ಭೂ ಮಾಪಕರ ಮೇಲೆ ಏಕಾಏಕಿ ಮಾರಣಾಂತಿಕ ಹಲ್ಲೆ
ಇಂಡಿ : ಸಾರ್ವಜನಿಕ ಸರಕಾರಿ ರಸ್ತೆ ಅಳತೆ ಪಾಪನ ಮಾಡಲು ಹೊದ ಭೂಮಾಪರೊಬ್ಬರಿಗೆ ಎಕಾ ಏಕಿ ಮಾರಾಣಾಂತಿಕವಾಗಿ ಹಲ್ಲೆ ಮಾಡಿದ ಘಟನೆ ಲೋಣ ಬಿಕೆ ಗ್ರಾಮದಲ್ಲಿ ಮಂಗಳವಾರ ಸಂಜೆ ೫ ಗಂಟೆಗೆ ನಡೆದಿದೆ.
ಘಟನೆ ವಿವರ: ಲೋಣ .ಬಿ.ಕೆ. ಗ್ರಾಮದ ಸರ್ವೆ.ನಂ ೩೪೧ ಮತ್ತು ೩೪೨ರಲ್ಲಿನ ಸರಕಾರಿ ರಸ್ತೆ ಅಳತೆ ಸಲುವಾಗಿ ಚಡಚಣ ತಹಸಿಲ್ದಾರ ಆದೇಶದಂತೆ ಇಂಡಿ ಭೂಪಾನ ಇಲಾಖೆಯ ಭೂಮಾಪಕ ಮಹಾಂತಪ್ಪ ಶ್ರೀಶೈಲ ಸಜ್ಜನ ಇವರು ಸರ್ವೇ ಸ್ಥಳಕ್ಕೆ ಹೋಗಿದ್ದಾರೆ. ಆಗ ಭೂಮಾಪನ ಮಾಡಬೇಕು ಎನ್ನುವಷ್ಟರಲ್ಲಿ ಸ್ಥಳಿಯ ಗ್ರಾಮದವರಾದ ವಿಕಾಸ ಕಲ್ಲಣ್ಣಗೌಡ ಪಾಟೀಲ, ರವೀಂದ್ರ ಗುರಪ್ಪ ಕಾಂಬ್ಳೆ, ಸಿದ್ದರಾಮ ಗೀರಮಲ್ಲ ಉಟಗಿ, ವಿಕಾಸ ಜೀವಪ್ಪ ಕಾಂಬಳೆ ಹಾಗೂ ಇತರರು ಬಂದು ಅಳತೆ ಕೆಲಸಕ್ಕೆ ಅಡ್ಡಿ ಪಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ದೈಹಿಕವಾಗಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಆದ್ದರಿಂದ ಹಲ್ಲೆ ಮಾಡಿವರು ವಿರುದ್ದ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಸರಕಾರಿ ಕೇಲಸಕ್ಕೆ ಭದ್ರತೆ ಒದಗಿಸುವುದರ ಜೊತೆಗೆ ಈ ಪ್ರಕರಣವನ್ನು ಸರಕಾರ ಗಂಭಿರವಾಗಿ ಪರಿಗಣ ಸಬೇಕು ಎಂದು ಭೂಮಾಪನ ಇಲಾಖೆಯ ಸಿಬ್ಬಂದಿ ವರ್ಗದವರು ಆಗ್ರಹಿಸಿದ್ದಾರೆ.
ಮಾರಾಣಾಂತಿಕವಾಗಿ ಹಲ್ಲೆಗೊಳಗಾದ ಮಹಾಂತಪ್ಪ ಶ್ರೀಶೈಲ ಸಜ್ಜನ ಇವರನ್ನು ಇಂಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಝಳಕಿ ಪೊಲೀಸ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.
ಇಂಡಿ ಸರಕಾರಿ ಆಸ್ಪತ್ರೆಯಲ್ಲಿ ಮಾರಾಣಾಂತಿಕವಾಗಿ ಹಲ್ಲೆಗೊಳಗಾದ ಮಹಾಂತಪ್ಪ ಶ್ರೀಶೈಲ ಸಜ್ಜನ ಇವರು ಚಿಕಿತ್ಸೆ ಪಡೆಯುತ್ತಿರುವುದು.