ಸರಕಾರಿ ನೌಕರರ ಸಂಘ ಇಂಡಿಘಟಕ ವತಿಯಿಂದ ಪ್ರತಿಭಟನೆ
ಇಂಡಿ : ಸಾರ್ವಜನಿಕ ಸರಕಾರಿ ರಸ್ತೆ ಅಳತೆ ಮಾಪನ ಮಾಡಲು ಹೊದ ಭೂಮಾಪಕ ಮಹಾಂತೇಶ ಸಜ್ಜನ ಇವರ ಮೇಲೆ ಹಲ್ಲೆ ಮಾಡಿದ ಘಟನೆ ಖಂಡಿಸಿ ಬುಧವಾರ ರಾಜ್ಯ ಸರಕಾರಿ ನೌಕರರ ಸಂಘದ ಘಟಕ ಇಂಡಿ ವತಿಯಿಂದ ಪಟ್ಟಣದ ಮಿನಿ ವಿಧಾನಸೌಧ ಎದುರು ಪ್ರತಿಭಟನೆ ನಡೆಸಿದರು.
ಅಲ್ಲಿ ಮಾತನಾಢಿದ ತಾಲೂಕು ಸರಕಾರಿ ನೌಕರರ ಸಂಘದ ಇಂಡಿ ಘಟಕದ ಅಧ್ಯಕ್ಷ ಬಸವರಾಜ ರಾಹೂರ ಮಾತನಾಡಿ ಭೂಮಾಪಕ ಮಹಾಂತಪ್ಪ ಸಜ್ಜನ ಇವರ ಮೇಲೆ ಹಲ್ಲೆ ಮಾಡಿರುವದು ಭೂಮಾಪಕರು ಮಾನಸಿಕವಾಗಿ ನೊಂದುಕೊAಡಿದ್ದಾರೆ. ತಾಲೂಕಿನಲ್ಲಿ ಸರಕಾರಿ ನೌಕರರ ಮೇಲೆ ಮೇಲಿಂದ ಮೇಲೆ ಹಲ್ಲೆಗಳು ನಡೆಯುತ್ತಿದ್ದು ನೌಕರಿ ಮಾಡುವದು ತೊಂದರೆ ಯಾಗುತ್ತಿದೆ. ಹಲ್ಲೆ ಮಾಡಿದವರ ಮೇಲೆ ಕ್ರಮ ಕೈಕೊಳ್ಳಬೇಕು. ಇಲ್ಲದಿದ್ದರೆ ತಾಲೂಕಿನ ಎಲ್ಲ ಸರಕಾರಿ ನೌಕರರು ಉಗ್ರ ಪ್ರತಿಭಟನೆ ಮಾಡಲಾಗುವದು ಎಂದರು.
ತಾಲೂಕಾ ಭೂಮಾಪಕರ ಸಂಘದ ಅಧ್ಯಕ್ಷ ಯಮನೇಶ ಬಿರಾದಾರ, ರವಿ ಗಿಣ ್ಣ, ಜಿಲ್ಲಾ ಭೂಮಾಪಕರ ಸಂಘದ ಅಧ್ಯಕ್ಷ ಎ.ಎಚ್.ಮುಲ್ಲಾ , ಗಂಗಾಧರ ಗುಜ್ಜರ, ವಿನಾಯಕ ಕುಲಕಣ ð ಹಲ್ಲೆ ಖಂಡಿಸಿ ಮಾತನಾಡಿದರು.
ಪ್ರತಿಭಟನೆಯಲ್ಲಿ ಎಸ್.ಆರ್.ಹಿರೇಮಠ, ಸಂಜವಾಡ, ಬಿ.ಎಸ್. ಮಜ್ಜಗೆ, ಆರ್.ಸಿ.ಲಚ್ಯಾಣ, ವಿರೇಶ ಜೋಕುಮಾರ, ಎಸ್.ವಿ.ಹರಳಯ್ಯ, ಸಿದ್ದಾರ್ಥ ನಾಯಿಕೊಡಿ, ಗುರುಶಾಂತ ಕುರಲೆ, ವಿಜಯಲಕ್ಷಿö್ಮÃ ಕಲ್ಯಾಣಕರ, ದ್ರಾಕ್ಷಾಯಿಣ ಕಾಚಾಪುರ, ಜ್ಯೋತಿ ಕುಂದರಗಿ, ಲಕ್ಷಿö್ಮÃ ಶಿವೂರ ಮತ್ತಿತರಿದ್ದರು.
ಗ್ರೇಡ್ ೨ ತಹಸೀಲ್ದಾರ ಧನಪಾಲಶೆಟ್ಟಿ ದೇವೂರ ಇವರಿಗೆ ಮನವಿ ಸಲ್ಲಿಸಿದರು.
ಇಂಡಿಯ ಭೂಮಾಪಕ ಮಹಾಂತೇಶ ಸಜ್ಜನ ಇವರ ಮೇಲೆ ಹಲ್ಲೆ ಮಾಡಿದ ಘಟನೆ ಖಂಡಿಸಿ ಬುಧವಾರ ರಾಜ್ಯ ಸರಕಾರಿ ನೌಕರರ ಸಂಘದ ಘಟಕ ಇಂಡಿ ವತಿಯಿಂದ ಪಟ್ಟಣದ ಮಿನಿ ವಿಧಾನಸೌಧ ಎದುರು ಪ್ರತಿಭಟನೆ ನಡೆಸಿದರು.