ಮುದ್ದೇಬಿಹಾಳ : ಇಂದು ೫ ನೇ ತಾಲೂಕ ಸಾಹಿತ್ಯ ಸಮ್ಮೇಳನ ಜಾತ್ರೆ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ :ಮುದ್ದೇಬಿಹಾಳ ತಾಲೂಕ ೫ ನೇ ಸಾಹಿತ್ಯ ಸಮ್ಮೇಳನಕ್ಕೆ ಮುದ್ದೇಬಿಹಾಳ ಪಟ್ಟಣ ಸಜ್ಜಾಗಿದೆ.
ಸಾಹಿತ್ಯ ಸಮ್ಮೇಳನ ಅಂಗವಾಗಿ ಪಟ್ಟಣದಲ್ಲಿಯ ವಿದ್ಯುತ್ ಕಂಬಗಳಿಗೆ ಅರಿಷಿಣ ಕುಂಕುಮದ ನಾಡಧ್ವಜದ ಬಟ್ಟೆಯಿಂದ ಅಲಂಕೃತದಿಂದ ಕಂಗೂಳಿಸುತ್ತಿದೆ.
ಶನಿವಾರ ಬೆಳಗ್ಗೆ 7:30 ಕ್ಕೆ ರಾಷ್ಟ್ರಧ್ವಜಾರೋಹಣ, ನಾಡ ಧ್ವಜಾರೋಹಣ, ಪರಿಷತ್ತಿನ ಧ್ವಜಾರೋಹಣ, ಸಮ್ಮೇಳನದ ಪ್ರಧಾನ ವೇದಿಕೆಗಳ ಉದ್ಘಾಟನೆ, ಬೆಳಗ್ಗೆ 8;30 ಕ್ಕೆ ಸಮ್ಮೇಳನಾಧ್ಯಕ್ಷ ಅಶೋಕ ಮಣಿ ಮೆರವಣಿಗೆ ಪಟ್ಟಣದ ಶ್ರೀ ಬನಶಂಕರಿ ದೇವಾಲಯದಿಂದ ಬಸವೇಶ್ವರ ವೃತ್ತ ಮಾರ್ಗವಾಗಿ ವಿಬಿಸಿ ಸಿದ್ದೇಶ್ವರ ವೇದಿಕೆಯವರಗೆ ಮಾಡಲಾಗುತ್ತದೆ.
ಬೆಳಗ್ಗೆ ೧೦;೩೦ ಕ್ಕೆ ಸಮ್ಮೇಳನದ ಉದ್ಘಾಟನೆ , ಮೊದಲ ಗೋಷ್ಠಿ ವಚನ ಗೋಷ್ಠಿ 12;30 ರಿಂದ ಮಧ್ಯಾಹ್ನ 2 ವರಗೆ ಹಾಗೂ ವಿವಿಧ ಲೇಖಕರ ಪುಸ್ತಕಗಳ ಲೋಕಾರ್ಪಣೆ, ಎರಡನೇ ಗೋಷ್ಠಿ ಕವಿಗೋಷ್ಠಿ ಮಧ್ಯಾಹ್ನ 2 ರಿಂದ 4 ವರಗೆ , ೩ ನೇ ಗೋಷ್ಠಿ ಜಾನಪದ ಗೋಷ್ಠಿ ಹಾಗೂ ವಿವಿಧ ಲೇಖಕರ ಪುಸ್ತಕ ಲೋಕಾರ್ಪಣೆ ಸಾಯಂಕಾಲ 4 ರಿಂದ 5;30 ವರಗೆ.
ಕರ್ನಾಟಕ ಸುವರ್ಣ ಸಂಭ್ರಮ 50 ರ ನಿಮಿತ್ಯ ಕಸಾಪದಿಂದ ವಿಶೇಷ ಗೌರವ ಪುರಸ್ಕಾರ ಸಾಯಂಕಾಲ 5:30 ರಿಂದ 6;15 ವರಗೆ . ಸಂಜೆ 6;15 ರಿಂದ 6:30 ವರಗೆ ಬಹಿರಂಗ ಅಧಿವೇಶನ, ಸಾಯಂಕಾಲ 6:30 ರಿಂದ ಸಂಜೆ 7 ವರಗೆ ಸಮಾರೂಪ ಸಮಾರಂಭ, ರಾತ್ರಿ 7 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಸಾಹಿತ್ಯ ಜಾತ್ರೆಯಲ್ಲಿ ಸಚಿವರು,ಶಾಸಕರು, ರಾಜಕೀಯ ನಾಯಕರು, ಸಾಹಿತ್ಯಗಳು ಭಾಗವಹಿಸುವರು ಎಂದು ಕಸಾಪ ತಾಲೂಕು ಅಧ್ಯಕ್ಷ ಕಾಮರಾಜ ಬಿರಾದಾರ ಅವರು ತಿಳಿಸಿದ್ದಾರೆ.