ ಬಿ.ಎಸ್.ಪಾಟೀಲ ಗುರುಗಳು, ರಾಜಶ್ರೀ ಕೋಳೆಕರ, ಪಲ್ಲವಿ ಗೋಟ್ಯಾಳ, ಮತ್ತು ಸ್ನೇಹಾ ಪಾಟೀಲ ಶಿವರಾತ್ರಿಯ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಎನ್.ವಿ.ಹಂಜಗಿ, ಶಿವಲಿಂಗಪ್ಪ ಪಟ್ಟದಕಲ್ಲ,ಬಿ.ಎಸ್.ಗೊಟ್ಯಾಳ,ರಾಜಪ್ಪ ಲಕ್ಕುಂಡಿ, ಅರವಿಂದ ಕಠಾರೆ, ಸಿದ್ದಾರೂಢ ಬಿರಾದಾರ, ರಾಮಚಂದ್ರ ಹೂಗಾರ, ಮಹೇಶ ಕೆಸಟ್ಟಿ ಮತ್ತಿತರಿದ್ದರು.
ಇಂಡಿಯ ಪ್ರಜಾಪಿತ ಬ್ರಹ್ಮಕುಮಾರಿ ವಿವಿ ಯಲ್ಲಿ ನಡೆದ ಶಿವರಾತ್ರಿ ಕಾರ್ಯಕ್ರಮದಲ್ಲಿ ಯಮುನಾ ಅಕ್ಕನವರು ಮಾತನಾಡಿದರು.